Asianet Suvarna News Asianet Suvarna News

ಸಾರಾನಾಥದ ಸಿಂಹ vs ಸಂಸತ್‌ ಭವನದ ಸಿಂಹ: ವ್ಯತ್ಯಾಸಗಳನ್ನು ತಿಳಿಸಿದ ಕೇಂದ್ರ ಸಚಿವ!

ಹೊಸ ಸಂಸತ್ ಭವನದ ಛಾವಣಿಯ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅನಾವರಣ ಮಾಡಿರುವ ರಾಷ್ಟ್ರ ಲಾಂಛನ ಹಾಗೂ ಅದರಲ್ಲಿರುವ ಸಿಂಹಗಳ ಉಗ್ರಾವತಾರದ ಬಗ್ಗೆ ವಿರೋಧ ಪಕ್ಷಗಳು ಟೀಕೆ ಆರಂಭಿಸಿವೆ. ಇದರ ಬೆನ್ನಲ್ಲಿಯೇ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್‌ ಸಿಂಗ್‌ ಪುರಿ, ಈ ಎರಡೂ ರಚನೆಗಳಲ್ಲಿ ವ್ಯತ್ಯಾಸಗಳನ್ನು ಪಟ್ಟಿ ಮಾಡಿ ಟ್ವೀಟ್‌ ಮಾಡಿದ್ದಾರೆ.
 

sarnath and New parliament Building National Emblem lions difference explained by central minister hardeep singh puri san
Author
Bengaluru, First Published Jul 12, 2022, 8:22 PM IST

ನವದೆಹಲಿ (ಜುಲೈ 12): ಬರೋಬ್ಬರಿ 9500 ಕೆಜಿ ತೂಕದ, ಪರಿಶುದ್ಧ ಕಂಚಿನಿಂದ ನಿರ್ಮಾಣವಾಗಿರುವ ರಾಷ್ಟ್ರ ಲಾಂಛನವನ್ನು ಹೊಸ ಸಂಸತ್‌ ಭವನದ ಛಾವಣಿಯ ಮೇಲೆ ಸ್ಥಾಪಿಸಲಾಗಿದೆ. ಇದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಉದ್ಘಾಟನೆ ಮಾಡಿದ್ದರು. ಮೊದಲಿಗೆ ಪ್ರಧಾನಮಂತ್ರಿ, ಲೋಕಸಭೆಯ ರಚನೆಯನ್ನು ಅನಾವರಣ ಮಾಡುವ ಹಿಂದಿನ ಸಾಂವಿಧಾನಿಕ ಬದ್ಧತೆಯನ್ನು ಪ್ರಶ್ನೆ ಮಾಡಿದ್ದ ವಿರೋಧ ಪಕ್ಷಗಳು ಈಗ ಸಂಸತ್‌ ಭವನದ ಮೇಲಿನ ರಾಷ್ಟ್ರಲಾಂಛನವನ್ನು ಮೋದಿ ಸರ್ಕಾರ ವಿರೂಪ ಮಾಡಿದೆ ಎಂದು ಆರೋಪಿಸಿದೆ. ಸಾರಾನಾಥದ ಅಶೋಕ ಸ್ತಂಭದ ಮೇಲಿರುವ ಸಿಂಹಗಳು ಸೌಮ್ಯ ಹಾಗೂ ವಿನಮ್ರವಾಗಿದ್ದವು, ಆದರೆ, ಸಂಸತ್‌ ಭವನದ ಮೇಲೆ ನಿರ್ಮಿಸಲಾಗಿರುವ ರಾಷ್ಟ್ರ ಲಾಂಛನದಲ್ಲಿನ ಸಿಂಹಗಳ ಬಲಿಷ್ಠ ಸ್ನಾಯುಗಳನ್ನು ಹೊಂದಿದ್ದು, ಆಕ್ರಮಣಕಾರಿಯಾಗಿ ಘರ್ಜನೆ ಮಾಡುತ್ತಿರುವಂತಿದೆ ಎಂದು ಕಾಂಗ್ರೆಸ್‌ ನೇತೃತ್ವದಲ್ಲಿ ವಿರೋಧ ಪಕ್ಷಗಳು ಟೀಕೆ ಮಾಡಿವೆ. ಇದರ ಬೆನ್ನಲ್ಲಿಯೇ ಬಿಜೆಪಿ ಕೂಡ ವಿರೋಧ ಪಕ್ಷಗಳ ಟೀಕೆಗೆ ಅಷ್ಟೇ ಬಲಿಷ್ಠವಾಗಿ ಉತ್ತರ ನೀಡಿದೆ. ಸಂವಿಧಾನವನ್ನು ಮುರಿದ ವ್ಯಕ್ತಿಗಳಿಂದ ರಾಷ್ಟ್ರ ಲಾಂಛನದ ಬಗ್ಗೆ ಪಾಠ ಕೇಳುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. 

ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್‌ ಸಿಂಗ್‌ ಪುರಿ ( hardeep singh puri ), ಸಾರನಾಥದಲ್ಲಿರುವ ಸಿಂಹಗಳು (Lions) ಹಾಗೂ ಸಂಸತ್ ಭವನದ ಸಿಂಹಗಳ ನಡುವಿನ ವ್ಯತ್ಯಾಸಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡುವ ಪ್ರಕಟಿಸಿದ್ದಾರೆ. "ಇದು ದೃಷ್ಟಿಕೋನದ ಪ್ರಜ್ಞೆ. ನಮ್ಮ ಎದುರಿನ ಯಾವುದೇ ವಸ್ತುವಿನ ಸೌಂದರ್ಯ ಹೇಗಿರಲಿದೆ ಎನ್ನುವುದು ನಾವು ನೋಡುವ ಕಣ್ಣುಗಳಲ್ಲಿ ಇರುತ್ತದೆ. ಅದೇ ರೀತಿ ಶಾಂತ ಹಾಗೂ ಕೋಪವೂ ಕೂಡ ಹೌದು. ಸಾರಾನಾಥದ ಅಶೋಕ ಸ್ತಂಭದಲ್ಲಿರುವ ರಾಷ್ಟ್ರ ಲಾಂಛನ ಕೇವಲ 1.6 ಮೀಟರ್‌ ಎತ್ತರವಿದೆ. ಇನ್ನು ಹೊಸ ಸಂಸತ್‌ ಭವನದ ಮೇಲೆ ಇಡಲಾಗಿರುವ ರಾಷ್ಟ್ರ ಲಾಂಛನ ಬರೋಬ್ಬರಿ 6.5 ಮೀಟರ್‌ ಎತ್ತರವಾಗಿದೆ' ಎಂದು ಟ್ವೀಟ್‌ ಮಾಡಿದ್ದಾರೆ.

ಸರಣಿ ಟ್ವೀಟ್‌ ಮಾಡಿದ ಕೇಂದ್ರ ಸಚಿವ: "ಹೊಸ ಕಟ್ಟಡದ ಮೇಲೆ ನಿಖರವಾದ ಸಾರನಾಥದಲ್ಲಿರುವ (sarnath) ಅಷ್ಟೇ ಎತ್ತರದ ರಾಷ್ಟ್ರಲಾಂಛನವನ್ನುಇರಿಸಿದರೆ, ಅದು ತುಂಬಾ ದೂರದವರೆಗೆ ಆಚೆಗೆ ಗೋಚರಿಸುವುದಿಲ್ಲ. ಹೊಸ ಲಾಂಛನವು ನೆಲದಿಂದ 33 ಮೀಟರ್ ಎತ್ತರದಲ್ಲಿದೆ ಮತ್ತು ಸಾರನಾಥದಲ್ಲಿ ಇರಿಸಲಾಗಿರುವ ಮೂಲವು ನೆಲದ ಮಟ್ಟದಲ್ಲಿದೆ ಎನ್ನುವುದನ್ನು ಆಪಾದನೆ ಮಾಡುತ್ತಿರುವ "ತಜ್ಞರು' ಮೊದಲಿಗೆ ತಿಳಿದುಕೊಳ್ಳಬೇಕು' ಎಂದು ಇನ್ನೊಂದು ಮೂಲ ಮಾದರಿಯ ಮಾಹಿತಿಗಳನ್ನು ಒಳಗೊಂಡ ಚಿತ್ರದೊಂದಿಗೆ ಟ್ವೀಟ್‌ ಮಾಡಿದ್ದಾರೆ.

ಯಾವುದೇ ಭಿನ್ನ ವ್ಯತ್ಯಾಸವಿಲ್ಲ: "ಎರಡು ರಚನೆಗಳನ್ನು ಹೋಲಿಸಿದಾಗ ಕೋನ, ಎತ್ತರ ಮತ್ತು ಪ್ರಮಾಣದ ಪ್ರಭಾವವನ್ನು ನಿಜಕ್ಕೂ ಮೆಚ್ಚಬೇಕಾಗುತ್ತದೆ. ಹಾಗೇನಾದರೂ ಸಾರನಾಥ ಲಾಂಛನವನ್ನು ಕೆಳಗಿನಿಂದ ನೋಡಿದರೆ ಅದು ಚರ್ಚಿಸುತ್ತಿರುವಂತೆ ಶಾಂತವಾಗಿ ಅಥವಾ ಕೋಪದಿಂದ ಕಾಣುತ್ತದೆ' ಎಂದು ಪ್ರತಿಕೃತಿಯ ಚಿತ್ರದೊಂದಿಗೆ ಟ್ವೀಟ್‌ ಮಾಡಿದ್ದಾರೆ. ಸಾರನಾಥ ಲಾಂಛನವನ್ನು ಅಳೆಯಲು ಅಥವಾ ಹೊಸ ಸಂಸತ್ತಿನ ಲಾಂಛನವನ್ನು ಮೂಲ ಗಾತ್ರಕ್ಕೆ ಇಳಿಸಿದರೆ ಯಾವುದೇ ವ್ಯತ್ಯಾಸವೂ ಕಾಣುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಪ್ರಧಾನಿಯಿಂದ ಸಾಂವಿಧಾನಿಕ ನಿಯಮ ಉಲ್ಲಂಘನೆ: ವಿಪಕ್ಷಗಳ ಆಹ್ವಾನಿಸದ್ದಕ್ಕೆ ಆಕ್ರೋಶಕ್ಕೆ ಕಾರಣವೇನು?

ಹಿರಿಯ ವಕೀಲ ಮತ್ತು ಹೋರಾಟಗಾರ ಪ್ರಶಾಂತ್ ಭೂಷಣ್ (Prashant Bhushan) ಅವರು ರಾಷ್ಟ್ರೀಯ ಲಾಂಛನವನ್ನು (National Emblem) ಮಹಾತ್ಮ ಗಾಂಧಿಯವರೊಂದಿಗೆ "ಭವ್ಯವಾಗಿ" ಮತ್ತು "ಶಾಂತಿಯುತವಾಗಿ" ಕುಳಿತಿರುವ ಸಿಂಹಗಳೊಂದಿಗೆ ಮತ್ತು ಹೊಸ ಸಂಸತ್ತಿನ ಕಟ್ಟಡದ ಮೇಲೆ ಕೊರೆದ ಕೋರೆಹಲ್ಲುಗಳೊಂದಿಗೆ ಗಾಂಧಿಯ ಹಂತಕ ನಾಥುರಾಮ್ ಗೋಡ್ಸೆಯೊಂದಿಗೆ ಹೋಲಿಸಿದ್ದಾರೆ.

ಇದನ್ನೂ ಓದಿ: ರಾಷ್ಟ್ರ ಲಾಂಛನದ ಸಿಂಹದ ಉಗ್ರಾವತಾರಕ್ಕೆ ಕಾಂಗ್ರೆಸ್‌ ಕ್ಯಾತೆ, ಕೇಂದ್ರದ ವಿರುದ್ಧ ಮತ್ತೊಂದು ರಣಕಹಳೆ!

“ಗಾಂಧಿಯಿಂದ ಗೋಡ್ಸೆಯವರೆಗೆ; ಸಿಂಹಗಳು ಭವ್ಯವಾಗಿ & ಶಾಂತಿಯುತವಾಗಿ ಕುಳಿತಿರುವ ನಮ್ಮ ರಾಷ್ಟ್ರೀಯ ಲಾಂಛನದಿಂದ; ಸೆಂಟ್ರಲ್ ವಿಸ್ಟಾದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸಂಸತ್ತಿನ ಕಟ್ಟಡದ ಮೇಲ್ಭಾಗಕ್ಕೆ ಅನಾವರಣಗೊಂಡ ಹೊಸ ರಾಷ್ಟ್ರೀಯ ಲಾಂಛನಕ್ಕೆ; ಕೋರೆಹಲ್ಲುಗಳನ್ನು ಹೊಂದಿರುವ ಕೋಪಗೊಂಡ ಸಿಂಹಗಳು, ”ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. "ಇದು ಮೋದಿಯವರ ಹೊಸ ಭಾರತ!" ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಅವರು ಕಾಳಿ ದೇವಿಯ ಬಗ್ಗೆ ಇತ್ತೀಚೆಗೆ ಮಾಡಿದ ಹೇಳಿಕೆಗಳಿಗಾಗಿ ಟೀಕೆಗೆ ಗುರಿಯಾಗಿದ್ದಾರೆ, ಏನನ್ನೂ ಬರೆಯದೆ ರಾಷ್ಟ್ರೀಯ ಲಾಂಛನದ ಎರಡು ವಿಭಿನ್ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

Follow Us:
Download App:
  • android
  • ios