Asianet Suvarna News Asianet Suvarna News

ಇದೇ ಕೊನೆ ಇನ್ನು ಅಸಾಧ್ಯ ಎಂದ್ಹೇಳಿ ಇ.ಡಿ. ಮುಖ್ಯಸ್ಥರ ಅವಧಿ ವಿಸ್ತರಿಸಲೊಪ್ಪಿದ ಸುಪ್ರೀಂಕೋರ್ಟ್

ಜಾರಿ ನಿರ್ದೇಶನಾಲಯದ ಮುಖ್ಯಸ್ಥ ಸಂಜಯ್‌ ಕುಮಾರ್‌ ಮಿಶ್ರಾ ಅವರ ಸೇವಾ ಅವಧಿಯನ್ನು ಸೆ.15ರವರೆಗೂ ವಿಸ್ತರಣೆ ಮಾಡಲು ಸುಪ್ರೀಂ ಕೋರ್ಟ್ ಅನುಮತಿಸಿದೆ. ಆದರೆ ಇದು ಕೊನೆಯ ಸೇವಾವಧಿ ವಿಸ್ತರಣೆ. ಇನ್ನು ಮುಂದೆ ವಿಸ್ತರಣೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

Say that this end is impossible anymore ED The Supreme Court extended the term of the chief akb
Author
First Published Jul 28, 2023, 12:27 PM IST

ನವದೆಹಲಿ: ಜಾರಿ ನಿರ್ದೇಶನಾಲಯದ ಮುಖ್ಯಸ್ಥ ಸಂಜಯ್‌ ಕುಮಾರ್‌ ಮಿಶ್ರಾ ಅವರ ಸೇವಾ ಅವಧಿಯನ್ನು ಸೆ.15ರವರೆಗೂ ವಿಸ್ತರಣೆ ಮಾಡಲು ಸುಪ್ರೀಂ ಕೋರ್ಟ್ ಅನುಮತಿಸಿದೆ. ಆದರೆ ಇದು ಕೊನೆಯ ಸೇವಾವಧಿ ವಿಸ್ತರಣೆ. ಇನ್ನು ಮುಂದೆ ವಿಸ್ತರಣೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಅಂತಾರಾಷ್ಟ್ರೀಯ ಹಣಕಾಸು ಕಾರ್ಯಪಡೆಯು, ಭಾರತದ ಕುರಿತ ತನ್ನ ವರದಿಯನ್ನು ನವೆಂಬರ್‌ ವೇಳೆಗೆ ಪೂರ್ಣಗೊಳಿಸಲಿದೆ. ಇದರ ಉಸ್ತುವಾರಿಯನ್ನು ಮಿಶ್ರಾ ಹೊಂದಿರುವ ಕಾರಣ ಅವರ ಅವಧಿಯನ್ನು ಅ.15ರವರೆಗೂ ವಿಸ್ತರಿಸಬೇಕು’ ಎಂದು ಕೇಂದ್ರ ಸರ್ಕಾರ ಮನವಿ ಮಾಡಿತ್ತು.

ಆದರೆ, ಅ.15ರವರೆಗೆ ಅವಧಿ ವಿಸ್ತರಣೆಗೆ ನಿರಾಕರಿಸಿದ ಕೋರ್ಟ್, ಕೇವಲ ಸೆ.15ರವರೆಗೆ ಮಾತ್ರ ವಿಸ್ತರಣೆಗೆ ಸಮ್ಮತಿಸಿತು. ಸಾರ್ವಜನಿಕ ಹಾಗೂ ರಾಷ್ಟ್ರೀಯ ಹಿತಾಸಕ್ತಿ ಕಾರಣ ಅವಧಿ ವಿಸ್ತರಿಸಿದ್ದೇವೆ. ಆದರೆ ಇದು ಕೊನೆಯ ವಿಸ್ತರಣೆ ಆಗಲಿದೆ ಎಂದು ಸ್ಪಷ್ಟಪಡಿಸಿತು. ಈ ಹಿಂದೆ, ಮಿಶ್ರಾ ಅವರ ಸೇವೆಯನ್ನು ಕೇಂದ್ರ ಸರ್ಕಾರ ಎರಡು ಬಾರಿ ವಿಸ್ತರಣೆ ಮಾಡಿತ್ತು. ಇದನ್ನು ಕಾಂಗ್ರೆಸ್‌ ಸೇರಿದಂತೆ ಹಲವು ಪಕ್ಷಗಳ ನಾಯಕರು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದವು. ಕೊನೆಗೆ ಜು.31ರಂದು ಅವರು ನಿವೃತ್ತಿ ಆಗಬೇಕು ಎಂದು ಕೋರ್ಟ್ ಸೂಚಿಸಿತ್ತು. 

ಕೇಂದ್ರ ಸರ್ಕಾರಕ್ಕೆ ಹಿನ್ನಡೆ, ಇಡಿ ನಿರ್ದೇಶಕ ಸಂಜಯ್‌ ಕುಮಾರ್‌ ಅವಧಿ ವಿಸ್ತರಣೆ ಅಕ್ರಮ ಎಂದ ಸುಪ್ರೀಂ ಕೋರ್ಟ್‌

 ಇ.ಡಿ. ನಿರ್ದೇಶಕರ ಅಧಿಕಾರವಧಿ ವಿಸ್ತರಣೆ ಪ್ರಶ್ನಿಸಿದ ಸುಪ್ರೀಂಕೋರ್ಟ್

Follow Us:
Download App:
  • android
  • ios