ಚೀನಾ ಸೇನೆ ನುಸುಳಿಲ್ಲ ಅಂದ್ರೆ ವಾಪಾಸ್ ಹೋಗ್ತಿರೋದ್ಯಾಕೆ? ಸ್ವಾಮಿ ಪ್ರಶ್ನೆಗೆ ಸರ್ಕಾರ ತತ್ತರ!
ಚೀನಾ, ಭಾರತ ಗಡಿ ವಿವಾದ| ತಮ್ಮದೇ ಸರ್ಕಾರಕ್ಕೆ ಸವಾಲೆಸೆದ ಸುಬ್ರಹ್ಮಣ್ಯನ್ ಸ್ವಾಮಿ| ಚೀನಾ ಸೇನೆ ನುಸುಳಿಲ್ಲ ಎಂದರೆ ಎಲ್ಲಿಗೆ ಹಿಂದಿರುಗುತ್ತಿದೆ?
ನವದೆಹಲಿ(ಫೆ.17): ಬಿಜೆಪಿ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ ಭಾರತ ಹಾಗೂ ಚೀನಾ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮದೇ ಸರ್ಕಾರಕ್ಕೆ ಸವಾಲೆಸೆದಿದ್ದಾರೆ. ಬುಧವಾರ ಈ ಸಂಬಂಧ ಟ್ವೀಟ್ ಮಾಡಿರುವ ಸ್ವಾಮಿ ವಿದೇಶಾಂಗ ಸಚಿವಾಲಯಕ್ಕೆ ನಡುಕ ಹುಟ್ಟಿಸಿದ್ದಾರೆ.
ಗಡಿ ವಿವಾದದ ಬಗ್ಗೆ ಟ್ವೀಟ್ ಮಾಡಿರುವ ಸುಬ್ರಹ್ಮಣ್ಯನ್ ಸ್ವಾಮಿ ವಿದೇಶಾಂಗ ಸಚಿವಾಲಯ ಆರಂಭದಲ್ಲಿ ಸೀನಾ ಸೇನೆಯ ಪಿಎಲ್‌ಎ ಯಾವತ್ತೂ ಎಲ್‌ಎಸಿ ದಾಟಿ ಭಾರತದ ಗಡಿಯೊಳಗೆ ನುಸುಳಿಲ್ಲ ಎಂದಿತ್ತು. ಆದರೀಗ ಇದೇ ಸಚಿವಾಲಯ ಭಾರತ ರಾಜತಾಂತ್ರಿಕ ಮಟ್ಟದಲ್ಲಿ ದೊಡ್ಡ ಗೆಲುವು ಸಾಧಿಸಿದೆ. ಚೀನಾ ಭಾರತದ ಪ್ರದೇಶವನ್ನು ಬಿಟ್ಟು ಹಿಂತಿರುಗುತ್ತಿದೆ ಎಂದು ಹೇಳಿದೆ. ಹಾಗಾದ್ರೆ ಇವರೆರಡೂ ವಿಚಾರಗಳು ನಿಜಾನಾ? ಎಂದು ಪ್ರಶ್ನಿಸಿದ್ದಾರೆ.
ಮೋದಿ ಹೇಳಿಕೆಯನ್ನು ಉಲ್ಲೇಖ
ಬಿಜೆಪಿ ನಾಯಕ ಸ್ವಾಮಿ ಫೆಬ್ರವರಿ 13 ರಂದು ಇಂತಹುದೇ ಒಂದು ಟ್ವಿಟ್ ಮಾಡಿ ಪಿಎಂ ಮೋದಿಗೆ ಸವಾಲೆಸೆದಿದ್ದರು. ಅವರು ಪಿಎಂ ಮೋದಿಯ 2020 ರ ಹೇಳಿಕೆಯೊಂದನ್ನು ಉಲ್ಲೇಖಿಸಿ ಪಿಎಂ ಮೋದಿ ಚೀನಾ ಸೈನಿಕರು ನಮ್ಮ ನೆಲದ ಮೇಲೆ ಕಾಲಿಟ್ಟಿಲ್ಲ ಎಂದಿದ್ದರು. ಇದು ನಿಜವಲ್ಲ. ಇದಾದ ಬಳಿಕ ಸೇನಾ ಮುಖ್ಯಸ್ಥ ನರವಣೆ ಸೈನಿಕರಿಗೆ ಎಲ್‌ಎಸಿ ದಾಟಿ ಪಿಎಲ್‌ಎ ಬೇಸ್‌ನ ಪ್ಯಾಂಗಾಗ್ ಶಿಖರವನ್ನು ಆಕ್ರಮಿಸಲು ಆದೇಶಿಸಿದ್ದರು. ಆದರೀಗ ನಾವು ಅಲ್ಲಿಂದ ಹಿಂತಿರುಗಬೇಕು. ಹೀಗಿರುವಾಗ ಅತ್ತ ಚೀನಾ ದೇಪ್‌ಸಾಂಗ್‌ನಲ್ಲಿ ಇನ್ನೂ ಕುಳಿತಿದೆ. ಚೀನಾ ಸೈನಿಕರಿಗೆ ಇದು ಬಹಳ ಖುಷಿಯ ವಿಚಾರ ಎಂದಿದ್ದರು.
ಕೇಂದ್ರಕ್ಕೆ ನಿರಂತರ ಸವಾಲು
ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ ದೇಶದ ಪರಿಸ್ಥಿತಿ ಬಗ್ಗೆ ನಿರಂತರವಾಗಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅವರು ಖುದ್ದು ತಮ್ಮ ಪಕ್ಷದ ನೀತಿ ನಿಯಮಗಳ ವಿರುದ್ಧ ಕಿಡಿ ಕಾರುತ್ತಾ 'ರಾಮನ ಭಾರತದಲ್ಲಿ ಪೆಟ್ರೋಲ್ ಬೆಲೆ 93 ರೂ. ಸೀತೆಯ ನೇಪಾಳದಲ್ಲಿ 53 ರೂ ಹಾಗೂ ರತಾವಣನ ಲಂಕೆಯಲ್ಲಿ 51 ರೂ ಎಂದಿದ್ದರು.