ಚೀನಾ ಸೇನೆ ತೆರವು: ಉಪಗ್ರಹ ಚಿತ್ರದಲ್ಲಿ ಸೆರೆ
ಚೀನಾ ಸೇನೆ ತೆರವು: ಉಪಗ್ರಹ ಚಿತ್ರದಲ್ಲಿ ಸೆರೆ| ಗಡಿಯಿಂದ ಚೀನಾದ 150 ಟ್ಯಾಂಕರ್, 5,000 ಸೈನಿಕರು ಹಿಂದಕ್ಕೆ
ನವದೆಹಲಿ(ಫೆ.18): ಗಡಿ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದ ಪೂರ್ವ ಲಡಾಖ್‌ನ ಪ್ಯಾಂಗಾಂಗ್ ತ್ಸೋ ಪ್ರದೇಶದಿಂದ ಚೀನಾ ಸೇನೆ ತನ್ನ ಶಿಬಿರ ಹಾಗೂ ವಾಹನಗಳನ್ನು ತೆರವುಗೊಳಿಸಿರುವುದು ಉಪಗ್ರಹ ಚಿತ್ರದಲ್ಲಿ ಸೆರೆಯಾಗಿದೆ.
ಸಂಸ್ಥೆ ಮಾಕ್ಸರ್ ಟಕ್ನಾಲಜೀಸ್‌ನಿಂದ ಪಡೆದ ಉಪಗ್ರಹ ಚಿತ್ರಗಳನ್ನು ಕೆಲವು ಮಾಧ್ಯಮಗಳು ಪ್ರಸಾರ ಮಾಡಿವೆ. ಪ್ಯಾಂಗಾಂಗ್ ತ್ಸೋ ಪ್ರದೇಶದ ಫಿಂಗರ್ 6ನಲ್ಲಿ ನಿರ್ಮಿಸಲಾಗಿದ್ದ ಶಿಬಿರಗಳನ್ನು ಚೀನಾ ಸೇನೆ ತೆರವುಗೊಳಿಸಿರುವುದು ಫೆ.17ರಂದು ತೆಗೆಯಲಾದ ಉಪಗ್ರಹ ಚಿತ್ರದಲ್ಲಿ ಸೆರೆಯಾಗಿದೆ.
ಬೆಂಗ್ಳೂರಿಗೆ ಬಂದ ಕೈ ಉಸ್ತುವಾರಿ: ಬಿಎಸ್‌ವೈ, ಮೋದಿ ಸರ್ಕಾರ ವಿರುದ್ಧ ವಾಗ್ದಾಳಿ...!
ಪ್ಯಾಂಗಾಂಗ್ ತ್ಸೋ ನದಿಯ ತೀರದಲ್ಲಿ ಜ.30ರಂದು ಇದ್ದ ಸೇನಾಪಡೆ, ಟ್ಯಾಂಕ್‌ಗಳು ಹಾಗೂ ಇತರ ಸಾಧನಗಳನ್ನು ಈಗ ತೆರವು ಮಾಡಿರುವುದನ್ನು ಈ ಚಿತ್ರಗಳಲ್ಲಿ ಸ್ಪಷ್ಟವಾಗಿ ನೋಡಬಹುದಾಗಿದೆ.
ಪ್ಯಾಂಗಾಂಗ್ ತ್ಸೋ ಪ್ರದೇಶದಿಂದ ಚೀನಾದ 150 ಯುದ್ಧ ಟ್ಯಾಂಕರ್‌ಗಳು ಹಾಗೂ ಪೀಪಲ್ಸ್ ಲಿಬರೇಷನ್ ಆರ್ಮಿಯ ಸುಮಾರು 5,000ಕ್ಕೂ ಹೆಚ್ಚು ಸೈನಿಕರು ಹಿಂದಕ್ಕೆ ಹೋಗಿದ್ದಾರೆ.
ಭಾರತದ ಲಸಿಕೆ ರಾಜತಾಂತ್ರಿಕ ನೀತಿಗಳಿಗೆ ಬೆಚ್ಚಿಬಿದ್ದ ಚೀನಾ!
ಗಡಿಯಿಂದ ಸೇನೆ ಹಿಂಪಡೆಯು ಪ್ರಕ್ರಿಯೆ ಫೆ.20ರಂದು ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಒಪ್ಪಂದದಂತೆ ಚೀನಾ ಸೇನೆ ಭಾರತದ ಭಾಗದಿಂದ 50 ಕಿ.ಮೀ. ದೂರದಲ್ಲಿರುವ ಸೆಂಗ್‌ಡಾಂಗ್‌ಗೆ ವಾಪಸ್ ಆಗಿದೆ ಎಂದು ವರದಿಗಳು ತಿಳಿಸಿವೆ.