RIP Shivkumar Sharma ಖ್ಯಾತ ಸಂತೂರ್‌ ವಾದಕ ಪಂ. ಶಿವಕುಮಾರ್‌ ಶರ್ಮಾ ನಿಧನ

* ಖ್ಯಾತ ಸಂತೂರ್‌ ವಾದಕ ಪಂ. ಶಿವಕುಮಾರ್‌ ಶರ್ಮಾ ನಿಧನ

- ಇಂದು ಅಂತ್ಯಕ್ರಿಯೆ,ಮೋದಿ ಸೇರಿ ಅನೇಕ ಗಣ್ಯರ ಸಂತಾಪ

- ಸರ್ಕಾರಿ ಗೌರವದೊಂದಿಗೆ  ಅಂತ್ಯಕ್ರಿಯೆ

Renowned santoor player Shivkumar Sharma Dies at 84 PM modi rahul gandhi condoles ckm

ಮುಂಬೈ(ಮೇ.11): ಜನಪ್ರಿಯ ಸಂತೂರ್‌ ವಾದಕ ಪಂ. ಶಿವಕುಮಾರ್‌ ಶರ್ಮಾ (84) ಅವರು ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮುಂಬೈಯ ಪಾಲಿ ಹಿಲ್ಸ್‌ನಲ್ಲಿರುವ ತಮ್ಮ ಸ್ವಗೃಹದಲ್ಲೇ ಶರ್ಮಾ ಮುಂಜಾನೆ 8 ಗಂಟೆ ಸುಮಾರು ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ಶರ್ಮಾ ಅವರು ನಿರಂತರವಾಗಿ ಡಯಾಲಿಸಿಸ್‌ ಪ್ರಕ್ರಿಯೆಗೆ ಒಳಗಾಗುತ್ತಿದ್ದರು. ಆದರೆ ಸ್ನಾನಗೃಹದಲ್ಲಿ ಇರುವಾಗಲೇ ಆಕಸ್ಮಿಕವಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರ ಅಂತ್ಯಕ್ರಿಯೆಯನ್ನು ಬಧವಾರ ಸರ್ಕಾರಿ ಗೌರವದೊಂದಿಗೆ ನಡೆಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಜಾನಪದ ವಾದ್ಯವಾದ ‘ಸಂತೂರ್‌’ ವಾದಕರಾದ ಇವರು ಸಿಲ್‌ಸಿಲಾ, ಲಮ್ಹೆ, ಚಾಂದನಿ ಹಾಗೂ ಡರ್‌ ಮೊದಲಾದ ಚಿತ್ರಗಳಿಗೆ ಸಂಗೀತವನ್ನು ನಿರ್ದೇಶಿಸಿದ್ದರು.

ವಿದ್ಯುತ್ ತಗುಲಿ ಜ್ಯೂನಿಯರ್ ರವಿಚಂದ್ರನ್ ಖ್ಯಾತಿಯ ಕಲಾವಿದ ಸಾವು!

ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಸಂಗೀತಗಾರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಶಿವಕುಮಾರ್ ಶರ್ಮಾ ಸಾಧನೆಯನ್ನು ಕೊಂಡಾಡಿದ್ದಾರೆ. ಪಂಡಿತ್ ಶಿವಕುಮಾರ್ ಶರ್ಮಾಜಿ ನಿಧನದಿಂದ ಭಾರತದ ಸಾಂಸ್ಕೃತಿಕ ಜಗತ್ತು ಬಡವಾಗಿದೆ. ಸಂತೂರ್ ವಾದಕವನ್ನು ಜಾಗತಿಕ ಮಟ್ಟದಲ್ಲಿ ಖ್ಯಾತಿಗೊಳಿಸಿದ ಕೀರ್ತಿ ಶಿವಕುಮಾರ್ ಶರ್ಮಾಜಿ ಅವರಿಗೆ ಸಲ್ಲಲಿದೆ. ಅವರ ಜೊತೆಗಿನ ನನ್ನ ಮಾತುಕತೆಯನ್ನು ಅತ್ಯಂತ ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ.ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಸಂತಾಪಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

 1938ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹುಟ್ಟಿದ ಶಿವಕುಮಾರ್ ಶರ್ಮಾ ಅವರ ಮಾತೃಭಾಷೆ ದೋಗ್ರಿ. 5ನೇ ವಯಸ್ಸಿನಲ್ಲಿ ತಂದೆಯವರಿಂದ ತಬಲ ಹಾಗೂ ವಾದಕ ನುಡಿಸಲು ಆರಂಭಿಸಿದರು. 13ನೇ ವಯಸ್ಸಿಗೆ ಸಂತೂರ್ ವಾದಕ ನುಡಿಸಲು ಆರಂಭಿಸಿದರು. 1955ರಲ್ಲಿ ಮುಂಬೈನಲ್ಲಿ ಮೊದಲ ಕಾರ್ಯಕ್ರಮ ನಡೆಸಿಕೊಟ್ಟ ಶಿವಕುಮಾರ್ ಶರ್ಮಾ ಬಳಿಕ ಹಂತ ಹಂತವಾಗಿ ಸಾಧನೆ ಶಿಖರವೇರಿದ್ದಾರೆ.

ಸಂಗೀತ ಸಾಧಕ ಶಿವಕುಮಾರ್ ಶರ್ಮಾ ಅವರಿಗೆ 1991ರಲ್ಲಿ ಪದ್ಮಶ್ರಿ ಪ್ರಶಸ್ತಿ ಲಭಿಸಿಸಿದೆ. ಇನ್ನು 2001ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಅಮೆರಿಕದ ಬಾಲ್ಟಿಮೋರ್‌ನ ಗೌರವ ಪೌರತ್ವ, 1986ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

'ಅವನು ಒಬ್ಬನೇ ಬರೋನು..ಮಾನ್ ಸ್ಟರ್' ಡೈಲಾಗ್ ಹೊಡೆದು KGFನಲ್ಲಿ ಮಿಂಚಿದ್ದ ನಟ ಮೋಹನ್ ಜುನೇಜ ಇನ್ನಿಲ್ಲ

ಬಾಲಿವುಡ್ ಗೈಡ್ ಚಿತ್ರದಲ್ಲಿ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಹಾಡಿದ ಅತ್ಯಂತ ಜನಪ್ರಿಯ ಗೀತೆ ಮೋ ಸೆ ತಲ್ ಕಿಯೇ ದಾಯೆ ಹಾಡಿಗೆ ಶಿವಕುಮಾರ್ ಶರ್ಮಾ ತಬಲಾ ನುಡಿಸಿದ್ದಾರೆ. ಸಂತೂರ್ ವಾದಕದಲ್ಲೇ ಮಗ್ನರಾಗಿದ್ದ ಶಿವಕುಮಾರ್ ಅದ್ಬುತವಾಗಿ ತಬಲ ನುಡಿಸಬಲ್ಲರು. ಆರ್‌ಡಿ ಬರ್ಮನ್ ಅವರ ಒತ್ತಾಯದ ಮೇರೆಗೆ ಗೈಡ್ ಚಿತ್ರದ ಹಾಡಿದೆ ಶಿವಕುಮಾರ್ ತಬಲಾ ನುಡಿಸಿದ್ದಾರೆ.

ಶಿವಕುಮಾರ್ ಶರ್ಮಾ ಅವರ ಪುತ್ರ ರಾಹುಲ್ ಶರ್ಮಾ ಕೂಡ ಸಂತೂರ್ ವಾದಕರಾಗಿದ್ದಾರೆ. ಇವರಿಬ್ಬರು ಜೊತೆಯಾಗಿ 1996ರಿಂದ ಹಲವು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

Latest Videos
Follow Us:
Download App:
  • android
  • ios