ಚೀನಾದಿಂದ ಅರುಣಾಚಲ ಪ್ರದೇಶ-ಲಡಾಖ್ ಕಬ್ಜಾ, ರಾಹುಲ್ ಗಾಂಧಿ ಸೂಚನೆ ಕಡೆಗಣಿಸಿತಾ ಕೇಂದ್ರ?
ಅರುಣಾಚಲ ಪ್ರದೇಶ-ಲಡಾಖ್ ಭೂಭಾಗಗಳು ಚೀನಾ ಕೈಸೇರಿದೆ. ನಿನ್ನೆಯಷ್ಟೇ ಹೊಸ ಭೂಪಟ ಬಿಡುಗಡೆ ಮಾಡಿ ಭಾರಿ ವಿವಾದಕ್ಕೆ ಸೃಷ್ಟಿಸಿತ್ತು. ಇದೀಗ ಲಡಾಖ್ ಹಾಗೂ ಅರುಣಾಚಲ ಪ್ರದೇಶದಲ್ಲಿ ಚೀನಾ ನಡೆಸುತ್ತಿರುವ ಕಾಮಗಾರಿ ಫೋಟೋ ಬಹಿರಂಗವಾಗಿದೆ.
ನವದೆಹಲಿ(ಆ.30): ಅಂತಾರಾಷ್ಟ್ರೀಯ ಶೃಂಗಸಭೆ, ದ್ವಿಪಕ್ಷೀಯ ಮಾತುಕತೆ, ಗಡಿಯಲ್ಲಿ ಕಮಾಂಡರ್ ಮಟ್ಟದ ಶಾಂತಿಮಾತುಕತೆ ಸೇರಿದಂತೆ ಯಾವುದೇ ಚರ್ಚೆಯಲ್ಲಿ ಚೀನಾ ಅದೇನೇ ಹೇಳಿದರೂ ತನ್ನ ಕುತಂತ್ರ ಬುದ್ದಿ ಮಾತ್ರ ಬಿಡುವುದಿಲ್ಲ. ಮಾತುಕತೆಯಲ್ಲಿ ಶಾಂತಿ ಮಾತನಾಡಿ, ಒಳಗಿಂದೊಳಗೆ ಗಡಿಯಲ್ಲಿ ನರಿ ಬುದ್ದಿ ತೋರಿಸುತ್ತಿದೆ. ಭಾರತದ ಭೂಪ್ರದೇಶ ಅರುಣಾಚಲ ಪ್ರದೇಶ ಹಾಗೂ ಲಡಾಖ್ ಭೂಭಾಗಳನ್ನು ತನ್ನದು ಎಂದು ಚಿತ್ರಿಸಿ ಭೂಪಟ ಬಿಡುಡೆ ಮಾಡಿತ್ತು. ಇದರ ಬೆನ್ನಲ್ಲೇ ಈ ಭೂಪ್ರದೇಶಗಳು ಚೀನಾದ ಭಾಗವಾಗಿರುವುದು ಇದೀಗ ಬಹಿರಂಗವಾಗಿದೆ. ಈ ಭೂಪ್ರದೇಶದಲ್ಲಿ ಚೀನಾ ಸುರಂಗ ಮಾರ್ಗ, ಹೆದ್ದಾರಿ, ಶಸ್ತ್ರಾಸ್ರ ಖಜಾನೆಗಳ ಕಾಮಾಗಾರಿ ನಡೆಸುತ್ತಿರುವ ಸ್ಯಾಟಲೈಟ್ ಚಿತ್ರಗಳು ಬಹಿರಂವಾಗಿದೆ. ಚೀನಾ ಆತಿಕ್ರಮಣ ಕುರಿತು ರಾಹುಲ್ ಗಾಂಧಿ ಹಲವು ಭಾರಿ ಹೇಳಿಕೆ ನೀಡಿದ್ದಾರೆ.ಭಾರತದ ಭೂಭಾಗವನ್ನು ಚೀನಾ ಅತಿಕ್ರಮಣ ಮಾಡಿಕೊಂಡಿದೆ ಎಂದು ರಾಹುಲ್ ಗಾಂಧಿ ಮಾತನ್ನು ಕೇಂದ್ರ ಸರ್ಕಾರ ಕಡೆಗಣಿಸಿತಾ ಅನ್ನೋ ಮಾತುಗಳು ಕೇಳಿಬಂದಿದೆ.
ಬಂಕರ್ ನಿರ್ಮಾಣ ಸೇರಿದಂತೆ ಹಲವು ಕಾಮಾಗಾರಿಗಳನ್ನು ಚೀನಾ ಭಾರತದ ಭೂಪ್ರದೇಶದಲ್ಲಿ ನಡೆಸುತ್ತಿದೆ. ಕಳೆದ ಕೆಲ ತಿಂಗಳಗಳಿಂದ ಚೀನಾ ಈ ಕಾಮಾಗಾರಿ ನಡೆಸಿದೆ. ಬಹುತೇಕ ಕಾಮಾಗಾರಿ ಪೂರ್ಣಗೊಂಡಿದೆ. ಇದರ ಮುಂದುವರಿದ ಭಾಗವಾಗಿ ಚೀನಾ ಭೂಪಟ ಬಿಡುಗಡೆ ಮಾಡಿತ್ತು. ಚೀನಾ ಭೂಪಟ ಕುರಿತು ಭಾರತ ವಿದೇಶಾಂಗ ಸಚಿವ ಎಸ್ ಜೈಶಂಕರ್ ತಿರುಗೇಟು ನೀಡಿದ್ದಾರೆ. ಚೀನಾದ ನಡೆ ದ್ವಪಕ್ಷೀಯ ಸಂಬಂಧಕ್ಕೆ ಧಕ್ಕೆಯಾಗಲಿದೆ ಎಂದು ಎಚ್ಚರಿಸಿದ್ದಾರೆ. ಆದರೆ ಭಾರತದ ಯಾವುದೇ ಎಚ್ಚರಿಕೆಗೆ ಚೀನಾ ಕ್ಯಾರೇ ಅಂದಿಲ್ಲ.
ಭಾರತದ ಅಕ್ಸಾಯ್ ಚಿನ್‌ನಲ್ಲಿ ತನ್ನದೆಂದು ಚೀನಾ ನಕ್ಷೆ ಬಿಡುಗಡೆ, ಚೈನೀಸ್ ಬಂಕರ್, ಸುರಂಗ ಪತ್ತೆ
ಭಾರತದ ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್ ಪ್ರದೇಶವನ್ನೂ ಸೇರಿಸಿಕೊಂಡು ಚೀನಾ 2023ನೇ ಸಾಲಿನ ತನ್ನ ದೇಶದ ಅಧಿಕೃತ ನಕ್ಷೆಯನ್ನು ಬಿಡುಗಡೆ ಮಾಡಿದೆ. ಜೊತೆಗೆ ತೈವಾನ್ ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿರುವ ಇನ್ನಿತರ ವಿವಾದಿತ ಪ್ರದೇಶಗಳನ್ನೂ ಈ ನಕ್ಷೆಯಲ್ಲಿ ಸೇರಿಸಿಕೊಂಡಿದೆ.
ಅರುಣಾಚಲ ಪ್ರದೇಶ ನಮ್ಮ ದೇಶದ ಅವಿಭಾಜ್ಯ ಅಂಗ ಎಂದು ಭಾರತ ಸಾಕಷ್ಟುಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೇಳುತ್ತಾ ಬಂದಿದ್ದರೂ ಚೀನಾ ಮತ್ತೊಮ್ಮೆ ಅದನ್ನು ಸೇರಿಸಿಕೊಂಡು ನಕ್ಷೆ ಬಿಡುಗಡೆ ಮಾಡುವ ಮೂಲಕ ಉದ್ಧಟತನ ಮೆರೆದಿದೆ. ಇದರಲ್ಲಿ ಅರುಣಾಚಲ ಪ್ರದೇಶದ ತವಾಂಗ್ ಮತ್ತಿತರೆ ಪ್ರದೇಶಗಳನ್ನು ಚೀನಾಕ್ಕೆ ಸೇರಿದ್ದು ಎನ್ನುವ ರೀತಿಯಲ್ಲಿ ಚಿತ್ರಿಸಲಾಗಿದೆ.
ಗಡಿ ಗಲಾಟೆ ತೆಗೆದ ಚೀನಾ, ವಿಸ್ತರಣಾವಾದಿಗೆ ಉತ್ತರ ನೀಡುತ್ತಾ ಭಾರತ?
ಈ ನಡುವೆ ಚೀನಾ ವರ್ತನೆಗೆ ತೀಕ್ಷ$್ಣ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್, ‘ಅಸಂಬದ್ಧ ಹೇಳಿಕೆ ನೀಡುವುದರಿಂದ ಯಾವುದೇ ದೇಶದ ಭೂಭಾಗ ನಿಮ್ಮದಾಗದು. ಚೀನಾ ಹಿಂದಿನಿಂದಲೂ ಇಂಥ ವರ್ತನೆ ತೋರಿಕೊಂಡೇ ಬಂದಿದೆ. ಮತ್ತೊಂದು ದೇಶದ ಭೂಭಾಗವನ್ನು ನಿಮ್ಮ ಭೂಪಟದಲ್ಲಿ ತೋರಿಸಿದಾಕ್ಷಣ ಅದು ನಿಮ್ಮದಾಗದು’ ಎಂದು ಹೇಳಿದ್ದಾರೆ. ಮತ್ತೊಂದೆಡೆ, ‘ಇಂಥ ಎಲ್ಲ ಹೇಳಿಕೆಗಳನ್ನು ನಾವು ತಳ್ಳಿಹಾಕುತ್ತೇವೆ. ಚೀನಾದ ಇಂಥ ನಡೆಗಳು ಗಡಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಕ್ರಿಯೆಯನ್ನು ಇನ್ನಷ್ಟುಕ್ಲಿಷ್ಟಗೊಳಿಸುತ್ತದೆ. ಚೀನಾದ ಹೇಳಿಕೆ ಕುರಿತು ನಾವು ರಾಜತಾಂತ್ರಿಕ ಮಾರ್ಗಗಳ ಮೂಲಕ ನಮ್ಮ ಪ್ರಬಲ ವಿರೋಧ ವ್ಯಕ್ತಪಡಿಸಿದ್ದೇವೆ’ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗ್ಚಿ ಪ್ರತಿಕ್ರಿಯಿಸಿದ್ದಾರೆ.