ಶಬರಿಮಲೆ ದ್ವಾರಪಾಲಕ ಮೂರ್ತಿಗಳು ಮತ್ತು ಗರ್ಭಗುಡಿಯ ಬಾಗಿಲಿನ ಚಿನ್ನ ಲೇಪಿತ ಕವಚಗಳಲ್ಲಿ ಚಿನ್ನ ಕಣ್ಮರೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ದೇಗುಲದ ಪ್ರಧಾನ ಅರ್ಚಕ ಕಂಡರಾರು ರಾಜೀವರು ಅವರನ್ನು ಶುಕ್ರವಾರ ಬಂಧಿಸಿದೆ.
ತಿರುವನಂತಪುರ : ಶಬರಿಮಲೆ ದ್ವಾರಪಾಲಕ ಮೂರ್ತಿಗಳು ಮತ್ತು ಗರ್ಭಗುಡಿಯ ಬಾಗಿಲಿನ ಚಿನ್ನ ಲೇಪಿತ ಕವಚಗಳಲ್ಲಿ ಚಿನ್ನ ಕಣ್ಮರೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ದೇಗುಲದ ಪ್ರಧಾನ ಅರ್ಚಕ ಕಂಡರಾರು ರಾಜೀವರು ಅವರನ್ನು ಶುಕ್ರವಾರ ಬಂಧಿಸಿದೆ. ಇದರಿಂದಾಗಿ ಒಟ್ಟು ಬಂಧಿತರ ಸಂಖ್ಯೆಯು 11ಕ್ಕೆ ಏರಿಕೆಯಾಗಿದೆ.
ಎಸ್‌ಐಟಿಯು ರಾಜೀವರು ಅವರನ್ನು ಬಂಧಿಸಿದೆ.
ಈಗಾಗಲೇ ಬಂಧಿತರಾಗಿರುವ ದೇಗುಲದ ಮಾಜಿ ಅರ್ಚಕ ಹಾಗೂ ಹಾಲಿ ಬೆಂಗಳೂರು ನಿವಾಸ ಉನ್ನಿಕೃಷ್ಣನ್ ಪೊಟ್ಟಿ ಮತ್ತು ಟಿಡಿಬಿ ಮಾಜಿ ಅಧ್ಯಕ್ಷ ಪದ್ಮಕುಮಾರ್ ಅವರ ಹೇಳಿಕೆ ಆಧರಿಸಿ ಎಸ್‌ಐಟಿಯು ರಾಜೀವರು ಅವರನ್ನು ಬಂಧಿಸಿದೆ.
ರಾಜೀವರು ಮತ್ತು ಪೊಟ್ಟಿ ಉತ್ತಮ ಗೆಳೆತನ
‘ರಾಜೀವರು ಮತ್ತು ಪೊಟ್ಟಿ ಉತ್ತಮ ಗೆಳೆತನ ಹೊಂದಿದ್ದರು. ಕವಚ ಹಾಗೂ ಮೂರ್ತಿಯ ಚಿನ್ನ ಬದಲಾವಣೆಗೆ (ಮರುಲೇಪನಕ್ಕೆ) ರಾಜೀವರು ಶಿಫಾರಸು ಮಾಡಿದ್ದರು. ಬಳಿಕ ಬದಲಾವಣೆಗೆ ಟಿಡಿಬಿ ಅನುಮತಿ ಕೇಳಿದಾಗ, ರಾಜೀವರು ಅದನ್ನು ಅಂಗೀಕರಿಸಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮರುಲೇಪನದ ವೇಳೆ ಚಿನ್ನ ಕಳವಾದ ಆರೋಪ ಕೇಳಿಬಂದಿತ್ತು.
ಶುಕ್ರವಾರ ಬೆಳಗ್ಗೆ ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಿ, ನಂತರ ಎಸ್‌ಐಟಿ ಕಚೇರಿಗೆ ಕರೆತಂದು ರಾಜೀವರು ಅವರನ್ನು ಎಸ್‌ಐಟಿ ಬಂಧಿಸಿದೆ.
ಇದಕ್ಕೂ ಮುನ್ನ ಉನ್ನಿಕೃಷ್ಣನ್ ಪೊಟ್ಟಿ, ಬಳ್ಳಾರಿಯ ಚಿನ್ನ ವ್ಯಾಪಾರಿ ಗೋವರ್ಧನ ಸೇರಿ ಹಲವರನ್ನು ಎಸ್ಐಟಿ ಬಂಧಿಸಿತ್ತು.


