Asianet Suvarna News Asianet Suvarna News

ಬಂಗಾಳ ನೂತನ ಗವರ್ನರ್‌ ಆಗಿ ಬೋಸ್‌ ಪ್ರಮಾಣವಚನ ಸ್ವೀಕಾರ

ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ನಡುವಿನ ಸಂಘರ್ಷಕ್ಕೆ ಸದಾ ಸುದ್ದಿಯಲ್ಲಿರುವ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸಿ.ವಿ ಆನಂದ ಬೋಸ್‌ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

S v Anand Bose sworn as west Bengal new Governor akb
Author
First Published Nov 24, 2022, 10:59 AM IST

ಕೋಲ್ಕತಾ: ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ನಡುವಿನ ಸಂಘರ್ಷಕ್ಕೆ ಸದಾ ಸುದ್ದಿಯಲ್ಲಿರುವ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸಿ.ವಿ ಆನಂದ ಬೋಸ್‌ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕೋಲ್ಕತಾ ಉಚ್ಚ (Kolkata High Court) ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಪ್ರಕಾಶ್‌ ಶ್ರಿವಾಸ್ತವ (Prakash Srivastava) ಅವರು ಆನಂದ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿ ರಾಜ್ಯದ ಹಲವು ಮಂತ್ರಿಗಳು ಹಾಗೂ ಸಭಾಪತಿ ಬೀಮನ್‌ ಬ್ಯಾನರ್ಜಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆದರೆ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ (Suvendu Adhikari) ಕಾರ್ಯಕ್ರಮಕ್ಕೆ ಗೈರಾಗಿದ್ದು ಗಮನ ಸೆಳೆಯಿತು.ಬೋಸ್‌ 1977ರ ಬ್ಯಾಚಿನ ನಿವೃತ್ತ ಐಎಎಸ್‌ ಅಧಿಕಾರಿಯಾಗಿದ್ದು ನ. 17 ರಂದು ಇವರ ನೇಮಕ ಆಗಿತ್ತು. ಜಗದೀಪ್‌ ಧನಕರ್‌ (Jagdeep Dhankar) ಉಪರಾಷ್ಟ್ರಪತಿಯಾಗಿ ನೇಮಕವಾದ ಬಳಿಕ ಈ ಸ್ಥಾನ ತೆರವಾಗಿತ್ತು.

ತಪ್ಪಾಗಿದೆ ಕ್ಷಮಿಸಿ, ಬಹಿರಂಗ ಕ್ಷಮೆ ಯಾಚಿಸಿದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ!

TMC ನಾಯಕರ ಜೊತೆ ಸುವೇಂದು ಅಧಿಕಾರಿ ಚರ್ಚೆ: ಬಿಜೆಪಿ ತೊರೆವ ಬಗ್ಗೆ ಗುಸುಗುಸು

Follow Us:
Download App:
  • android
  • ios