* ರಷ್ಯಾದ ಪೆಮ್‌ರ್‍ ನಗರದ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ: 8 ಜನರ ಸಾವು* 18ರ ಹರೆ​ಯದ ಬಂದೂ​ಕು​ಧಾರಿ ಬಂಧ​ನ* ಜೀವ ಉಳಿಸಿಕೊಳ್ಳಲು ಕಿಟಕಿಗಳಿಂದ ಹಾರಿದ ವಿದ್ಯಾರ್ಥಿಗಳು

ಮಾಸ್ಕೋ(ಸೆ. 21): ರಷ್ಯಾದ ಪೆರ್ಮ್ ನಗರದ ವಿಶ್ವವಿದ್ಯಾಲಯದಲ್ಲಿ 18ರ ಹರೆ​ಯದ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ 8 ಜನರು ಸಾವೀಗೀಡಾಗಿದ್ದು 28 ಮಂದಿ ಗಾಯಗೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾಸ್ಕೋ ನಗರದಿಂದ 1,100 ಕಿ.ಮೀ ದೂರದಲ್ಲಿರುವ ಪೆಮ್‌ರ್‍ ನಗರದ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ ನಡೆದಿದೆ. ದಾಳಿ ನಡೆಸಲು ಪ್ರೇರಣೆ ಏನು ಎಂಬುದು ತಿಳಿದುಬಂದಿಲ್ಲ, ಬಂದೂಕುಧಾರಿಯನ್ನು ಬಂಧಿಸಲಾಗಿದೆ. ಆತನ ಉದ್ದೇ​ಶದ ಬಗ್ಗೆ ತಿಳಿ​ದು​ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಕಟ್ಟಡ ಜಿಗಿದ ವಿದ್ಯಾ​ರ್ಥಿ​ಗ​ಳು:

ದಾಳಿಯಿಂದ ತಪ್ಪಿಸಿಕೊಳ್ಳಲು ಹಲವು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಅವಿತುಕೊಂಡಿದ್ದರು. ಹಲವು ವಿದ್ಯಾರ್ಥಿಗಳು ಕಟ್ಟಡದ ಕಿಟಕಿಗಳಿಂದ ಜಿಗಿದು ಓಡಿದ್ದಾರೆ. ವಿಶ್ವವಿದ್ಯಾಲಯದ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಕೊಠಡಿಗಳನ್ನು ಮುಚ್ಚಿ ರಕ್ಷಿಸಿಕೊಂಡಿದ್ದಾರೆ.

ಈ ದಾಳಿಯನ್ನು ಖಂಡಿಸಿರುವ ರಷ್ಯಾದಲ್ಲಿರುವ ಭಾರತದ ರಾಯಭಾರ ಕಚೇರಿ, ‘ಇದೊಂದು ಭೀಕರ ದಾಳಿ’ ಎಂದು ಹೇಳಿದೆ. ಆದರೆ, ಭಾರ​ತದ ವಿದ್ಯಾ​ರ್ಥಿ​ಗ​ಳಿಗೆ ಅಪಾ​ಯ​ವಾ​ಗಿಲ್ಲ ಎಂದು ಸ್ಪಷ್ಟ​ಪ​ಡಿ​ಸಿ​ದೆ.