: ಜಾರಿ ನಿರ್ದೇಶನಾಲಯದ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರವಧಿಯನ್ನು 3ನೇ ಬಾರಿ ವಿಸ್ತರಣೆ ಮಾಡಿದ್ದನ್ನು ಪ್ರಶ್ನಿಸಿರುವ ಸುಪ್ರೀಂಕೋರ್ಟ್ ಒಬ್ಬ ವ್ಯಕ್ತಿ ಅಷ್ಟೊಂದು ಅನಿವಾರ್ಯವೇ? ಎಂದು ಕೇಂದ್ರ ಸರ್ಕಾರವನ್ನು ಕೇಳಿದೆ.
ನವದೆಹಲಿ: ಜಾರಿ ನಿರ್ದೇಶನಾಲಯದ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರವಧಿಯನ್ನು 3ನೇ ಬಾರಿ ವಿಸ್ತರಣೆ ಮಾಡಿದ್ದನ್ನು ಪ್ರಶ್ನಿಸಿರುವ ಸುಪ್ರೀಂಕೋರ್ಟ್ ಒಬ್ಬ ವ್ಯಕ್ತಿ ಅಷ್ಟೊಂದು ಅನಿವಾರ್ಯವೇ? ಎಂದು ಕೇಂದ್ರ ಸರ್ಕಾರವನ್ನು ಕೇಳಿದೆ. ಈ ಕೆಲಸವನ್ನು ಮಾಡಲು ಬೇರೆ ಯಾವ ವ್ಯಕ್ತಿಯೂ ಇಲ್ಲವೇ? ಒಬ್ಬ ವ್ಯಕ್ತಿ ಅಷ್ಟೊಂದು ಅನಿವಾರ್ಯವೇ? ನಿಮ್ಮ ಪ್ರಕಾರ ಜಾರಿ ನಿರ್ದೇಶನಾಲಯ ನಿರ್ವಹಿಸಲು ಅರ್ಹ ಅಭ್ಯರ್ಥಿ ಇಲ್ಲ ಎಂದು ಅರ್ಥವೇ?, ಅವರು ನಿವೃತ್ತರಾದ ಮೇಲೆ 2023ರಲ್ಲಿ ಯಾರನ್ನು ನೇಮಕ ಮಾಡುತ್ತೀರಿ? ಎಂದು ನ್ಯಾ ಬಿ.ಆರ್.ಗವಾಯಿ, ನ್ಯಾ. ವಿಕ್ರಂನಾಥ್ ಮತ್ತು ನ್ಯಾ. ಸಂಜಯ್ ಕರೋಲ್ ಅವರಿದ್ದ ಪೀಠ ಸರ್ಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿದೆ. ಜಾರಿ ನಿರ್ದೇಶನಾಲಯದ ನಿರ್ದೇಶಕರು ನಿವೃತ್ತಿ ವಯೋಮಿತಿಯನ್ನು ತಲುಪಿದ ಬಳಿಕ ಅವರ ಅಧಿಕಾರವಧಿಯ ವಿಸ್ತರಣೆ ಅಲ್ಪಾವಧಿಯದ್ದಾಗಿರಬೇಕು ಎಂದು 2021ರಲ್ಲಿ ನೀಡಿದ್ದ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ತಿಳಿಸಿತ್ತು.
ವಿದೇಶಿ ವಿನಿಮಯ ಉಲ್ಲಂಘನೆ : ಇಡಿಯಿಂದ ಮತ್ತೆ ಬಿಬಿಸಿ ಅಧಿಕಾರಿಗಳ ವಿಚಾರಣೆ
ಇಡಿ, ಸಿಬಿಐ ಕುರಿತು ಅಮಿತ್ ಶಾ ಮಹತ್ವದ ಹೇಳಿಕೆ, ಅದಾನಿ-ಹಿಂಡೆನ್‌ಬರ್ಗ್ ಕುರಿತಾಗಿ ಏನಂದ್ರು?
