ತರಕಾರಿ ಖರೀದಿಗೆ ಪತ್ನಿ ಕೊಟ್ಟ ಚೀಟಿ ಹಂಚಿಕೊಂಡ ನಿವೃತ್ತ ಅಧಿಕಾರಿ, ನಿಮಗೂ ಬೇಕಾಗಬಹುದು ಖಚಿತ!
ಟೊಮೆಟೋ ಕೆಲವು ಹಳದಿ, ಕೆಲವು ಕೆಂಪು, ಆದರೆ ಚುಕ್ಕೆ ಬಿದ್ದಿರಬಾರದು. ಈರುಳ್ಳಿ ರೌಂಡ್ ಶೇಪ್, ಹೀಗೆ ಪ್ರತಿ ತರಕಾರಿಯ ಖರೀದಿ ವೇಳೆ ಎನೆಲ್ಲಾ ಗಮನಿಸಬೇಕು ಎಂದು ಪತ್ನಿ ನೀಡಿದ ಚೀಟಿಯನ್ನು ನಿವೃತ್ತ IFS ಅಧಿಕಾರಿ ಹಂಚಿಕೊಂಡಿದ್ದಾರೆ. ಯಾರೆಲ್ಲಾ ತರಕಾರಿ ಖರೀದಿಸಿ ಅನುಭವಿಲ್ಲವೋ ಅಥವಾ ಪತ್ನಿಯಿಂದ ಉಗಿಸಿಕೊಳ್ಳುತ್ತಿರುವ ಮಂದಿ ಈ ಚೀಟಿ ಸೇವ್ ಮಾಡಿ ಇಟ್ಟುಕೊಂಡರೆ ನೆರವಾಗುವುದು ಖಚಿತ.
ತೆಲಂಗಾಣ(ಸೆ.14) ತರಕಾರಿ ಖರೀದಿಯಲ್ಲೂ ಈಗಲೂ ಎಡವಟ್ಟಾಗುತ್ತಿದೆಯಾ? ಪತ್ನಿ ಅಥವಾ ತಾಯಿ ನಿಮಗೆ ಈ ವಿಚಾರಕ್ಕೆ ಮಂಗಳರಾತಿ ಮಾಡುತ್ತಿದ್ದಾರ? ಹಾಗಾದರೆ ನಿವೃತ್ತ ಐಎಫ್ಎಸ್ ಅಧಿಕಾರಿ ಹಂಚಿಕೊಂಡಿರುವ ತರಕಾರಿ ಚೀಟಿಯನ್ನು ಸೇವ್ ಮಾಡಿ ಇಟ್ಟುಕೊಳ್ಳಿ. ಇದು ಖಂಡಿತ ನೆರವಾಗಲಿದೆ. ಕಾರಣ ನಿವೃತ್ತ ಅರಣ್ಯಾಧಿಕಾರಿ ಮೋಹನ್ ಪರ್ಗೈನ್ ತಮ್ಮ ಪತ್ನಿ ತರಕಾರಿ ಖರೀದಿಗೆ ನೀಡಿರುವ ಚೀಟಿ ನೋಡಿ ವೆಜಿಟೇಬಲ್ಸ್ ಖರೀದಿಸಿದರೆ ಪಕ್ಕಾ ಪರ್ಫಕ್ಟ್. ಪ್ರತಿ ತರಕಾರಿ ಖರೀದಿಸುವಾಗ ಎನೆಲ್ಲಾ ಗಮನಿಸಬೇಕು, ಆಕಾರದಿಂದ ಹಿಡಿದು ತರಕಾರಿ ಮೇಲಿನ ಬಣ್ಣ, ಚುಕ್ಕೆ ಸೇರಿದಂತೆ ಎಲ್ಲವನ್ನೂ ಡೈರೆಕ್ಟರ್ ಅಂತಿಮ ಸ್ಕ್ರಿಪ್ಟ್ ರೀತಿ ಬರೆದು ನೀಡಿದ್ದಾರೆ.
ಮೆಂತೆ ಸೊಪ್ಪು ಗಿಡ್ಡವಾಗಿರಬೇಕು, ಎಲೆಗಳ ಬಣ್ಣ ಹಸಿರಾಗಿರಬೇಕು. ಕಟ್ಟಾಗಿ ಇರಬೇಕು. ಬೆಂಡೆಕಾಯಿ ಮೆದುವಾಗಿರಬಾರದು, ಗಟ್ಟಿಯಾಗಿರಬೇಕು. ಆದರೆ ಹಿಂಬದಿಯಿಂದ ಮುರಿಯಂತಿರಬೇಕು. ಪಾಲಕ್ ಸೊಪ್ಪು ಚೆನ್ನಾಗಿ ಫ್ರೆಶ್ ಆಗಿರಬೇಕು, ಆದರೆ ಎಲೆಗಳಲ್ಲಿ ತೂತು ಇರಬಾರದು. ಹಸಿಮೆಣಸು ಕಡು ಹಸಿರು ಬಣ್ಣದಿಂದ ಕೂಡಿರಬೇಕು. ಆದರೆ ಹಸಿಮೆಣಸಿನ ತುದಿ ಬಾಗಿರಬಾರದು, ನೇರವಾಗಿರಬೇಕು. ಹೀಗೆ ಮನೆಗೆ ಬೇಕಾದ ತರಕಾರಿ , ಹಾಲು ಹೇಗಿರಬೇಕು? ಖರೀದಿಸುವಾಗ ಏನೆಲ್ಲಾ ಗಮನಿಸಬೇಕು ಅನ್ನೋದನ್ನು ಚಿತ್ರಸಹಿತಿ ವಿವರಿಸಿ ಬರೆದ ಚೀಟಿಯನ್ನು ನಿವೃತ್ತ ಅಧಿಕಾರಿ ಹಂಚಿಕೊಂಡಿದ್ದಾರೆ.
ಟೊಮೆಟೋ ದರ ಮತ್ತೆ ಗಗನಮುಖಿ: ರೈತರಿಗೆ ಸಂತಸ, ಗ್ರಾಹಕರ ಜೇಬಿಗೆ ಕತ್ತರಿ
ಇಷ್ಟೂ ತರಕಾರಿಯನ್ನು ಎಲ್ಲಿಂದ ಖರೀದಿಸಬೇಕು ಅನ್ನೋ ವಿಳಾಸವನ್ನೂ ಪತ್ನಿ ಬರೆದು ಮೋಹನ್‌ಗೆ ನೀಡಿದ್ದಾರೆ. ಈ ಚೀಟಿ ಹಿಡಿದು ಯಾರೇ ತರಕಾರಿ ಖರೀದಿಸಿದರೂ ಅದು ಹಾಳಾಗಿರಲು, ಮನೆಯಿಂದ ಉಗಿಸಿಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ. ಅಷ್ಟರ ಮಟ್ಟಿಗೆ ಪರ್ಫೆಕ್ಟ್ ಚೀಟಿ ಬರೆದುಕೊಟ್ಟಿದ್ದಾರೆ.
ನಿವೃತ್ತ ಅರಣ್ಯಧಿಕಾರಿ ಹಂಚಿಕೊಂಡ ಈ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಇದು ಹೊಸದಾಗಿ ತರಕಾರಿ ಮಾರುಕಟ್ಟೆಗೆ ತೆರಳು ಖರೀದಿ ಮಾಡುವ ಬಿಗಿನರ್ಸ್‌ಗೆ ಮಾರ್ಗದರ್ಶಿ ಎಂದು ಹಲವರು ಬಣ್ಣಿಸಿದ್ದಾರೆ. ಅರಣ್ಯಾಧಿಕಾರಿ ಪತ್ನಿ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಸಾಧ್ಯತೆ ಇದೆ. ಅಷ್ಟು ಅಚ್ಚುಕಟ್ಟಾಗಿ ಬರೆದಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇದು ವಿದ್ವಾಂಸರು ಅತ್ಯಂತ ತಾಳ್ಮೆ, ಆಲೋಚನೆ, ದೂರದೃಷ್ಟಿ, ಭವಿಷ್ಯಗಳನ್ನು ಗಮನದಲ್ಲಿಟ್ಟುಕೊಂಡು ಬರೆದ ಧಾರ್ಮಿಕ ಪುಸ್ತಕದಂತಿದೆ. ಇಷ್ಟು ಅಚ್ಚುಕಟ್ಟಾಗಿ ಬರೆದು, ಚಿತ್ರ ಬಿಡಿಸಿ ನೀಡಿ ಕೊನೆಗೆ ಸಣ್ಣ ತಪ್ಪಾದರೂ ಧರ್ಮ ಯುದ್ಧಗಳೇ ಆಗುವ ಸಾಧ್ಯತೆ ಇದೆ ಎಂದು ಕಾಲೆಳೆದಿದ್ದಾರೆ.
ಈ ಚೀಟಿಯನ್ನು ಪುರುಷರು ಸೇವ್ ಮಾಡಿ ಇಟ್ಟುಕೊಳ್ಳಿ, ನಿಮ್ಮ ಪತ್ನಿ ಹೇಳುವ ತರಕಾರಿ ಈ ಲಿಸ್ಟ್‌ನಲ್ಲಿದ್ದರೆ ಸೂಚನೆಯಂತೆ ಖರೀದಿಸಿ. ಕೇವಲ ತರಕಾರಿ ಖರೀದಿಸಿ ಪತ್ನಿಯನ್ನು ಇಂಪ್ರೆಸ್ ಮಾಡಲು ಸಾಧ್ಯವಿದೆ ಎಂದು ಹಲವರು ಸಲಹೆ ನೀಡಿದ್ದಾರೆ.
ಸಿಎ ಪಾಸ್ ಮಾಡಿದ ತರಕಾರಿ ಮಾರೋ ಮಹಿಳೆ ಮಗ: ಖುಷಿಯಿಂದ ಹಿರಿಹಿರಿ ಹಿಗ್ಗಿದ ಅಮ್ಮ