ಮಿರ್ಜಾಪುರ್(ಫೆ.04): ಶಾಲೆಯ ಬಿಸಿಯೂಟ ತಯಾರಿಸುವ ಕಡಾಯಿಯಲ್ಲಿ ಮೂರು ವರ್ಷದ ಮಗುವೊಂದು ಬಿದ್ದು ಅಸುನೀಗಿರುವ ದಾರುಣ ಘಟನೆ ಉತ್ತರಪ್ರದೇಶದ ಮಿರ್ಜಾಪುರ್ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ಲಾಲ್’ಗಂಜ್ ಬಳಿಯಿರುವ ರಾಂಪುರ್ ಅಟ್ಟಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ವೇಳೆ, ಆಟ ಆಡುತ್ತಿದ್ದ ಮೂರು ವರ್ಷದ ಪುಟ್ಟ ಕಂದ ಅಂಚಲ್ ಬಿಸಿ ಕಡಾಯಿಯಲ್ಲಿ ಬಿದ್ದು ಅಸುನೀಗಿದ್ದಾಳೆ.

ದೇಶಾದ್ಯಂತ 3 ವರ್ಷದಲ್ಲಿ ಬಿಸಿಯೂಟ ತಿಂದ 900 ಮಕ್ಕಳು ಅಸ್ವಸ್ಥ!

ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು, ಅಂಚಲ್’ಳನ್ನು ಶಾಲಾ ಸಿಬ್ಬಂದಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾಋಇಯಾಗದೇ ಮಗು ಮೃತಪಟ್ಟಿದೆ ಎಂಧು ಸ್ಪಷ್ಟಪಡಿಸಿದ್ದಾರೆ.

ಶೇ.80ರಷ್ಟು ಸುಟ್ಟ ಗಾಯಗಳಿಂದ ಬಳಲಿದ ಅಂಚಲ್ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾಳೆ ಎಂದು ಜಿಲ್ಲಾಸ್ಪತ್ರೆ ವೈದ್ಯರು ಖಚಿತಪಡಿಸಿದ್ದಾರೆ.

ಬಿಸಿಯೂಟ ಸೇವಿಸಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ಪೊಷಕರು ದೌಡು

ಇನ್ನು ಅಂಚಲ್ ಸಾವಿನ ಹಿನ್ನೆಲಯಲ್ಲಿ ಶಾಲಾ ಮುಖ್ಯೋಪಾಧ್ಯಯ ಸಂತೋಷ್ ಕುಮಾರ್ ಯಾದವ್ ಅವರನ್ನು ಅಮಾನತುಗೊಳಿಸಲಾಗಿದ್ದು, ಬಿಸಯೂಟ ಸಿಬ್ಬಂದಿ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.