ಗಡಿ ಗಲಾಟೆ ತೆಗೆದ ಚೀನಾ, ವಿಸ್ತರಣಾವಾದಿಗೆ ಉತ್ತರ ನೀಡುತ್ತಾ ಭಾರತ?
ಚೀನಾ ಮತ್ತೆ ಗಡಿ ಗಲಾಟೆ ತೆಗೆದಿದೆ. ಅರುಣಾಚಲ ಪ್ರದೇಶ ಹಾಗೂ ಅಕ್ಸಾಯ್ ಚಿನ್‌ನ ಕೆಲ ಪ್ರದೇಶಗಳನ್ನು ತನ್ನ ಭಾಗ ಎಂದು ಹೇಳಿರುವ ಹೊಸ ಮ್ಯಾಪ್‌ಅನ್ನು ಚೀನಾ ಬಿಡುಗಡೆ ಮಾಡಿದೆ.
ನವದೆಹಲಿ (ಆ.29): ಚೀನಾ ತನ್ನ ಅಧಿಕೃತ ನಕ್ಷೆಯನ್ನು ಸೋಮವಾರ (ಆಗಸ್ಟ್ 28) ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದ ಅರುಣಾಚಲ ಪ್ರದೇಶ, ಅಕ್ಸಾಯ್ ಚೀನಾ, ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರವನ್ನು ತನ್ನ ಭೂಪ್ರದೇಶದ ಭಾಗ ಎಂದು ತೋರಿಸಿದೆ. ಚೀನಾದ ಅಧಿಕೃತ ಸುದ್ದಿ ಪತ್ರಿಕೆಯು ಹೊಸ ನಕ್ಷೆಯನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ.ೆ ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯವು ಹೋಸ್ಟ್ ಮಾಡಿದ ಸ್ಟ್ಯಾಂಡರ್ಡ್ ಮ್ಯಾಪ್ ಸೇವೆಯ ವೆಬ್‌ಸೈಟ್‌ನಲ್ಲಿ ಹೊಸ ನಕ್ಷೆಯನ್ನು ಬಿಡುಗಡೆ ಮಾಡಲಾಗಿದೆ. ಚೀನಾ ಮತ್ತು ವಿಶ್ವದ ವಿವಿಧ ದೇಶಗಳ ಗಡಿಗಳ ರೇಖಾಚಿತ್ರ ವಿಧಾನದ ಆಧಾರದ ಮೇಲೆ ಈ ನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಲಡಾಖ್‌ನ ಪಾಂಗಾಂಗ್ ಕಣಿವೆಯಲ್ಲಿ ಚೀನಾ ಅತಿಕ್ರಮಣ ಮಾಡಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇತ್ತೀಚೆಗೆ ಹೇಳಿದ್ದರು. ರಾಹುಲ್ ಗಾಂಧಿಯವರು ತಮ್ಮ ಲಡಾಖ್ ಭೇಟಿಯ ಸಂದರ್ಭದಲ್ಲಿ ಚೀನಾದ ಬಗ್ಗೆ ಹೇಳಿದ ಮಾತುಗಳು ಸರಿಯಾಗಿವೆ ಎಂದು ಶಿವಸೇನಾ ಉದ್ಧವ್ ಬಣದ ಸಂಸದ ಸಂಜಯ್ ರಾವುತರ್ ಹೇಳೀದ್ದಾರೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು ಮತ್ತು ಕ್ಸಿ ಜಿನ್‌ಪಿಂಗ್ ಅವರನ್ನು ಅಭಿನಂದಿಸಿದರು. ಅದರ ಬೆನ್ನಲ್ಲಿಯೇ ಚೀನಾ ಈ ನಕ್ಷೆಯನ್ನು ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರಕ್ಕೆ ಧೈರ್ಯವಿದ್ದರೆ ಚೀನಾ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಲಿ ಎಂದು ಹೇಳಿದ್ದಾರೆ.
ಚೀನಾದ ಈ ಮ್ಯಾಪ್ ಅಸಂಬದ್ಧ ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಹೇಳಿದ್ದಾರೆ. ಚೀನಾದ ನಕ್ಷೆಗಳು ಪ್ರಮಾಣಿತ ನಕ್ಷೆಗಳಲ್ಲ. ಇವು ಭಾರತ-ಚೀನಾ ಗಡಿ ವಿವಾದದ ಇತಿಹಾಸಕ್ಕೆ ಹೊಂದಿಕೆಯಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಚೀನಾದ ಹೇಳಿಕೆ ಅಸಂಬದ್ಧವಾಗಿದೆ. ಇಂದಿನ ನಿಜವಾದ ಸಮಸ್ಯೆಯೆಂದರೆ ಚೀನಿಯರು ಥಿಯೇಟರ್ ಮಟ್ಟದಲ್ಲಿ ಹಲವಾರು ಹಂತಗಳಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಜಿ 20 ಸಭೆಗೆ ಬರಲಿದ್ದಾರೆ. ಇಂತಹ ಸಂದರ್ಭಗಳಲ್ಲಿ ಜಿನ್‌ಪಿಂಗ್‌ಗೆ ಆತಿಥ್ಯ ವಹಿಸುವುದು ಭಾರತದ ಸ್ವಾಭಿಮಾನಕ್ಕೆ ಅನುಗುಣವಾಗಿರುತ್ತದೆಯೇ ಎಂಬುದನ್ನು ಸರ್ಕಾರ ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದಿದ್ದಾರೆ.
ಎಲ್‌ಎಸಿ ಉದ್ದಕ್ಕೂ 2000 ಚದರ ಕಿಮೀ ಭಾರತೀಯ ಭೂಪ್ರದೇಶವನ್ನು ಚೀನಾ ಅಕ್ರಮವಾಗಿ ಆಕ್ರಮಿಸಿಕೊಂಡಿದೆ, ಅದನ್ನು ತೆರವು ಮಾಡಬೇಕಾಗಿದೆ. ಚೀನಾದ ನಕ್ಷೆಗಳು ಅಸಂಬದ್ಧವಾಗಿದೆ. ಇದು ಚೀನಾದ ಇತಿಹಾಸಕ್ಕೆ ಹೊಂದಿಕೆಯಾಗೋದಿಲ್ಲ ಎಂದು ಅವರು ಹೇಳಿದ್ದಾರೆ.
ಅರುಣಾಚಲದ 11 ಪ್ರದೇಶಗಳ ಹೆಸರು ಬದಲಿಸಿದ್ದ ಚೀನಾ: ಇದಕ್ಕೂ ಮೊದಲು, ಏಪ್ರಿಲ್ 2023 ರಲ್ಲಿ, ಚೀನಾ ತನ್ನ ನಕ್ಷೆಯಲ್ಲಿ ಅರುಣಾಚಲ ಪ್ರದೇಶದ 11 ಸ್ಥಳಗಳ ಹೆಸರನ್ನು ಬದಲಾಯಿಸಿತ್ತು. ಕಳೆದ 5 ವರ್ಷಗಳಲ್ಲಿ ಚೀನಾ ಮೂರನೇ ಬಾರಿ ಈ ಕೃತ್ಯ ಮಾಡಿದೆ. ಇದಕ್ಕೂ ಮುನ್ನ 2021ರಲ್ಲಿ ಚೀನಾ 15 ಹಾಗೂ 2017ರಲ್ಲಿ 6 ಸ್ಥಳಗಳ ಹೆಸರನ್ನು ಬದಲಾಯಿಸಿತ್ತು. ಚೀನಾದ ಈ ಕೃತ್ಯಕ್ಕೆ ಭಾರತದ ವಿದೇಶಾಂಗ ಸಚಿವಾಲಯ ಪ್ರತೀಕಾರ ತೀರಿಸಿಕೊಂಡಿತ್ತು. ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ 'ನಾವು ಈ ಹಿಂದೆಯೂ ಚೀನಾದ ಇಂತಹ ವರ್ತನೆಗಳ ವರದಿಗಳನ್ನು ನೋಡಿದ್ದೇವೆ. ನಾವು ಈ ಹೊಸ ಹೆಸರುಗಳನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿಯೇ ಇತ್ತು, ಇದೆ ಮತ್ತು ಉಳಿಯುತ್ತದೆ. ಈ ರೀತಿ ಹೆಸರನ್ನು ಬದಲಾಯಿಸುವುದರಿಂದ ವಾಸ್ತವ ಬದಲಾಗುವುದಿಲ್ಲ' ಎಂದಿದ್ದರು.
ವಧು 25 ವರ್ಷದೊಳಗಿದ್ದರೆ ಮದುವೆಯಾಗುವ ಜೋಡಿಗೆ 11 ಸಾವಿರ ರೂ, ಹೊಸ ಯೋಜನೆ ಜಾರಿ!
ಚೀನಾ ಅರುಣಾಚಲ ಪ್ರದೇಶವನ್ನು ಭಾರತದ ರಾಜ್ಯವೆಂದು ಗುರುತಿಸಲೇ ಇಲ್ಲ. ಅವರು ಅರುಣಾಚಲವನ್ನು 'ದಕ್ಷಿಣ ಟಿಬೆಟ್'ನ ಭಾಗವೆಂದು ವಿವವರಿಸಿದೆ. ಭಾರತ ತನ್ನ ಟಿಬೆಟಿಯನ್ ಪ್ರದೇಶವನ್ನು ವಶಪಡಿಸಿಕೊಂಡು ಅರುಣಾಚಲ ಪ್ರದೇಶವನ್ನಾಗಿ ಮಾಡಿದೆ ಎಂದು ಅದು ಆರೋಪಿಸಿದೆ.
ಚೀನಾದಿಂದ ಮತ್ತೆ ಕಿರಿಕ್, ಅರುಣಾಚಲ ಪ್ರದೇಶ ತನ್ನ ತೆಕ್ಕೆಗೆ ಸೇರಿಸಿ ಹೊಸ ಮ್ಯಾಪ್ ಬಿಡುಗಡೆ!
ಚೀನಾದ ಅಧಿಕೃತ ಪತ್ರಿಕೆ 'ಗ್ಲೋಬಲ್ ಟೈಮ್ಸ್' ಪ್ರಕಾರ, ಸೋಮವಾರ, ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು 11 ಹೆಸರುಗಳ ಬದಲಾವಣೆಗೆ ಅನುಮೋದನೆ ನೀಡಿದೆ. ಈ ಎಲ್ಲಾ ಪ್ರದೇಶಗಳು ಝೆಂಗ್ನಾನ್ (ಚೀನಾದ ದಕ್ಷಿಣ ಪ್ರಾಂತ್ಯದ ಕ್ಸಿನ್‌ಜಿಯಾಂಗ್‌ನ ಭಾಗ) ಅಡಿಯಲ್ಲಿ ಬರುತ್ತವೆ. ಇವುಗಳಲ್ಲಿ 4 ಜನವಸತಿ ಪ್ರದೇಶಗಳಾಗಿವೆ. ಇವುಗಳಲ್ಲಿ ಒಂದು ಪ್ರದೇಶವು ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರಕ್ಕೆ ಬಹಳ ಹತ್ತಿರದಲ್ಲಿದೆ. 5 ಗುಡ್ಡಗಾಡು ಪ್ರದೇಶಗಳು ಮತ್ತು ಎರಡು ನದಿಗಳಿವೆ. ಚೀನಾ ಈ ಪ್ರದೇಶಗಳಿಗೆ ಮ್ಯಾಂಡರಿನ್ ಮತ್ತು ಟಿಬೆಟಿಯನ್ ಭಾಷೆಗಳಲ್ಲಿ ಹೆಸರಿಸಿದೆ.