ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದಲ್ಲಿ ರಷ್ಯನ್ ಮಹಿಳೆ ಮತ್ತು ಆಘೋರಿ ಬಾಬಾನೊರ್ವರ ನಡುವೆ ಪ್ರೀತಿ ಚಿಗುರಿದೆ ಎನ್ನಲಾದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಣೇಶನ ಭಕ್ತೆಯಾಗಿರುವ ಈ ರಷ್ಯನ್ ಮಹಿಳೆ ಬಾಬಾನ ಜೊತೆ ಬೈಕ್‌ನಲ್ಲಿ ಸುತ್ತಾಡಿದ್ದು, ಇವರಿಬ್ಬರ ಲವ್ ಸ್ಟೋರಿ ನಿಜವೇ ಸುಳ್ಳೆ ಎಂಬುದು ಇನ್ನೂ ಖಚಿತವಾಗಿಲ್ಲ.

ಐಐಟಿಯನ್ ಬಾಬಾ, ಮಸಲ್‌ಮ್ಯಾನ್ ಬಾಬಾ, ಅಂಬಾಸಿಡರ್‌ ಬಾಬಾ, ಕಾಂಟೆ ವಾಲೆ ಬಾಬಾ ಹೀಗೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವೂ ವಿವಿಧ ರೀತಿಯ ವಿಭಿನ್ನ ಬಾಬಾರ ಸಮಾಗಮಕ್ಕೆ ಸಾಕ್ಷಿಯಾಗಿದೆ. ಈ ಚಿತ್ರ ವಿಚಿತ್ರ ಬಾಬಾಗಳು ಕುಂಭಮೇಳ ಆರಂಭವಾದಾಗಿನಿಂದಲೂ ಇಂಟರ್‌ನೆಟ್‌, ಸೋಶಿಯಲ್ ಮೀಡಿಯಾಗಳಲ್ಲಿ ಸಂಚಲನ ಸೃಷ್ಟಿಸಿದ್ದು, ಈ ವಿಚಿತ್ರ ಬಾಬಾಗಳ ಪಟ್ಟಿಗೀಗ ಇನ್ನೊಂದು ಬಾಬಾನ ಸೇರ್ಪಡೆಯಾಗಿದೆ. ಇದಕ್ಕೆ ಕಾರಣವಾಗಿದ್ದು ರಷ್ಯನ್ ಮಹಿಳೆ, 

ಬೆನ್ನಿನ ಮೇಲೆ ಗಣಪತಿಯ ಟ್ಯಾಟು ಕತ್ತಲ್ಲಿ ರುದ್ರಾಕ್ಷಿ ಕೈತುಂಬಾ ಬಳೆ, ಹಣೆಯಲ್ಲಿ ವಿಭೂತಿಯ ಜೊತೆ ತಿಲಕ ಧರಿಸಿರುವ ಈ ರಷ್ಯನ್ ಮಹಿಳೆಗೆ ಕುಂಭ ಮೇಳಕ್ಕೆ ಬಂದ ನಂತರ ಅಲ್ಲಿದ್ದ ಆಘೋರಿ ಬಾಬಾನೋರ್ವನ ಮೇಲೆ ಪ್ರೀತಿಯಾಗಿದೆ. ಹೌದು ನಮ್ಮಲ್ಲಿ ಬಾಬಾಗಳು, ಸನ್ಯಾಸಿಗಳು ಎಂದರೆ ಲೌಕಿಕ ಜೀವನವನ್ನು ತೊರೆದು ಹೋದವರು ಎಂಬ ನಂಬಿಕೆ ಇದೆ. ಆದರೆ ಇಲ್ಲಿ ಈ ರಷ್ಯನ್ ಬಾಲೆಗೆ ಬಾಬಾನ ಮೇಲೆ ಪ್ರೀತಿಯಾಗಿದ್ದು, ಇವರಿಬ್ಬರು ಬೈಕ್‌ನಲ್ಲಿ ಜೊತೆಯಾಗಿ ಸುತ್ತಾಡಿದ್ದಾರೆ. ಅಘೋರಿ ಬಾಬಾನ ಹಿಂದೆ ಕುಳಿತು ರಷ್ಯನ್ ಬಾಲೆ ಗಂಗಾ ತಟದ ಸಮೀಪದಲ್ಲಿ ಓಡಾಡಿದ್ದಾಳೆ. 

ಇಂತಹ ವಿಚಿತ್ರಗಳನ್ನೆಲ್ಲಾ ಜಗತ್ತಿಗ ತಿಳಿಸುವ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಇವರನ್ನು ನೋಡಿ ಸುಮ್ನೆ ಕೂರೊದುಂಟೇ, ಇಲ್ವೆ ಇಲ್ಲಾ, ಇವರನ್ನು ಕೂಡ ಓರ್ವ ಇನ್‌ಫ್ಲುಯೆನ್ಸರ್ ಮಾತನಾಡಿಸಿದ್ದು, ಈ ವೇಳೆ ಗಣೇಶನ ಭಕ್ತೆಯಾಗಿರುವ ಈ ರಷ್ಯನ್ ಮಹಿಳೆ ತನ್ನ ಬೆನ್ನ ಮೇಲೆ ದೊಡ್ಡದಾಗಿ ಹಾಕಿಸಿಕೊಂಡಿರುವ ಗಣೇಶನ ಟ್ಯಾಟುವನ್ನು ಕ್ಯಾಮರಾಗೆ ತೋರಿಸಿದ್ದಾಳೆ. ಆದರೆ ಇವರಿಬ್ಬರ ಲವ್ ಸ್ಟೋರಿ ನಿಜವೇ ಸುಳ್ಳೆ ಎಂಬುದನ್ನು ಯಾವುದೇ ಮಾಧ್ಯಮಗಳು ಖಚಿತಪಡಿಸಿಲ್ಲ, ಆದರೆ ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗಿರುವ ಈ ವೀಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಸಂದರ್ಶಕ ಆಕೆಯನ್ನು ಎಲ್ಲಿಂದ ಬಂದಿದ್ದೀರಿ ಎಂದು ಕೇಳಿದಾಗ ಆಕೆ ರಷ್ಯಾ ಎಂದಿದ್ದಾಳೆ. ಇದೇ ವೇಳೆ ಲವ್ ಹೇಗಾಯ್ತು ಎಂದಿದ್ದಕ್ಕೆ ಆಕೆ ನಕ್ಕು ಸುಮ್ಮನಾಗಿದ್ದಾಳೆ. ಬಳಿಕ ಬಾಬಾನ ಬಳಿ ನಿಮ್ಮ ತಪ್ಪಸಿಗೇನು ಭಂಗವಾಗುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಬಾಬಾ ಹಾಗೂ ಬಾಲೆ ಇಬ್ಬರು ನಕ್ಕಿದ್ದಾರೆ. 

ಆದರೆ ಈ ವೀಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಜನ ಪ್ರತಿಕ್ರಿಯಿಸಿದ್ದಾರೆ. ಅನೇಕರು ಬಾಬಾ ವಶೀಕರಣ ಮಾಡಿ ವಿದೇಶಿ ಬಾಲೆಯನ್ನು ಬೀಳಿಸಿಕೊಂಡಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಬಾಬಾನ ತಪ್ಪಸಿಗೆ ತಕ್ಕ ಫಲ ಸಿಕ್ಕಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹಾಗೆಯೇ ಮತ್ತೊಬ್ಬರು ನಾನಿಗಲೇ ಬಾಬಾ ಆಗಲು ಹೋಗುವೆ ಎಂದಿದ್ದಾರೆ. ಇದೆಂಥಾ ಮಾತು ಇಲ್ಲಿ ಹುಡುಗರಿಗೆ ಒಂದೇ ಒಂದು ಹುಡುಗಿ ಸಿಗ್ತಿಲ್ಲ, ಆದರೆ ಇಲ್ಲಿ ಬಾಬಾನಿಗೆ ರಷ್ಯನ್ ಬೆಡಗಿ ಸಿಕ್ಕಿದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಬಾಬಾಗೊಬ್ಬಳು ಮೇನಕ್ಕೆ ಸಿಕ್ಕಳು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಾಮೆಂಟ್ ಮಾಡಿ. 

View post on Instagram