ಕಲಾಸಿಪಾಳ್ಯ ಮರ್ಡರ್: ಬ್ಲೇಡ್‌ನಿಂದ ಕತ್ತುಕೊಯ್ದು ತರಕಾರಿ ಮೂಟೆಯಲ್ಲಿ ತುಂಬಿಟ್ಟು ಹೋದ ಕಿರಾತಕ
ಬೆಂಗಳೂರಿನ ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆಯಲ್ಲಿ ಹಣದ ವಿಚಾರಕ್ಕೆ ಸ್ನೇಹಿತನ ಕತ್ತನ್ನು ಬ್ಲೇಡ್‌ನಿಂದ ಕೊಯ್ದು ತರಕಾರಿ ಮೂಟೆಯಲ್ಲಿ ತುಂಬಿಸಿಟ್ಟು ಹೋದ ಘಟನೆ ನಡೆದಿದೆ.
ಬೆಂಗಳೂರು (ನ.12): ಬೆಂಗಳೂರಿನ ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ತಮಿಳುನಾಡಿನ ಮೂಲದ ಇಬ್ಬರು ಸ್ನೇಹಿತರ ನಡುವೆ ಜಗಳ ಶುರುವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಕೋಪ ಅತಿರೇಕಕ್ಕೆ ತಿರುಗಿದಾಗ ಅದರಲ್ಲೊಬ್ಬ ತರಕಾರಿ ಚೀಲದ ದಾರ ಬಿಚ್ಚಲು ಇಟ್ಟಿದ್ದ ಬ್ಲೇಡ್‌ನಿಂದ ತನ್ನ ಸ್ನೇಹಿತನ ಕತ್ತನ್ನು ಕೊಯ್ದು ಕೊಲೆ ಮಾಡಿದ್ದಾನೆ. ನಂತರ ಏನು ಮಾಡಬೇಕೆಂದು ಗೊತ್ತಾಗದೇ ತರಕಾರಿ ಚೀಲದಲ್ಲಿ ತುಂಬಿಸಿಟ್ಟು ಅದಕ್ಕೆ ಬೆಂಕಿ ಹಾಕಿ ಹೋಗಿದ್ದಾನೆ.
ಹೌದು, ಹಣಕ್ಕಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕಲಾಸಿಪಾಳ್ಯದ ತರಕಾರಿ ಮಾರ್ಕೆಟ್ ನಲ್ಲಿ ಶನಿವಾರ ರಾತ್ರಿ ವೇಳೆ ಘಟನೆ ನಡೆದಿದೆ. ತನ್ನ ಸ್ನೇಹಿತನೇ ಬ್ಲೇಡ್‌ನಿಂದ ಕತ್ತು ಕುಯ್ದು ಕೊಲೆ ಮಾಡಿದ ಘಟನೆ ನಡೆದಿದೆ. ಕೊಲೆಯಾದ ದುರ್ದೈವಿಯನ್ನು ಸುಧಾರಣ್ (28) ಎಂದು ಗುರುತಿಸಲಾಗಿದೆ. ಈತನ ಸ್ನೇಹಿತ ವಿಜಯ್ ಕುಮಾರ್ ಎಂಬಾತನಿಂದ ಕೊಲೆಯ ಕುಕೃತ್ಯ ನಡೆದಿದೆ.
ಉಡುಪಿಯ ಒಂದೇ ಕುಟುಂಬದ ನಾಲ್ವರ ಹತ್ಯೆಗೆ ಸಿಕ್ತು ರೋಚಕ ಸುಳಿವು: ಕೊಲೆಗಡುಕನ ಕ್ಲ್ಯೂ ಕೊಟ್ಟ ಆಟೋ ಡ್ರೈವರ್!
ವಿಜಯಕುಮಾರ್ ಮತ್ತು ಸುಧಾರಣ್ ಇಬ್ಬರೂ ತರಕಾರಿ ಮಂಡಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಇವರಿಬ್ಬರೂ ತಮಿಳುನಾಡು ಮೂಲದವರಾಗಿದ್ದು, ಹಲವು ದಿನಗಳಿಂದ ಕಲಾಸಿಪಾಳ್ಯದ ತರಕಾರಿ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ ಇಬ್ಬರ ಮಧ್ಯೆ ಹಣಕ್ಕಾಗಿ ಜಗಳ ಶುರುವಾಗಿತ್ತು. ಜೇಬಿನಲ್ಲಿದ್ದ ಹಣ ಯಾಕ್ ತಗೊಂಡೆ ಎಂದು ಸುಧಾರಣ್ ತನ್ನ ಸಹಚರ ವಿಜಯಕುಮಾರ್ ಜೊತೆ ಜಗಳ ತೆಗೆದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಬ್ಲೇಡ್ ನಿಂದ ಕತ್ತು ಕೊಯ್ದಿದ್ದಾನೆ. ನಂತರ ಶವ ಚೀಲದಲ್ಲಿ ಹಾಕಿ ಬೆಂಕಿ ಹಚ್ಚಿ ಸುಟ್ಟು ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದರು. ಈಗ ಆರೋಪಿಯನ್ನ ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಕಲಾಸಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಮಲಗಿದ್ದ ವ್ಯಕ್ತಿ ಮೇಲೆ ಕಲ್ಲು ಎತ್ತಿಹಾಕಿ ಕೊಲೆ:
ಬೆಂಗಳೂರು(ನ.12): ಮದ್ಯದ ಅಮಲಿನಲ್ಲಿ ರಸ್ತೆ ಬದಿ ಮಲಗಿದ್ದ ಹೋಟೆಲ್ ಕಾರ್ಮಿಕನ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಕೊಲೆಗೈದಿರುವ ಘಟನೆ ರಾಜಾಜಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಮೂಲದ ಸುರೇಶ್ (55) ಕೊಲೆಯಾದ ದುರ್ದೈವಿ. ರಾಜಾಜಿನಗರದ ನವರಂಗ್ ಸಿಗ್ನಲ್ ಸಮೀಪದ ನೇತ್ರಧಾಮ ಆಸ್ಪತ್ರೆ ಬಳಿ ಶನಿವಾರ ಮುಂಜಾನೆ ಈ ಘಟನೆ ನಡೆದಿದೆ. ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಸುರೇಶ್, ಬಸವೇಶ್ವರನಗರದ ಶಂಕರಮಠ ಸಮೀಪದ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಸಮೀಪದಲ್ಲೇ ಬಾಡಿಗೆ ಕೊಠಡಿಯಲ್ಲಿ ನೆಲೆಸಿದ್ದರು. ಮದ್ಯದ ಚಟಕ್ಕೆ ಬಿದ್ದಿದ್ದ ಸುರೇಶ್ ನಿತ್ಯ ಮದ್ಯ ಸೇವಿಸಿ ಎಲ್ಲೆಂದರಲ್ಲಿ ಮಲಗುತ್ತಿದ್ದರು. ಎಚ್ಚರವಾದಾಗ ಎದ್ದು ಕೊಠಡಿಗೆ ಹೋಗಿ ಮಲಗುತ್ತಿದ್ದರು.
ಪ್ರತಿಷ್ಠಿತ ಮಂತ್ರಿಯೊಬ್ಬರು ಮೆಟ್ರೋದಲ್ಲಿ ಸಂಚರಿಸಿದರೂ ಗುರುತೇ ಹಿಡಿಯದ ಪ್ರಯಾಣಿಕರು!
ಸಿಸಿ ಕ್ಯಾಮರಾದಲ್ಲಿ ಕುಕೃತ್ಯ ಸೆರೆ: ಶುಕ್ರವಾರ ಹೋಟೆಲ್ ಕೆಲಸ ಮುಗಿಸಿ ರಾತ್ರಿ ಕಂಠಪೂರ್ತಿ ಮದ್ಯ ಸೇವಿಸಿದ್ದ ಸುರೇಶ್, ನವರಂಗ್ ಸಿಗ್ನಲ್ ಬಳಿಯ ನೇತ್ರಧಾಮ ಆಸ್ಪತ್ರೆ ಬಳಿ ಮಲಗಿದ್ದರು. ಈ ವೇಳೆ ದುಷ್ಕರ್ಮಿಗಳು ಅವರ ಮೇಲೆ ಕತ್ತು ಎತ್ತಿಹಾಕಿ ಹತ್ಯೆಗೈದು ಪರಾರಿಯಾಗಿದ್ದಾರೆ. ಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.