ನಭೋಮಂಡಲಕ್ಕೆ ಹಾರಲು ನ್ಯಾನೋ ಸ್ಯಾಟಲೈಟ್ ಸಜ್ಜಾಗಿದೆ. ಆದರೆ ಕಕ್ಷೆಗೆ ಹಾರಲಿರುವ ಸತೀಶ್ ಧವನ್(SD-SAT) ಉಪಗ್ರಹದಲ್ಲಿ ಹಲವು ವಿಶೇಷತೆಗಳಿವೆ. ಈ ಉಪಗ್ರಹ ಭಗವದ್ಗೀತೆಯ ಪ್ರತಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರದೊಂದಿಗೆ ಉಡಾವಣೆಯಾಗಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಶ್ರೀಹರಿಕೋಟ(ಫೆ.15): ISRO ನ್ಯಾನೋ ಉಪಗ್ರಹ ಉಡಾವಣೆಗೆ ಸಜ್ಜಾಗಿದೆ. ಈ ಉಪಗ್ರಹಕ್ಕೆ ದೇಶದ ಬಾಹ್ಯಾಕಾಶ ಪಿತಾಮಹ ಎಂದೇ ಗುರುತಿಸಿಕೊಂಡಿರುವ ಸತೀಶ್ ಧವನ್ ಹೆಸರನ್ನು ಇಡಲಾಗಿದೆ. ಈ ಉಪಗ್ರಹದಲ್ಲಿ ಹಲವು ವಿಶೇಷತೆಗಳಿವೆ. ಈ ಉಪಗ್ರಹ ಭಗವದ್ಗೀತೆಯ ಪ್ರತಿ ಹಾಗೂ ಪ್ರಧಾನಿ ನರೇಂದ್ರ ಮೋದಿಯ ಭಾವಚಿತ್ರವನ್ನು ಹೊತ್ತು ನಭೋಮಂಡಲಕ್ಕೆ ಹಾರಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೊಸ ವರ್ಷದ ಮೊದಲ ಸಾಹಸಕ್ಕೆ ಇಸ್ರೋ ಸಜ್ಜು

ಭಗವದ್ಗೀತೆ ಹಾಗೂ ಮೋದಿ ಬಾವಚಿತ್ರದ ಜೊತೆ 25,000 ಸಾಧಕರ ಹೆಸರನ್ನು ಈ ನ್ಯಾನೋ ಸ್ಯಾಟಲೈಟ್ ಹೊತ್ತೊಯ್ಯಲಿದೆ. ಸತೀಶ್ ಧವನ್(SD-SAT) ಉಪಗ್ರಹ ಮೂರು ವೈಜ್ಞಾನಿಕ ಪೇಲೋಡ್ ಹೊತ್ತೊಯ್ಯಲಿದೆ. ಬಾಹ್ಯಾಕಾಶ ವಿಕಿರಣ ಅಧ್ಯಯನ, ಮ್ಯಾಗ್ನೋಟೋಸ್ಟಿ ಹಾಗೂ ಸಂವಹನ ಜಾಲ ಪೇಲೋಡ್‌ನ್ನು ಹೊತ್ತೊಯ್ಯಲಿದೆ. 

ವಿದ್ಯಾರ್ಥಿಗಳ ಉಪಗ್ರಹ ಉಡಾವಣೆಗೆ ಸಿದ್ಧ; ವೆಚ್ಚ ಎಷ್ಟು ಗೊತ್ತಾ?.

ಅಮೆರಿಕ ಸೇರಿದಂತೆ ಹಲವು ಇತರ ರಾಷ್ಟ್ರಗಳು ಉಪಗ್ರಹದಲ್ಲಿ ಬೈಬಲ್ ಪ್ರತಿ ಕಳುಹಿಸಿದೆ. ಈ ಬಾರಿ ಭಾರತದ ಮೊದಲ ಭಾರಿಗೆ ಹಿಂದೂ ಪವಿತ್ರ ಗ್ರಂಥ ಭವದ್ಗೀತೆ ಹೊತ್ತು ಕಕ್ಷೆಗೆ ಹಾರಲಿದೆ. ಇನ್ನು ಸ್ವದೇಶಿ ನಿರ್ಮಿತ ಸ್ಯಾಟಲೈಟ್ ಆಗಿದ್ದು, ಪ್ರಧಾನಿ ಮೋಧಿ ಭಾವಚಿತ್ರ ಹಾಗೂ ಆತ್ಮನಿರ್ಭರ್ ಭಾರತ್ ಮಿಷನ್ ಪದಗಳನ್ನು ಈ ಉಪಗ್ರಹದಲ್ಲಿ ಅಚ್ಚಡಿಸಲಾಗಿದೆ. ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಮತ್ತು ವೈಜ್ಞಾನಿಕ ಕಾರ್ಯದರ್ಶಿ ಡಾ.ಆರ್.ಉಮಾಮಹೇಶ್ವರನ್ ಅವರ ಹೆಸರನ್ನು ಸೇರಿಸಲಾಗಿದೆ.

ಸ್ಪೇಸ್ ಕಿಡ್ಜ್ ಇಂಡಿಯಾ ಸಂಸ್ಥೆ ನ್ಯಾನೋ ಸ್ಯಾಟಲೈಟ್ ಅಭಿವೃದ್ಧಿ ಪಡಿಸಿದೆ. ಭಾರತೀಯ ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ವಿಜ್ಞಾನವನ್ನು ಉತ್ತೇಜಿಸುವ ಉದ್ದೇಶದಿಂದ ಈ ಯೋಜನೆಗೆ ಕೈಹಾಕಿದೆ.