ಶೇಕ್‌ಹ್ಯಾಂಡ್ ಇಲ್ಲ, ನಮಸ್ತೆ ಮಾತ್ರ: ಪಾಕ್ ವಿದೇಶಾಂಗ ಸಚವರಿಗೆ ಭಾರತ ನೀಡಿದ ಸ್ವಾಗತ ವೈರಲ್!

ಸಾಂಘೈ ಸಹಕಾರ ಸಂಸ್ಥೆ ಸಭೆಗಾಗಿ ಭಾರತಕ್ಕೆ ಆಗಮಿಸಿದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋಗೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ನೀಡಿದ ಸ್ವಾಗತ ವೈರಲ್ ಆಗಿದೆ.

s jaishankar welcomes pak foreign minister bilawal bhutto to SCO Summit with Namasthe no shake hand ckm

ಗೋವಾ(ಮೇ.05): ಭಾರತದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆ ಸಭೆಯಲ್ಲಿ ಚೀನಾ ಸೇರಿದಂತೆ ಹಲವು ಪ್ರಮುಖ ದೇಶಗಳು ಪಾಲ್ಗೊಂಡಿದೆ. ಈ ಸಭೆಗಾಗಿ ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಬುಟ್ಟೋ ಗೋವಾಗೆ ಆಗಮಿಸಿದ್ದಾರೆ. ಈ ಮೂಲಕ  12 ವರ್ಷಗಳ ಬಳಿ ಪಾಕಿಸ್ತಾನ ವಿದೇಶಾಂಗ ಸಚಿವರೊಬ್ಬರು ಭಾರತಕ್ಕೆ ಆಗಮಿಸಿದ ಹೆಗ್ಗಳಿಕಗೆ ಪಾತ್ರರಾಗಿದ್ದಾರೆ. ಶಾಂಘೈ ಸಹಕಾರ ಸಂಸ್ಥೆಗೆ ಸಭೆಗೆ ಆಗಮಿಸಿದ ಬಿಲಾವಲ್ ಭುಟ್ಟೋಗೆ ಭಾರತ ನೀಡಿದ ಸ್ವಾಗತ ವೈರಲ್ ಆಗಿದೆ. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ನಮಸ್ತೆ ಮೂಲಕ ಬಿಲಾವಲ್ ಬುಟ್ಟೋಗೆ ಸ್ವಾಗತ ನೀಡಿದ್ದಾರೆ. ಆದರೆ ಪಾಕಿಸ್ತಾನ ಜೊತೆ ಹಸ್ತಲಾಘವ ಮಾಡಿಲ್ಲ. ಈ ವಿಡಿಯೋ ವೈರಲ್ ಆಗಿದೆ. 

ಶಾಂಘೈ ಸಹಕಾರಿ ಸಂಸ್ಥೆ ಸಭೆಗೂ ಮೊದಲು ನಾಯಕರೊಂದಿಗೆ ಫೋಟೋ ತೆಗೆಸಿಕೊಳ್ಳಲು ವೇದಿಕೆ ಹಾಕಲಾಗಿದೆ. ಈ ಸಭೆಗೆ ಆಗಮಿಸುವ ಎಲ್ಲಾ ದೇಶದ ಪ್ರತಿನಿಧಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಬಳಿಕ ಸಭೆ ನಡೆಯುತ್ತದೆ. ಹೀಗೆ ಎಸ್ ಜೈಶಂಕರ್ ಈ ವೇದಿಕೆಯಲ್ಲಿ ನಿಂತು ಎಲ್ಲರನ್ನು ಸ್ವಾಗತಿಸಿ ಫೋಟೋ ಕ್ಲಿಕ್ಕಿಸಿದ್ದಾರೆ. ಶಾಂಘೈ ಸಹಕಾರ ಸಂಸ್ಥೆಯಲ್ಲಿ ಪಾಲ್ಗೊಂಡ ಸಚಿವರನ್ನು ಸ್ವಾಗತಿಸಿ ಫೋಟೋ ಕ್ಲಿಕಿಸಿದ್ದಾರೆ. ಆದರೆ ಬಿಲಾವಲ್ ಭುಟ್ಟೋಗೆ ಜೈಶಂಕರ್ ನಮಸ್ತೆ ಮೂಲಕ ಸ್ವಾಗತಿಸಿದ್ದಾರೆ. ಫೋಟೋ ಬಳಿಕ ಹಸ್ತಲಾಘವ ಮಾಡಿಲ್ಲ. 

ಜಾಗತಿಕ ಶೃಂಗಸಭೆಯಲ್ಲಿ ಲೋಕಲ್ ಫೈಟ್, ರಷ್ಯಾ ಪ್ರತಿನಿಧಿಗೆ ಉಕ್ರೇನ್ ಸಂಸದನಿಂದ ಹಿಗ್ಗಾಮುಗ್ಗಾ ಗೂಸ!

ಪಾಕಿಸ್ತಾನ ಸಚಿವರು ಭಾರತಕ್ಕೆ ಆಗಮಿಸುತ್ತಿದ್ದಾರೆ ಅನ್ನೋ ಸುದ್ದಿ ಹೊರಬಿದ್ದ ಬೆನ್ನಲ್ಲೇ ದ್ವಿಪಕ್ಷೀಯ ಮಾತುಕತೆ ಕುರಿತು ಹಲವು ಪ್ರಶ್ನೆಗಳು ಎದ್ದಿತ್ತು. ಸಭೆಗೂ ಮುನ್ನ ಈ ಕುರಿತು ಸ್ಪಷ್ಟನೆ ನೀಡಿದ ಜೈಶಂಕರ್, ದ್ವಿಪಕ್ಷೀಯ ಮಾತುಕತೆ ಸಾಧ್ಯವಿಲ್ಲ ಎಂದಿದ್ದರು. ಪಾಕಿಸ್ತಾನ ಅದೆಷ್ಟೋ ಬಾರಿ ಭಾರತದ ಮೇಲೆ ಭಯೋತ್ಪಾದಕ ಕೃತ್ಯಗಳನ್ನು ಎಸಗಿದೆ. ಆದರೆ ಎಂದಿಗೂ ಶಾಂತಿಯನ್ನು ಪ್ರತಿಪಾದಿಸುತ್ತದೆ. ಉಗ್ರವಾದದಲ್ಲಿ ನಿರತ ಆಗಿರುವ ದೇಶದ ಜತೆ ಮಾತುಕತೆ ಕಷ್ಟಸಾಧ್ಯ. ಮಾತುಕತೆ ನಡೆಸಬೇಕಾದರೆ ಇಸ್ಲಾಮಾಬಾದ್‌ ಉಗ್ರವಾದ ಮುಕ್ತ ವಾತಾವರಣ ನಿರ್ಮಾಣ ಮಾಡಬೇಕು ಎಂದಿದ್ದರು. 

 

 

ಇತ್ತ ಮಾತುಕತೆ ಎಂದು ಅತ್ತ ಭಯೋತ್ಪಾದನೆ ನಡೆಸಬಾರದು ಎಂದು ಜೈಶಂಕರ್ ಹೇಳಿದ್ದರು. ಇದೀಗ ಜೈಶಂಕರ್ ಹಸ್ತಲಾಘವ ಮಾಡದೇ ಸ್ವಾಗತಿಸಿದ್ದಾರೆ. ಈ ಮೂಲಕ ಪಾಕಿಸ್ತಾನಕ್ಕೆ ಮಾತುಕತೆ, ಆತ್ಮೀಯತೆ ವಿಚಾರದಲ್ಲಿ ಸ್ಪಷ್ಟ ಸಂದೇಶ ನೀಡಿದೆ.   

ಕಾಶ್ಮೀರದ ಜಿ20 ಶೃಂಗಸಭೆಗೆ ಕಮ್ಯಾಂಡೋ, ಸೇನೆ ಭದ್ರತೆ

ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ಸಹಕಾರ ನೀಡುತ್ತಿದೆ ಎಂಬ ಕಾರಣಕ್ಕೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹಳಸಿರುವ ನಡುವೆಯೇ ಭುಟ್ಟೋ ಭಾರತ ಪ್ರವಾಸ ಕೈಗೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ‘ಶಾಂಘೈ ಸಹಕಾರ ಸಂಘದ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗಿಯಾಗಲು ಗೋವಾಗೆ ಬಂದಿರುವುದು ಹಾಗೂ ಈ ಸಭೆಯಲ್ಲಿ ಪಾಕಿಸ್ತಾನದ ನಿಯೋಗವನ್ನು ಮುನ್ನಡೆಸುತ್ತಿರುವುದು ಸಂತೋಷ ನೀಡಿದೆ. ವಿದೇಶಾಂಗ ಸಚಿವರ ಸಭೆ ಫಲ ನೀಡಲಿ ಎಂದು ನಾನು ಆಶಿಸುತ್ತೇನೆ’ ಎಂದು ಭುಟ್ಟೋ ಹೇಳಿದ್ದಾರೆ. 2011ರಲ್ಲಿ ಕಡೆಯ ಬಾರಿ ಪಾಕಿಸ್ತಾನದ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖಾರ್‌ ಭಾರತಕ್ಕೆ ಭೇಟಿ ನೀಡಿದ್ದರು. ಇದಾದ ಬಳಿಕ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಲು ನವಾಜ್‌ ಷರೀಫ್‌ ಭಾರತಕ್ಕೆ ಬಂದಿದ್ದರು.

Latest Videos
Follow Us:
Download App:
  • android
  • ios