Asianet Suvarna News Asianet Suvarna News

ವಿದ್ಯಾರ್ಥಿಗಳ ಉಪಗ್ರಹ ಉಡಾವಣೆಗೆ ಸಿದ್ಧ; ವೆಚ್ಚ ಎಷ್ಟು ಗೊತ್ತಾ?

ಚೆನ್ನೈನ ಜೆಪಿಆರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ನಾಗ್‌ಪುರದ ಜಿಹೆಚ್ ರೈಸೋನಿ ಕಾಲೇಜಿನ ಎರಡು ಉಪಗ್ರಹಗಳೊಂದಿಗೆ ಈ ಶ್ರೀಶಕ್ತಿಸ್ಯಾಟ್ ಉಪಗ್ರಹ ಉಡಾವಣೆ ಆಗುವ ನಿರೀಕ್ಷೆಯಿದೆ. ಫೆಬ್ರುವರಿ ೨೮ರಂದು ಇಸ್ರೋ ಸಂಸ್ಥೆಯ ಪಿಎಸ್‌ಎಲ್‌ವಿ-ಸಿ೧೫ ಮೂಲಕ ಈ ಉಪಗ್ರಹಗಳು ಉಡಾವಣೆ ಆಗುವ ಸಾಧ್ಯತೆ ಇದೆ.

Satellite developed by engineering students of  Coimbatore
Author
Bengaluru, First Published Jan 28, 2021, 5:25 PM IST

ಇಸ್ರೋ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ. ಹೊಸ ಹೊಸ ಸಂಶೋಧನೆ, ಪ್ರಯೋಗಗಳ ಮೂಲಕ ಇಡೀ ಜಗತ್ತೇ ಬೆರಗಾಗುವಂತೆ ಮಾಡಿದೆ. ದೇಶದ ಅಭಿವೃದ್ಧಿಗೆ ಇಸ್ರೋ ವಿಜಾನಿಗಳ ಕೊಡುಗೆ ಅಪಾರವಾದುದು. ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾವನ್ನು ಮೀರಿಸುವಂತಹ ಅದೆಷ್ಟೋ ಸಾಧನೆಗಳನ್ನು ಇಸ್ರೋ ಮಾಡಿದೆ. ಬಾಹ್ಯಾಕಾಶ ಜಗತ್ತಿನಲ್ಲಿ ಅನೇಕ ಯಶಸ್ಸಿನ ಧ್ವಜಗಳನ್ನು ಸ್ಥಾಪಿಸಿರುವ ಇಸ್ರೋ, ಆಗಾಗ ಹೊಸ ಮೈಲಿಗಲ್ಲು ಸೃಷ್ಟಿಸ್ತಾನೆ ಇದೆ. ಹೊಸ ಹೊಸ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡೋ ಮೂಲಕ ಇಸ್ರೋ ಬಾಹ್ಯಾಕಾಶದಲ್ಲಿ ತನ್ನ ವೈಭವವನ್ನು ಮೆರೆದಿದೆ.

ಕೆಲಸ ಖಾಲಿ ಇದೆ! 52 ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳುತ್ತಿರುವ ಬಿಇಎಲ್

ಇಂಥ ದೇಶದ ಅತ್ಯುನ್ನತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಾಗಿ ಇಲ್ಲೊಂದು ಕಾಲೇಜಿನ ವಿದ್ಯಾರ್ಥಿಗಳು ಉಪಗ್ರಹವೊಂದನ್ನ ವಿನ್ಯಾಸಗೊಳಿಸಿದ್ದಾರೆ. ಕೊಯಮತ್ತೂರಿನ ಶ್ರೀಶಕ್ತಿ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿದ್ಯಾರ್ಥಿಗಳು 2.5 ಕೋಟಿ ವೆಚ್ಚದಲ್ಲಿ ಉಪಗ್ರಹವನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಇಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಡಾ.ಆರ್.ಶಿವನ್ ಉದ್ಘಾಟಿಸಲಿದ್ದಾರೆ.

Satellite developed by engineering students of  Coimbatore

ಕಳೆದ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರವನ್ನು ರಚಿಸಿದ್ದು ನಮ್ಮ ಸಂಸ್ಥೆಯ 12 ವಿದ್ಯಾರ್ಥಿಗಳು, ಇಸ್ರೋ ಜೊತೆ ಸಹಕರಿಸಲು ಹಾಗೂ 'ಶ್ರೀಶಕ್ತಿಸಾಟ್' ಸ್ಯಾಟಲೈಟ್ ಅನ್ನು ಅಭಿವೃದ್ಧಿಪಡಿಸಲು ಪ್ರೇರಣೆಯಾಗಿದೆ ಎಂದು ಕೊಯಂಬತ್ತೂರು ಸಂಸ್ಥೆಯ ಅಧ್ಯಕ್ಷ ಡಾ.ತಂಗವೇಲ್ ತಿಳಿಸಿದ್ದಾರೆ.

ಸರ್ಬಿಯಾ ಮೂಲದ ಕಮ್ಯುನಿಟಿ ಫಾರ್ ಸ್ಪೇಸ್ ಪ್ರೋಗ್ರಾಂ ಡೆವಲಪ್‌ಮೆಂಟ್ ಸಹಯೋಗದೊಂದಿಗೆ ಶ್ರೀಶಕ್ತಿ ಸ್ಯಾಟ್ ಗ್ರೌಂಡ್ ಸ್ಟೇಷನ್ ಅನ್ನು ಸ್ಥಾಪಿಸಿದ ನಂತರ, ಈ ಸಂಸ್ಥೆ ಸ್ಯಾಟಲೈಟ್ ನೆಟ್‌ವರ್ಕ್ಡ್ ಓಪನ್ ಗ್ರೌಂಡ್ ಸ್ಟೇಷನ್ (ಸ್ಯಾಟ್‌ನೊಗ್ಸ್) ಯೋಜನೆಯ ಸದಸ್ಯತ್ವ ಪಡೆದಿದೆ. ವರ್ಚುವಲ್ ಉದ್ಘಾಟನೆಯಾದ ಬಳಿಕ ಈ ಸ್ಯಾಟಲೈಟ್ ಅನ್ನು ಫೆಬ್ರವರಿಯಲ್ಲಿ ಇಸ್ರೋಗೆ ಹಸ್ತಾಂತರಿಸೋದಾಗಿ ಡಾ.ತಂಗವೇಲು ಹೇಳಿದ್ದಾರೆ.

5 ಲಕ್ಷ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯುರಿಟಿ ಕೌಶಲ್ಯ ತರಬೇತಿ

ಇನ್ಫಾರ್ಮೇಷನ್ ಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ‍ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ - ನಾಲ್ಕು ಇಲಾಖೆಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಸೇರಿ ಕಳೆದ ೧೦ ವರ್ಷಗಳಿಂದ ಈ ಪ್ರಾಜೆಕ್ಟ್‌ಗಾಗಿ ಶ್ರಮಿಸಿದ್ದಾರೆ. ಬರೋಬ್ಬರೀ ೨ ಕೋಟಿ ವೆಚ್ಚದಲ್ಲಿ ಈ ಉಪಗ್ರಹ ಅಭಿವೃದ್ಧಿಪಡಿಸಲಾಗಿದೆ ಅಂತಾ ಡಾ.ತಂಗವೇಲು.

ಕಡಿಮೆ ಭೂಮಿಯ ಕಕ್ಷೆಯ ಉಪಗ್ರಹ ನೆಲದ ಕೇಂದ್ರಗಳ ವಿತರಣಾ ಜಾಲಕ್ಕೆ ತಂತ್ರಜ್ಞಾನಗಳನ್ನು ಒದಗಿಸುವ ಗುರಿಯನ್ನು ಈ ಸ್ಯಾಟ್‌ನೊಗ್ಸ್ ಹೊಂದಿದೆ. ಶ್ರೀಶಕ್ತಿಸ್ಯಾಟ್ ಉಪಗ್ರಹವೂ ಕೇವಲ 460 ಗ್ರಾಂ ತೂಕವಿರುತ್ತದೆ. ಆದರೆ 10 ಕೆಜಿವರೆಗೆ ತೂಕವಿರುವ ಇತರ ನ್ಯಾನೊ ಉಪಗ್ರಹಗಳಂತೆ ಕಾರ್ಯನಿರ್ವಹಿಸಬಲ್ಲದು. ಬಾಹ್ಯಾಕಾಶದಲ್ಲಿ ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ಅಂತರ ಉಪಗ್ರಹ ಸಂವಹನಕ್ಕಾಗಿ ಈ ಉಪಗ್ರಹವನ್ನು ತಂತ್ರಜ್ಞಾನ ಪ್ರದರ್ಶನಕಾರನಂತೆ ಬಳಸಲಾಗುತ್ತದೆ. ಭೂಮಿ ಮೇಲೆ 500 ರಿಂದ 575 ಕಿ.ಮೀ ವೇಗದ ಕಕ್ಷೆಯಲ್ಲಿ ಈ ಉಪ್ರಗಹವನ್ನು ಇಡಬಹುದು. ಭಾರತವನ್ನು ಇದು ದಿನಕ್ಕೆ ೨ ಸಲ ಹಾದು ಹೋಗಲಿದೆ. ಜೊತೆಗೆ ೩೦೦ಕ್ಕೂ ಹೆಚ್ಚು ಉಪಗ್ರಹಗಳೊಂದಿಗೆ ಅಂತರ್ ಸಂವಹನ ನಡೆಸಲಿದೆ. ಅಂದಹಾಗೇ ಈ ಸ್ಯಾಟಲೈಟ್‌ನ ಸಕ್ರಿಯ ಅವಧಿ ೬ ತಿಂಗಳಿದ್ದು, ೩ ವರ್ಷಗಳ ಕಾಲ ಸಿಗ್ನಲ್‌ಗಳನ್ನು ರವಾನಿಸುವ ಸಾಮಥ್ರ್ಯ ಹೊಂದಿದೆ.  

ಈ ಸ್ಯಾಟಲೈಟ್ ಮೂಲಕ ಬ್ಯಾಂಕ್ ಕಳ್ಳತನದ ಮಾಹಿತಿಯನ್ನು ಸಂಗ್ರಹಿಸಬಹುದು, ಬೆಂಕಿ ಮತ್ತು ಭೂಗತ ನೀರಿನ ಸೋರಿಕೆಯನ್ನು ಪತ್ತೆ ಮಾಡಬಹುದು. ಈ ಉಪಗ್ರಹವನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.  ಆದರೆ ಬಾಹ್ಯಾಕಾಶ ಸಾಕ್ಷರತೆಯನ್ನು ಪ್ರೊತ್ಸಾಹಿಸುವ ಸಲುವಾಗಿ ಮಾಹಿತಿ ಮಾತ್ರ ಎಲ್ಲ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡಲಾಗುವುದು.

ಆಂಧ್ರದ ಸರ್ಕಾರಿ ಶಾಲೆಗಳಲ್ಲಿ ವಿಶೇಷ ಆ್ಯಪ್ ಬಳಕೆ

Follow Us:
Download App:
  • android
  • ios