ಜಾಗತಿಕ ಶೃಂಗಸಭೆಯಲ್ಲಿ ಲೋಕಲ್ ಫೈಟ್, ರಷ್ಯಾ ಪ್ರತಿನಿಧಿಗೆ ಉಕ್ರೇನ್ ಸಂಸದನಿಂದ ಹಿಗ್ಗಾಮುಗ್ಗಾ ಗೂಸ!
ಶಿಸ್ತು, ತೂಕದ ಮಾತು, ವಿಷಯಗಳ ಕುರಿತು ಗಂಭೀರ ಚರ್ಚೆಗಳಿಂದಲೇ ಜಾಗತಿಕ ಸಮ್ಮೇಳನ, ಶೃಂಗಸಭೆಗಳು ನಡೆಯುತ್ತದೆ. ಆದರೆ ಇದೇ ವಿಶ್ವ ಶೃಂಗಸಭೆಯಲ್ಲಿ ಲೋಕಲ್ ಮಟ್ಟದ ಗುದ್ದಾಟ ನಡೆದಿದೆ. ರಷ್ಯಾ ದಾಳಿಯಿಂದ ಆಕ್ರೋಶಗೊಂಡ ಉಕ್ರೇನ್ ಸಂಸದ, ಶೃಂಗಸಭೆಯಲ್ಲಿ ಪಾಲ್ಗೊಂಡ ರಷ್ಯಾ ಪ್ರತಿನಿಧಿಗೆ ಹಿಗ್ಗಾ ಮುಗ್ಗಾ ಗೂಸ ನೀಡಿದ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ.
ಟರ್ಕಿ(ಮೇ.05): ಜಾಗತಿಕ ಸಮ್ಮೇಳನದಲ್ಲಿ ಲೋಕಲ್ ಮಟ್ಟದಲ್ಲಿ ಕಿತ್ತಾಟ ನಡೆದಿದೆ. ಟರ್ಕಿಯ ರಾಜಧಾನಿ ಅಂಕಾರದಲ್ಲಿ 61ನೇ ಸಂಸದೀಯ ಸಭೆ ಆಯೋಜನೆಯಾಗಿತ್ತು. ಉಕ್ರೇನ್ ಮೇಲೆ ಯುದ್ಧಸಾರಿದ 14 ತಿಂಗಳ ಬಳಿಕ ಈ ಜಾಗತಿಕ ಮಟ್ಟದ ಶೃಂಗಸಭೆ ಆಯೋಜಿಸಲಾಗಿತ್ತು. ರಷ್ಯಾ, ಉಕ್ರೇನ್ ಸೇರಿದಂತೆ ಹಲವು ದೇಶದ ಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಉಕ್ರೇನ್ ಸಂಸದ ತಮ್ಮ ಧ್ವಜದ ಮುಂದೆ ನಿಂತು ಫೋಟೋಗೆ ಫೋಸ್ ನೀಡುತ್ತಿದ್ದ ವೇಳೆ, ಧ್ವಜ ಹಿಡಿದೆಳೆದ ರಷ್ಯಾದ ಪ್ರತಿನಿಧಿಗೆ ಹಿಗ್ಗಾ ಮುಗ್ಗಾ ಗೂಸ ನೀಡಿದ ಘಟನೆ ನಡೆದಿದೆ.
ಬ್ಲ್ಯಾಕ್ ಸಿ ಎಕಾನಿಮಿಕ್ ಕಮ್ಯೂನಿಟಿ ಸಭೆಯಲ್ಲಿ ಹಲವು ದೇಶದ ಪ್ರತಿನಿಧಿಗಗಳು ಪಾಲ್ಗೊಂಡು ಮಾತನಾಡಿದ್ದರು. ಮೊದಲ ಸಭೆಯಲ್ಲೇ ಉಕ್ರೇನ್ ಸಂಸದ ಒಲೆಸ್ಕಾಂಡರ್, ಮಾರಿಕೋವಸ್ಕಿ ದೇಶ ಎದುರಿಸುತ್ತಿರುವ ಯುದ್ಧ, ಸಂಕಷ್ಟದ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದರು. ಇದೇ ವೇಳೆ ರಷ್ಯಾದ ಅತಿಕ್ರಮಣ, ನೀತಿ, ಯುದ್ಧದ ವಿರುದ್ಧದ ಹರಿಹಾಯ್ದಿದ್ದರು. ಮೊದಲ ಸಭೆ ಬಳಿಕ ಉಕ್ರೇನ್ ಸಂಸದ ಹಾಗೂ ಪ್ರತಿನಿಧಿ ಕ್ಯಾಮಾರ ಮುಂದೆ ಫೋಸ್ ನೀಡಿದ್ದರು. ಈ ವೇಳೆ ಉಕ್ರೇನ್ ಸಂಸದ ದೇಶದ ಧ್ವಜ ಹಿಡಿದು ನಿಂತಿದ್ದರು. ಇತ್ತ ರಷ್ಯಾ ಪ್ರತಿನಿಧಿ, ನೇರವಾಗಿ ಉಕ್ರೇನ್ ಧ್ವಜಹಿಡಿದು ಎಳೆದಿದ್ದಾರೆ.
400 ದಿನಗಳ ಉಕ್ರೇನ್-ರಷ್ಯಾ ಯುದ್ಧಕ್ಕೆ ವಿಶ್ವದ ದೊಡ್ಡಣ್ಣ ಎಂಟ್ರಿ: ಯುದ್ಧಭೂಮಿಗೆ ನುಗ್ಗುತ್ತಾ ಅಮೆರಿಕ ಸೈನ್ಯ..?
ಇದರಿಂದ ಆಕ್ರೋಶಗೊಂಡ ಉಕ್ರೇನ್ ಸಂಸದ, ನೇರವಾಗಿ ರಷ್ಯಾ ಪ್ರತಿನಿಧಿಯ ಮುಖಕ್ಕೆ ಪಂಚ್ ನೀಡಿದ್ದಾರೆ. ಇಷ್ಟಕ್ಕೆ ಉಕ್ರೇನ್ ಸಂಸದನ ಆಕ್ರೋಶ ತಣ್ಣಗಾಗಲಿಲ್ಲ. ಹಿಗ್ಗಾ ಮುಗ್ಗಾ ಗೂಸ ನೀಡಿದ್ದಾರೆ. ಬಳಿಕ ಉಕ್ರೇನ್ ಧ್ವಜ ಪಡೆದು ಗೌರವಯುತವಾಗಿ ಮಡಚಿದ್ದಾರೆ. ಜಾಗತಿಕ ಸಮ್ಮೇಳನ ಒಂದು ಕ್ಷಣ ರಣಾಂಗಣವಾಗಿದೆ. ತಕ್ಷಣವೇ ಇತರ ಅಧಿಕಾರಿಗಳು ಮದ್ಯಪ್ರವೇಶಿಸಿದ್ದಾರೆ.
ಉಕ್ರೇನ್ ಮೇಲೆ ಯುದ್ಧ ಸಾರಿ ನಿಮ್ಮ ತೆವಳು ತೀರಿಸಿಕೊಳ್ಳುತ್ತೀದ್ದೀರಿ. ಇದೀಗ ಜಾಗತಿಕ ಸಮ್ಮೇಳನದಲ್ಲಿ ನಮ್ಮ ದೇಶದ ಧ್ವಜ ಹಿಡಿದೆಳೆದು ಅವಮಾನ ಮಾಡಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಜಾಗತಿಕ ಸಮ್ಮೇಳನಕ್ಕೆ ಬಂದಿದ್ದೀರಿ. ಅದರಂತೆ ನಡೆದುಕೊಳ್ಳಿ ಎಂದು ಉಕ್ರೇನ್ ಸಂಸದ ಘಟನೆ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.
ಹಾಡಿನ ಮೂಲಕ ವ್ಲಾದಿಮಿರ್ ಪುಟಿನ್ ಟೀಕಿಸಿದ ಪಾಪ್ ಸಿಂಗರ್ ಶವವಾಗಿ ಪತ್ತೆ!
ಇತ್ತೀಚೆಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟೀನ್ ಹತ್ಯೆಗೆ ಯತ್ನ ನಡೆದ ಬೆನ್ನಲ್ಲೇ ಇದೀಗ ಜನಪ್ರತಿನಿಧಿಗಳೇ ಕಿತ್ತಾಡಿಕೊಂಡ ಘಟನೆ ನಡೆದಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ 14ನೇ ತಿಂಗಳಿಗೆ ಕಾಲಿಟ್ಟಿರುವ ಹೊತ್ತಿನಲ್ಲೇ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ಯೆಗೆ ಉಕ್ರೇನ್ 2 ಡ್ರೋನ್‌ಗಳ ಮೂಲಕ ಯತ್ನ ನಡೆಸಿದೆ ಎಂದು ರಷ್ಯಾ ಬುಧವಾರ ಗಂಭೀರ ಆರೋಪ ಮಾಡಿದೆ. ಆದರೆ ಈ ಯತ್ನವನ್ನು ವಿಫಲಗೊಳಿಸಿರುವುದಾಗಿ ಹೇಳಿರುವ ರಷ್ಯಾ, ಈ ಭಯೋತ್ಪಾದಕ ದಾಳಿಗೆ ಸೂಕ್ತ ತಿರುಗೇಟು ನೀಡುವುದಾಗಿ ಎಚ್ಚರಿಸಿದೆ. ಮತ್ತೊಂದೆಡೆ ರಷ್ಯಾ ಸಂಸತ್ ಕೂಡಾ ಉಕ್ರೇನ್ ಮತ್ತು ಉಕ್ರೇನ್ ಅಧ್ಯಕ್ಷ ಜೆಲೆನ್ಸಿ$್ಕ ಮೇಲೆ ದಾಳಿಗೆ ಅನುಮೋದನೆ ನೀಡಿದೆ. ಹೀಗಾಗಿ ಉಭಯ ದೇಶಗಳ ನಡುವೆ ಯುದ್ಧ ಮತ್ತೆ ತೀವ್ರಗೊಳ್ಳುವ ಆತಂಕ ಎದುರಾಗಿದೆ.
ಈ ನಡುವೆ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ದಾಳಿ ಯತ್ನದ ವೇಳೆ ಅಧ್ಯಕ್ಷ ಪುಟಿನ್ ಕ್ರೆಮ್ಲಿನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಇರಲಿಲ್ಲ. ಈ ವೇಳೆ ಅವರು ಮಾಸ್ಕೋದ ಹೊರವಲಯದ ಮನೆಯಲ್ಲಿ ಇದ್ದರು. ತಕ್ಷಣವೇ ಅವರನ್ನು ಬಂಕರ್‌ಗೆ ವರ್ಗಾಯಿಸಲಾಗಿದ್ದು, ಅವರು ಸುರಕ್ಷಿತವಾಗಿದ್ದು ಎಂದಿನಂತೆ ಕಾರ್ಯನಿರ್ವಹನೆ ಮಾಡಲಿದ್ದಾರೆ ಎಂದು ರಷ್ಯಾ ಸರ್ಕಾರ ಹೇಳಿದೆ.