ವಂದೇ ಭಾರತ್‌ನ ಮಹಿಳಾ ಲೋಕೋ ಪೈಲಟ್‌ಗೆ ಮೋದಿ ಪ್ರಮಾಣ ವಚನಕ್ಕೆ ವಿಶೇಷ ಆಹ್ವಾನ

ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಬಾರಿ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ವಂದೇ ಭಾರತ್‌ನ ಮಹಿಳಾ ಲೋಕೋ ಪೈಲಟ್‌ ಒಬ್ಬರಿಗೆ ಆಹ್ವಾನ ನೀಡಲಾಗಿದೆ.  

sanitation workers transgenders labourers and Vande Bharat Women Loco Pilot gest Special Invite for Modi Swearing In akb

ನವದೆಹಲಿ: ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಬಾರಿ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ವಂದೇ ಭಾರತ್‌ನ ಮಹಿಳಾ ಲೋಕೋ ಪೈಲಟ್‌ ಒಬ್ಬರಿಗೆ ಆಹ್ವಾನ ನೀಡಲಾಗಿದೆ.  ದಕ್ಷಿಣ ರೈಲ್ವೆ ವಿಭಾಗದಲ್ಲಿ ಕೆಲಸ ಮಾಡುವ ವಂದೇ ಭಾರತ್ ರೈಲಿನ ಲೋಕೋ ಪೈಲಟ್ ಐಶ್ವರ್ಯಾ ಮೆನನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ವಿಶೇಷ ಆಹ್ವಾನ ನೀಡಲಾಗಿದೆ. ದಕ್ಷಿಣ ರೈಲ್ವೆಯ ಚೆನ್ನೈ ವಿಭಾಗದ ಹಿರಿಯ ಸಹಾಯಕ ಲೋಕೋ ಪೈಲಟ್ ಆಗಿ ಐಶ್ವರ್ಯಾ ಮೆನನ್ ಅವರು ಕೆಲಸ ಮಾಡುತ್ತಿದ್ದಾರೆ. 

ಇಂದು ಸಂಜೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.  ಇಂತಹ ಜೀವನದಲ್ಲಿ ಒಮ್ಮೆ ಮಾತ್ರ ಸಿಗಬಹುದಾದಂತಹ ಅವಕಾಶಕ್ಕೆ ಈಗ ಐಶ್ವರ್ಯಾ ಮೆನನ್ ಪಾತ್ರರಾಗಿದ್ದಾರೆ. ಐಶ್ವರ್ಯಾ ಅವರು ತಮ್ಮ ರೈಲ್ವೆ ಸೇವೆಯಲ್ಲಿ ತಮ್ಮ ಚುರುಕುತನ, ಜಾಗರೂಕತೆ ಮತ್ತು ರೈಲ್ವೆ ಸಿಗ್ನಲಿಂಗ್‌ನ ಸಮಗ್ರ ಜ್ಞಾನಕ್ಕಾಗಿ ಅವರ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಪಡೆದಿದ್ದಾರೆ.  ಚೆನ್ನೈ-ವಿಜಯವಾಡ ಮತ್ತು ಚೆನ್ನೈ-ಕೊಯಂಬತ್ತೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗಳು ಜಾರಿಗೆ ಬಂದ ನಂತರ ಈ ಲೇನ್‌ಗಳಲ್ಲಿ ಅವರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.

ಐಶ್ವರ್ಯ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಜನ ಶತಾಬ್ದಿಯಂತಹ ಪ್ರತಿಷ್ಠಿತ ರೈಲುಗಳನ್ನು 2 ಲಕ್ಷಕ್ಕೂ ಹೆಚ್ಚು ಫುಟ್‌ಪ್ಲೇಟ್ ಗಂಟೆಗಳ ಕಾಲ ಪೈಲಟ್ ಮಾಡುವ ಮೂಲಕ ಗಮನಾರ್ಹ ಸಾಧನೆಯನ್ನು ಸಾಧಿಸಿದ್ದಾರೆ.

ವಂದೇ ಭಾರತ್ ಮತ್ತು ಮೆಟ್ರೋ ರೈಲುಗಳಲ್ಲಿ ಕೆಲಸ ಮಾಡುವ ರೈಲ್ವೆ ಉದ್ಯೋಗಿಗಳಲ್ಲಿ ಐಶ್ವರ್ಯಾ ಕೂಡ ಒಬ್ಬರಾಗಿದ್ದು ಇವರ ಜೊತೆಗೆ   ಕೇಂದ್ರದ ಯೋಜನೆಗಳ ಫಲಾನುಭವಿಗಳನ್ನು ಕೂಡ ವಿಕಸಿತ್ ಭಾರತ್ ರಾಯಭಾರಿಗಳು ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಜೊತೆಗೆ ಪೌರ ಕಾರ್ಮಿಕರು, ಮಂಗಳಮುಖಿಯರು ಮತ್ತು ಸೆಂಟ್ರಲ್ ವಿಸ್ಟಾ ಯೋಜನೆಯಲ್ಲಿ ಕೆಲಸ ಮಾಡಿದ ಕಾರ್ಮಿಕರನ್ನು ಕೂಡ ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ. 

'ಮೋದಿ ಪ್ರಮಾಣ ವಚನಕ್ಕೆ ನಾನು ಹೋಗೊಲ್ಲ' ಮಮತಾ ಬ್ಯಾನರ್ಜಿ ಬಹಿಷ್ಕಾರ!

Latest Videos
Follow Us:
Download App:
  • android
  • ios