ಆ್ಯಂಬುಲೆನ್ಸ್‌ಗೆ ದಾರಿ ಬಿಡದೇ ಸಾಗಿದ ಕಾರು ಮಾಲೀಕ, ಮನೆ ಸೇರುವಷ್ಟರಲ್ಲೇ ಕಾದಿತ್ತು ಆಘಾತ!

ತುರ್ತಾಗಿ ಸಾಗುತ್ತಿದ್ದ ಆ್ಯಂಬುಲೆನ್ಸ್‌ಗೆ ಕಾರಿನಲ್ಲಿ ಸಾಗುತ್ತಿದ್ದ ವ್ಯಕ್ತಿ ದಾರಿ ಬಿಡಲೇ ಇಲ್ಲ. ಸೈರನ್, ಹಾರ್ನ್ ಏನೇ ಮಾಡಿದರೂ ದಾರಿ ಬಿಡಲೇ ಇಲ್ಲ. ಆ್ಯಂಬುಲೆನ್ಸ್‌ಗಿಂತ ಮುಂದೆ ಸಾಗಿದ ಕಾರು ಮಾಲೀಕ ಮನೆ ಸೇರುವಷ್ಟರಲ್ಲೇ ಆಘಾತ ಎದುರಾಗಿದೆ. ಇದೀಗ ಗಳಗಳನೇ ಅತ್ತು ಕೂಗಿದರೂ ಕಾಲ ಮಿಂಚಿತ್ತು.

Kerala police impose hefty fine cancelled licence to car owner after blocking way of ambulance ckm

ತಿರುವನಂತಪುರಂ(ನ.16) ಕೇರಳದಲ್ಲೊಂದು ವಿಡಿಯೋ ಭಾರಿ ವೈರಲ್ ಆಗುತ್ತಿದೆ.ಆ್ಯಂಬುಲೆನ್ಸ್‌ ಸೇವೆಗೆ ಅಡ್ಡಿಪಡಿಸಿದ ವಿಡಿಯೋ ಇದಾಗಿದೆ. ತುರ್ತಾಗಿ ತೆರಳುತ್ತಿದ್ದ ಆ್ಯಂಬುಲೆನ್ಸ್ ವಾಹನಕ್ಕೆ ಕಾರು ಮಾಲೀಕ ದಾರಿ ಬಿಡಲೇ ಇಲ್ಲ. ರೋಗಿಯನ್ನು ತುರ್ತಾಗಿ ಆಸ್ಪತ್ರೆ ದಾಖಲಿಸಬೇಕಿದ್ದ ಕಾರಣ ಆ್ಯಂಬುಲೆನ್ಸ್ ಸೈರನ್ ಹಾಕುತ್ತಲೇ ಸಾಗಿತ್ತು. ಬಹುತೇಕ ಎಲ್ಲಾ ವಾಹನಗಳು ದಾರಿ ಬಿಟ್ಟುಕೊಟ್ಟಿತ್ತು. ಆದರೆ ಮಾರುತಿ ಸಿಯಾಝ್ ಕಾರಿನಲ್ಲಿ ತೆರಳುತ್ತಿದ್ದ ವ್ಯಕ್ತಿ ಮಾತ್ರ ಉದ್ದೇಶಪೂರ್ವಕವಾಗಿ ದಾರಿ ಬಿಟ್ಟಿಲ್ಲ. ಆ್ಯಂಬುಲೆನ್ಸ್‌ಗಿಂತ ಫಾಸ್ಟ್ ಡ್ರೈವಿಂಗ್ ಮಾಡಿದ್ದೇನೆ ಅನ್ನೋ ಜಂಭದಿಂದ ಮನೆ ಸೇರಿಕೊಂಡ ಕಾರು ಮಾಲೀಕನಿಗೆ ಆಘಾತ ಎದುರಾಗಿದೆ. ಈತ ಇನ್ನು ಯಾವುದೇ ವಾಹನ ಒಡಿಸಲು ಸಾಧ್ಯವಿಲ್ಲ.

ಈ ವಿಡಿಯೋ ಪ್ರಕಾರ ಆ್ಯಂಬುಲೆನ್ಸ್‌ಗೆ ದಾರಿ ಬಿಡದ ಕಾರು ಮಾಲೀಕನ ನಡೆಯನ್ನು ವಿಡಿಯೋ ಮಾಡಲಾಗಿದೆ. ಆ್ಯಂಬುಲೆನ್ಸ್‌ ಮುಂಭಾಗದಲ್ಲಿ ಕುಳಿತ ಸಹಾಯಕ ಸಿಬ್ಬಂದಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡಿದ್ದಾರೆ. ಮಾಲೀಕನ ಪತ್ತೆ ಹಚ್ಚಿ ನೇರವಾಗಿ ಮನೆಗೆ ತೆರಳಿದ ಪೊಲೀಸರು ಬರೋಬ್ಬರಿ 2 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಜೊತೆಗೆ ಈತನ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡಿದ್ದಾರೆ ಎಂದು ಈ ವಿಡಿಯೋ ಮಾಹಿತಿ ನೀಡುತ್ತಿದೆ. ಆದರೆ ಈ ವಿಡಿಯೋ ಕುರಿತು ಸ್ಪಷ್ಟ ಮಾಹಿತಿ, ಅಧಿಕೃತ ಪ್ರಕಟಣೆಗಳು ಲಭ್ಯವಿಲ್ಲ.

43 ವರ್ಷದ ಬಳಿಕ ಡ್ರೈವಿಂಗ್ ಟೆಸ್ಟ್ ಪಾಸ್ ಆದ ಬಾಲಿವುಡ್ ನಟ, ನಿಮ್ಮ ಡಿಎಲ್ ಕ್ಯಾನ್ಸಲ್ ಎಂದಿದ್ಯಾಕೆ?

ಆ್ಯಂಬುಲೆನ್ಸ್ ಮುಂಭಾಗ ದಾರಿ ನೀಡಿದ ಅಡ್ಡಿಪಡಿಸುತ್ತಾ ಸಾಗಿದ ವಾಹನ ರಿಜಿಸ್ಟ್ರೇಶನ್ ಕೇರಳ. ಇನ್ನು ಕೆರಳ ಪೊಲೀಸರು ಈ ಕಾರು ಮಾಲೀಕನ  ಮನೆಯಲ್ಲಿ ತೆಗೆದ ಫೋಟೋ ಕೂಡ ಹರಿದಾಡುತ್ತಿದೆ. ಕಾರಿನ ಪಕ್ಕದಲ್ಲೇ ಕಾರು ಮಾಲೀಕ ಹಾಗೂ ಪೊಲೀಸ್ ನಿಂತಿರುವ ಫೋಟೋ ಲಭ್ಯವಾಗಿದೆ. ಹಲವು ಕಿಲೋಮೀಟರ್ ದೂರದ ವರೆಗೆ ದಾರಿ ಬಿಡದೆ ಸಾಗಿದ್ದಾನೆ. ಅದೆಷ್ಟೇ ಪ್ರಯತ್ನ ಪಟ್ಟರೂ ಆ್ಯಂಬುಲೆನ್ಸ್‌ಗೆ ದಾರಿ ಬಿಟ್ಟಿಲ್ಲ. ಈ ವಿಡಿಯೋದಲ್ಲಿ ಕಾರು ಮಾಲೀಕ ಉದ್ದೇಶಪೂರ್ವಕವಾಗಿ ಆ್ಯಂಬುಲೆನ್ಸ್‌ಗೆ ದಾರಿ ಬಿಟ್ಟಿಲ್ಲ ಅನ್ನೋದು ಸ್ಪಷ್ಟವಾಗಿದೆ. 

ಪಟ್ಟಣ ಪ್ರವೇಶಿಸುತ್ತಿದ್ದಂತೆ ಆ್ಯಂಬುಲೆನ್ಸ್ ವಿಪರೀತ ಹಾರ್ನ್ ಮಾಡಿ ಕಾರನ್ನು ಓವರ್‌ಟೇಕ್ ಮಾಡಲಾಗಿದೆ. ಓವರ್ ಟೇಕ್ ಮಾಡಿದ ಬಳಿಕ ತುರ್ತಾಗಿ ಸಾಗುತ್ತಿದ್ದೇವೆ, ಹಾರ್ನ್ ಸೈರನ್ ಎಲ್ಲವನ್ನೂ ಹಾಕಿದ್ದೇವೆ ಆದರೂ ದಾರಿ ಬಿಡಲು ಪ್ರಯಾಸವೇಕೆ ಎಂದು ಪ್ರಶ್ನಿಸಿದ್ದಾರೆ. ಆದರೆ ಧಿಮಾಕು ತೋರಿಸಿದ ಕಾರು ಮಾಲೀಕ ಸಾಗಿದ್ದಾನೆ.  ಆದರೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಕಾರಣ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡಿದ್ದಾರೆ. 

 

 

ಮೋಟಾರು ವಾಹನದ ನಿಯಮದ ಪ್ರಕಾರ ದಾರಿಯಲ್ಲಿ ಆ್ಯಂಬುಲೆನ್ಸ್, ಅಗ್ನಿಶಾಮಕ ದಳ ಹಾಗೂ ತುರ್ತಾಗಿ ಸಾಗುವ ಪೊಲೀಸ್ ವಾಹನಕ್ಕೆ ದಾರಿ ಬಿಡಬೇಕು. ಈ ಪೈಕಿ ಆ್ಯಂಬುಲೆನ್ಸ್ ಹಾಗೂ ಅಗ್ನಿಶಾಮಕ ದಳ ವಾಹನಕ್ಕೆ ದಾರಿ ಬಿಡದಿದ್ದರೆ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡುವ ಅಧಿಕಾರ ಪೊಲೀಸರಿಗಿದೆ. ಇಷ್ಟೇ ಅಲ್ಲ ಕನಿಷ್ಠ 10,000 ರೂಪಾಯಿ ದಂಡ ವಿಧಿಸಲಾಗುತ್ತದೆ. 2ನೇ ಬಾರಿ ಇದೇ ಪ್ರಕರಣ ದಾಖಲಾದರೆ 25,000 ರೂಪಾಯಿ ದಂಡ ಹಾಗೂ ಲೈಸೆನ್ಸ್ ರದ್ದುಗೊಳ್ಳಲಿದೆ. ಆದರೆ ಪ್ರಕರಣದ ಗಂಭೀರತೆಯನ್ನು ಮನಗಂಡು ಪೊಲೀಸರು ಮೊದಲ ಉಲ್ಲಂಘನೆಯಲ್ಲೇ ದುಬಾರಿ ದಂಡ ಹಾಗೂ ಲೈಸೆನ್ಸ್ ರದ್ದುಗೊಳಿಸುವ ಅಧಿಕಾರವಿದೆ. ಆ್ಯಂಬುಲೆನ್ಸ್, ಅಗ್ನಿಶಾಮಕ ದಳ ಹಾಗೂ ಪೊಲೀಸರು ತುರ್ತು ಸೇವೆ ನೀಡುತ್ತಾರೆ. ಇಲ್ಲಿ ಸಮಯ, ದಾರಿ ಅಥವಾ ಇನ್ಯಾವುದೇ ರೀತಿಯಲ್ಲಿ ಅಡ್ಡಿಯಾದರೆ ಪರಿಸ್ಥಿತಿ ಗಂಭೀರವಾಗು ಸಾಧ್ಯತೆ ಇದೆ. ಹೀಗಾಗಿ ಈ ಮೂರು ಸೇವೆಗಳಿಗೆ ರಸ್ತೆಯಲ್ಲಿ ಪ್ರಾಮುಖ್ಯತೆ ನೀಡಬೇಕು.

30,000 ಮೌಲ್ಯದ ಸ್ಕೂಟರ್‌ಗೆ 3.2 ಲಕ್ಷ ರೂ ಟ್ರಾಫಿಕ್ ದಂಡ, ವಿನಾಯಿತಿ ಕೇಳಿದ ಬೆಂಗಳೂರಿಗನಿಗೆ ವಾರ್ನಿಂಗ್!
 

Latest Videos
Follow Us:
Download App:
  • android
  • ios