ಅಪೌಷ್ಠಿಕತೆ ನಿವಾರಣೆಗಾಗಿ ನೀಡುತ್ತಿರುವ ಮಧ್ಯಾಹ್ನದ ಊಟ| ದೇಶಾದ್ಯಂತ 3 ವರ್ಷದಲ್ಲಿ ಬಿಸಿಯೂಟ ತಿಂದ 900 ಮಕ್ಕಳು ಅಸ್ವಸ್ಥ: ಕೇಂದ್ರ

ನವದೆಹಲಿ[ಜು.15]: ದೇಶಾದ್ಯಂತ ಶಾಲಾ ಮಕ್ಕಳಿಗೆ ಅಪೌಷ್ಠಿಕತೆ ನಿವಾರಣೆಗಾಗಿ ನೀಡುತ್ತಿರುವ ಮಧ್ಯಾಹ್ನದ ಊಟದಲ್ಲಿನ ಗುಣಮಟ್ಟದ ವ್ಯತ್ಯಾಸದಿಂದ ಕಳೆದ 3 ವರ್ಷಗಳಲ್ಲಿ 900 ಮಕ್ಕಳು ಅಸ್ವಸ್ಥಗೊಂಡಿದ್ದರು. ಆದರೆ ಇಂಥ ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೇಂದ್ರಾಡಳಿತ ಪ್ರದೇಶ ಸೇರಿದಂತೆ 15 ರಾಜ್ಯಗಳಿಂದ ಈ ಕುರಿತು ಒಟ್ಟು 35 ದೂರುಗಳು ಬಂದಿವೆ. ಮಧ್ಯಾಹ್ನದ ಬಿಸಿಯೂಟದ ಗುಣಮಟ್ಟದ ಬಗ್ಗೆ ತಕರಾರು ಸಲ್ಲಿಸಿವೆ. ಒಟ್ಟು 930 ಮಕ್ಕಳು ಅಸ್ವಸ್ಥಗೊಂಡು ಚಿಕಿತ್ಸೆಯಿಂದ ಸುಧಾರಿಸಿವೆ.

ಗುಣಮಟ್ಟದ ಆಹಾರ ಸಿದ್ಧಪಡಿಸಿ ಪೂರೈಸಲು ಸಂಬಂದಿಸಿದ ಎನ್‌ಜಿಒಗಳಿಗೆ ಕೇಂದ್ರ ನಿಯಮಾವಳಿ ರೂಪಿಸಿದ್ದು, ಆಹಾರವನ್ನು ಸ್ವತಃ ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿಯವರು ರುಚಿ ಪರೀಕ್ಷಿಸಿದ ನಂತರ ಮಕ್ಕಳಿಗೆ ಬಡಿಸಲು ನಿರ್ದೇಶನ ನೀಡಿದೆ ಎಂದು ಮಾನವ ಸಂಪನ್ಮೂಲ ಮಂತ್ರಾಲಯ ಮಾಹಿತಿ ನೀಡಿದೆ.