Asianet Suvarna News Asianet Suvarna News

'ಮೋದಿ ಪ್ರಮಾಣ ವಚನಕ್ಕೆ ನಾನು ಹೋಗೊಲ್ಲ' ಮಮತಾ ಬ್ಯಾನರ್ಜಿ ಬಹಿಷ್ಕಾರ!

ನರೇಂದ್ರ ಮೋದಿ ವಿರುದ್ಧ ಈ ಸಲ ಜನರು ಚುನಾವಣೆಯಲ್ಲಿ ಮತ ಹಾಕಿದರು. ಆದರೂ ಅವರು ಜನಾದೇಶ ಧಿಕ್ಕರಿಸಿ ಮತ್ತೆ ಪ್ರಧಾನಿ ಆಗಲು ಹೊರಟಿದ್ದಾರೆ.

Wont go to modi 3.0 oath ceremony says mamata banerjee rav
Author
First Published Jun 9, 2024, 7:56 AM IST

ನವದೆಹಲಿ (ಜೂ.9): ನರೇಂದ್ರ ಮೋದಿ ವಿರುದ್ಧ ಈ ಸಲ ಜನರು ಚುನಾವಣೆಯಲ್ಲಿ ಮತ ಹಾಕಿದರು. ಆದರೂ ಅವರು ಜನಾದೇಶ ಧಿಕ್ಕರಿಸಿ ಮತ್ತೆ ಪ್ರಧಾನಿ ಆಗಲು ಹೊರಟಿದ್ದಾರೆ.

ಹೀಗಾಗಿ ಅವರ ಭಾನುವಾರದ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಟಿಎಂಸಿ ಬಹಿಷ್ಕರಿಸಲಿದೆ ಎಂದು ಪಕ್ಷದ ಮುಖ್ಯಸ್ಥೆ ಹಾಗೂ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಅಲ್ಲದೆ, ಬಿಜೆಪಿಗೆ ಏಕಾಂಗಿಯಾಗಿ ಬಹುಮತವಿಲ್ಲ.  ಹೀಗಾಗಿ ಮೋದಿ ಸರ್ಕಾರ ಎಷ್ಟು ದಿನ ಉಳಿಯುತ್ತೋ ಗೊತ್ತಿಲ್ಲ. ಒಂದೇ ದಿನಕ್ಕೆ ಸರ್ಕಾರ ಬಿದ್ದ ಉದಾಹರಣೆ ಇವೆ. ಇಂಡಿಯಾ ಕೂಟ ಈಗ ಸರ್ಕಾರ ರಚನೆಗೆ ಯತ್ನ ಮಾಡದೇ ಇರಬಹುದು. ಆದರೆ ಮುಂದೆ ಮಾಡಲೇಬಾರದು ಎಂದೇನಿಲ್ಲ ಎಂದೂ ಮಮತಾ ಹೇಳಿದ್ದಾರೆ.

ಪ್ರಧಾನಿಯಾಗಿ ಮೋದಿ ಪುನರಾಯ್ಕೆ; ವಿಶ್ವದ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್ ಶುಭಾಶಯ

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ 293 ಸ್ಥಾನ ಗೆದ್ದು ಅಧಿಕಾರದ ಭಾಗ್ಯ ಪಡೆದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟದ ಕೇಂದ್ರ ಸರ್ಕಾರ ಭಾನುವಾರ ಅಸ್ತಿತ್ವಕ್ಕೆ ಬರಲಿದೆ. ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಮಂತ್ರಿಮಂಡಲದ ಸದಸ್ಯರು ರಾತ್ರಿ 7.15ಕ್ಕೆ ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುವುದರೊಂದಿಗೆ ನೂತನ ಸರ್ಕಾರ ರಚನೆಯಾಗಲಿದೆ.

Latest Videos
Follow Us:
Download App:
  • android
  • ios