Asianet Suvarna News Asianet Suvarna News

New Covid-19 variant : ಫ್ರಾನ್ಸ್ ನಲ್ಲಿ ಪತ್ತೆಯಾಗಿದೆ IHU, ಒಮಿಕ್ರಾನ್ ಗಿಂತ ಡೇಂಜರ್!

ಫ್ರಾನ್ಸ್ ನಲ್ಲಿ ಪತ್ತೆಯಾಗಿರುವ ಐಎಚ್ ಯು ವೈರಸ್
ಒಮಿಕ್ರಾನ್ ಗಿಂತ ಹೆಚ್ಚು ಬೇಗ ಸಾಂಕ್ರಾಮಿಕ
ಫ್ರಾನ್ಸ್ ನಲ್ಲಿ 12 ಕೇಸ್ ಗಳು ಪತ್ತೆ
 

scientists in France have identified a new more mutated strain that Omicron Named as IHU san
Author
Bengaluru, First Published Jan 4, 2022, 4:47 PM IST

ಪ್ಯಾರಿಸ್ (ಜ.4): ಭಾರತದಲ್ಲಿ ಒಮಿಕ್ರಾನ್ (Omicron) ಹಾಗೂ ಕೋವಿಡ್-19 (Covid-19) ಪ್ರಕರಣಗಳ ಸಂಖ್ಯೆಗಳಲ್ಲಿ ವ್ಯಾಪಕ ಏರಿಕೆ ಕಾಣುತ್ತಿರುವ ಹೊತ್ತಿಗಾಗಲೇ ಜಗತ್ತಿನೆಲ್ಲದೆ ಕೋವಿಡ್-19ನ ಹೊಸ ಹೊಸ ರೂಪಾಂತರಗಳು ಪತ್ತೆಯಾಗುತ್ತಿವೆ. ಈವರೆಗೂ ಒಮಿಕ್ರಾನ್ ಹೊರತಾಗಿ ಡೆಲ್ಮಿಕ್ರಾನ್ (Delmicron) ಹಾಗೂ ಫ್ಲೊರೊನಾ (Florona) ಹೆಸರುಗಳನ್ನು ಮಾತ್ರವೇ ನಮ್ಮ ಜನರು ಕೇಳಿದ್ದರು. ಆದರೆ, ಫ್ರಾನ್ಸ್ (France) ದೇಶವು ನಮ್ಮಲ್ಲಿ ಕೋವಿಡ್-19ನ ಹೊಸ ರೂಪಾಂತರ ಪತ್ತೆಯಾಗಿದೆ ಎಂದು ಘೋಷಣೆ ಮಾಡಿದ್ದು ಇದಕ್ಕೆ ಐಎಚ್ ಯು (IHU) ಎಂದು ಹೆಸರನ್ನಿಟ್ಟಿದೆ. ವಿಜ್ಞಾನಿಗಳು ಕ್ಯಾಮರೂನ್ (Cameroon) ಪ್ರಯಾಣ ಮಾಡಿದ್ದ ವ್ಯಕ್ತಿಯೊಂದಿಗೆ ಐಎಚ್ ಯು ವೈರಸ್ ಅನ್ನು ಲಿಂಕ್ ಮಾಡಿದ್ದು, ಡಿಸೆಂಬರ್ 10 ರಂದು ಫ್ರಾನ್ಸ್ ನಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ ಎಂದಿದ್ದಾರೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆ ಈ ವೈರಸ್ ಅನ್ನು ತನಿಖೆಯ ಅಡಿಯಲ್ಲಿರುವ ರೂಪಾಂತರ ಎಂದು ವರ್ಗೀಕರಣ ಮಾಡಿಲ್ಲದ ಕಾರಣ ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡುವುದು ತಡವಾಗಿದೆ. ಹೊಸ ರೂಪಾಂತರದಲ್ಲಿ ಕನಿಷ್ಠ 12 ಕೇಸ್ ಗಳು ಫ್ರಾನ್ಸ್ ನ ಮಾರ್ಸಿಲ್ಲೆಸ್ ಬಳಿ ವರದಿಯಾಗಿದೆ.

ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತ ಕೋವಿಡ್-19 ಸೋಂಕಿನ ಉಲ್ಬಣಕ್ಕೆ ಕಾರಣವಾಗಿರುವ ಒಮಿಕ್ರಾನ್ ಹೆಸರಿನಲ್ಲಿ ಕರೆಯಲ್ಪಡುವ ರೂಪಾಂತರಿ ವೈರಸ್ ನೊಂದಿಗೆ ಹೋರಾಟ ಮಾಡುತ್ತಿದೆ. ಇದರ ನಡುವೆಯೇ ಫ್ರಾನ್ಸ್ ವಿಜ್ಞಾನಿಗಳು ಒಮಿಕ್ರಾನ್ ಗಿಂತ ವೇಗವಾಗಿ ಹರಡಬಲ್ಲ, ಹೆಚ್ಚು ರೂಪಾಂತರವಾದ ತಳಿಯನ್ನು ಗುರುತು ಮಾಡಿದ್ದಾರೆ. ಐಎಚ್ ಯು (IHU) ಎಂದು ಹೆಸರಿಸಲಾದ, B.1.640.2 ರೂಪಾಂತರವನ್ನು ಇನ್‌ಸ್ಟಿಟ್ಯೂಟ್ IHU ಮೆಡಿಟರೇನಿ ಇನ್‌ಫೆಕ್ಷನ್‌ನಲ್ಲಿನ ಶಿಕ್ಷಣ ತಜ್ಞರು ಕಂಡುಹಿಡಿದಿದ್ದಾರೆ. ಐಎಚ್ ಯು ವೈರಸ್ 46 ರೂಪಾಂತರಗಳನ್ನು ಹೊಂದಿದೆ ಎಂದು ಸಂಶೋಧಕರು ಹೇಳಿದ್ದು ಇದು ಒಮಿಕ್ರಾನ್ ಗಿಂತಲೂ ಅಧಿಕವಾಗಿದೆ. ಅಲ್ಲದೆ, ಈ ವೈರಸ್ ಲಸಿಕೆಗಳು ಮತ್ತು ಸಾಂಕ್ರಾಮಿಕ ರೋಗಗಳಿಗೆ ಹೆಚ್ಚು ನಿರೋಧಕವಾಗಿಸುತ್ತದೆ.  ಹೊಸ ರೂಪಾಂತರದ ಕನಿಷ್ಠ 12 ಪ್ರಕರಣಗಳು ಮಾರ್ಸಿಲ್ಲೆಸ್ ಬಳಿ ವರದಿಯಾಗಿದ್ದು, ಆಫ್ರಿಕನ್ ದೇಶ ಕ್ಯಾಮರೂನ್‌ಗೆ ನಡೆಸಿದ ಪ್ರಯಾಣದೊಂದಿಗೆ ಇದನ್ನು ಲಿಂಕ್ ಮಾಡಲಾಗಿದೆ.

ಪ್ರಸ್ತುತ ಇರುವ ನಿಟ್ಟಿನಲ್ಲಿ ಒಮಿಕ್ರಾನ್ ರೂಪಾಂತರವು ಹೆಚ್ಚಿನ ಪ್ರಬಲ ತಳಿಯಾಗಿದ್ದು, ಐಎಚ್ ಯು ರೂಪಾಂತರ ವೈರಸ್ ನ ಎಚ್ಚರಿಕೆಯೂ ವೇಗವಾಗಿ ಏರುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.  B.1.640.2 ಅನ್ನು ಈವರೆಗೂ ಇತರ ದೇಶಗಳಲ್ಲಿ ಗುರುತಿಸಲಾಗಿಲ್ಲ ಅಥವಾ ವಿಶ್ವ ಆರೋಗ್ಯ ಸಂಸ್ಥೆ (WHO) ತನಿಖೆಯ ಅಡಿಯಲ್ಲಿರುವ ಒಂದು ರೂಪಾಂತರ ಎಂದು ಈವರೆಗೂ ವರ್ಗೀಕರಣ ಮಾಡಿಲ್ಲ.
 


ಹೊಸ ವೈರಸ್ ನ ಕುರಿತಾಗಿ ಮೆಡ್ ರೆಕ್ಸಿವ್ ಅಧಿಕೃತ ವರದಿಯನ್ನೂ ಪ್ರಕಟ ಮಾಡಿದ್ದು, ಇದರಲ್ಲಿನ ಅಂಶಗಳ ಬಗ್ಗೆ ಸಂಪೂರ್ಣ ವಿವರಣಾತ್ಮಕವಾಗಿ ನೀಡಲಾಗಿದೆ. 
ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎರಿಕ್ ಫೀಗಲ್-ಡಿಂಗ್ (Epidemiologist Eric Feigl-Ding ) ಅವರು ಟ್ವಿಟರ್ ನಲ್ಲಿ ಈ ಕುರಿತಾಗಿ ಬರೆದುಕೊಂಡಿದ್ದು, ಪ್ರಸ್ತುತ ಜಗತ್ತಿನಲ್ಲಿ ಹೊಸ ರೂಪಾಂತರಗಳು ಹೊರಹೊಮ್ಮುತ್ತಲೇ ಇರುತ್ತವೆ. ಅದರರ್ಥ ಎಲ್ಲವೂ ಅಪಾಯಕಾರಿ ಎಂದಲ್ಲ. ಮೂಲ ವೈರಸ್‌ಗೆ ಸಂಬಂಧಿಸಿದಂತೆ ಅದು ಹೊಂದಿರುವ ರೂಪಾಂತರಗಳ ಸಂಖ್ಯೆಯಿಂದಾಗಿ ಗುಣಿಸುವ ಸಾಮರ್ಥ್ಯವು ಒಂದು ರೂಪಾಂತರವನ್ನು ಹೆಚ್ಚು ಪ್ರಸಿದ್ಧ ಮತ್ತು ಅಪಾಯಕಾರಿಯಾಗಿಸುತ್ತದೆ' ಎಂದಿದ್ದಾರೆ.

New Corona Variant Florona : ಇಸ್ರೇಲ್ ನಲ್ಲಿ ಪತ್ತೆಯಾಗಿರುವ ವೈರಸ್, ಇದರ ಬಗ್ಗೆ ನಿಮಗೆಷ್ಟು ಗೊತ್ತು?
ಕಳೆದ ವರ್ಷ ನವೆಂಬರ್ 24 ರಂದು ದಕ್ಷಿಣ ಆಫ್ರಿಕಾದಿಂದ (South Africa) ಪ್ರಕಟವಾದ ಮಾದರಿಯಲ್ಲಿ ಓಮಿಕ್ರಾನ್ ರೂಪಾಂತರವು ಪತ್ತೆಯಾಗಿದೆ. ಅಂದಿನಿಂದ, ಇದು 100 ಕ್ಕೂ ಹೆಚ್ಚು ದೇಶಗಳಿಗೆ ಹರಡಿದ್ದು, ಭಾರತದಲ್ಲಿ 1900ಕ್ಕೂ ಅಧಿಕ ಮಂದಿಯಲ್ಲಿ ಒಮಿಕ್ರಾನ್ ಕಾಣಿಸಿಕೊಂಡಿದೆ.

Follow Us:
Download App:
  • android
  • ios