Asianet Suvarna News Asianet Suvarna News

Constitution Day: ಸಂವಿಧಾನ ಆಶಯದಂತೆ ಆಡಳಿತ ಹಾಗೂ ಅಭಿವೃದ್ಧಿ, ಪ್ರಧಾನಿ ನರೇಂದ್ರ ಮೋದಿ

  • ಸಂವಿಧಾನ ದಿನ ಕಾರ್ಯಕ್ರಮವನ್ನುದ್ದೇಶಿ ಪ್ರಧಾನಿ ಮೋದಿ ಭಾಷಣ
  • ಸಂವಿಧಾನ ಆಶಯದಂತೆ ನಡೆದುಕೊಂಡಿದೆ ನಮ್ಮ ಸರ್ಕಾರ 
  • ಸಂವಿಧಾನದ ಮಹತ್ವ, ಪ್ರೇರಣೆ ಕುರಿತು ಮಾತನಾಡಿದ ಮೋದಿ
Sabka Saath Sabka Vikas powerful manifestation of Constitution spirit PM Modi address gathering on Constitution Day ckm
Author
Bengaluru, First Published Nov 26, 2021, 7:31 PM IST

ನವದೆಹಲಿ(ನ.26): ಭಾರತ ವಿವಿಧ ಭಾಷೆ, ಸಂಸ್ಕ್ರೃತಿ, ವೈದ್ಯಮಯ ಜೀವನ, ಉಡುಗೆ ತೊಡುಗೆಗಳ ದೇಶ. ನಮ್ಮ ಕಾರ್ಯಗಳು, ಮಾತು, ಕೆಲಸ, ವೃತ್ತಿ ಬೇರೆ ಬೇರೆ, ಜವಾಬ್ದಾರಿ ಬೇರೆ ಬೇರೆ. ಆದರೆ ನಮಗೆ ಸ್ಪೂರ್ತಿ , ನಮ್ಮ ಪ್ರೇರಣೆ, ನಮಗೆ ಶಕ್ತಿ ನೀಡಿರುವುದು ಒಂದೇ, ಅದು ಸಂವಿಧಾನ ಎಂದು ಪ್ರಧಾನಿ ನರೇಂದ್ರ ಮೋದಿ(PM Narendra Modi) ಹೇಳಿದ್ದಾರೆ.  ಸಂವಿಧಾನಕ್ಕೆ ಮೀಸಲಾದ ಸರ್ಕಾರ ಅಭಿವೃದ್ಧಿಯನ್ನು ಪ್ರತ್ಯೇಕಿಸುವುದಿಲ್ಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್(ಎಲ್ಲರ ಜೊತೆ, ಎಲ್ಲರ ಅಭಿವೃದ್ಧಿ) ಸಂವಿಧಾನದ ಪ್ರಬಲ ಅಭಿವ್ಯಕ್ತಿಯಾಗಿದೆ ಎಂದು ಮೋದಿ ಹೇಳಿದ್ದಾರೆ

ದೆಹಲಿಯ(Delhi) ವಿಜ್ಞಾನ ಭವನದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂವಿಧಾನ ದಿನಾಚರಣೆ(Constitution day) ಉದ್ದೇಶಿ ಮಾತನಾಡಿದರು.  ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿ ಪ್ರಾಣ ತ್ಯಾಗ ಮಾಡಿದವರು, ಭಾರತದ ಐಕ್ಯತೆ ಹೋರಾಡಿದವರು, ಹೊಸ ಭಾರತದ ಕನಸು ಕಂಡವರು ಸೇರಿದಂತೆ ಸಮಗ್ರ ಭಾರತೀಯರ ಇಚ್ಚಾಶಕ್ತಿ, ದೂರದೃಷ್ಟಿಯಿಂದ ಭಾರತದ ಸಂವಿಧಾನ ರೂಪುಗೊಂಡಿದೆ. ಸಂವಿಧಾನವನ್ನು ನಮಗೆ ನೀಡಿದ ಉದ್ದೇಶ, ಅದೆ ಗೌರವದೊಂದಿಗೆ ನಾವು ಕಾಪಾಡಿಕೊಳ್ಳಬೇಕಿದೆ ಎಂದು ಮೋದಿ ಹೇಳಿದರು.

ಸರ್ಕಾರ ಸಂವಿಧಾನ ಆಶಯದೊಂದಿಗೆ ನಡೆದುಕೊಳ್ಳುತ್ತದೆ. ಒಂದು ಯೋಜನೆ ಎಲ್ಲಾ ನಾಗರೀಕರಿಗಾಗಿ ಜಾರಿಗೊಳ್ಳುತ್ತದೆ. ಒಂದು ಯೋಜನೆ ಎಲ್ಲಾ ರಾಜ್ಯಗಳಿಗೆ ಅನ್ವಯಿಸುತ್ತದೆ. ಕಳೆದ 7 ವರ್ಷ ನಮ್ಮ ಸರ್ಕಾರ, ಬೇಧ ಭಾವ, ಪಕ್ಷ ಪಾತ ಮಾಡದೆ ಆಡಳಿತ ನಡೆಸಿದೆ. ವಿಕಾಸ ವಿಚಾರದಲ್ಲಿ, ಅಭಿವೃದ್ಧಿ ವಿಚಾರದಲ್ಲಿ ಎಲ್ಲರನ್ನು ಜೊತೆಯಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ರೂಪಿಸಿದೆ. ಈ ಮೂಲಕ ಸಂವಿಧಾನದ ಆಶಯದೊಂದಿಗೆ ನಡೆದುಕೊಂಡಿದೆ ಎಂದು ಮೋದಿ ಹೇಳಿದ್ದಾರೆ  

Constitution Day: ಸತ್ಯದ ಪರ ನಿಲ್ಲಿ: ವಕೀಲರಿಗೆ ಸುಪ್ರೀಂಕೋರ್ಟ್‌ ಚೀಪ್‌ ರಮಣ್‌ ಮನವಿ

ವಸಾತುಶಾಹಿಗಳಿಂದ ದೇಶದಲ್ಲಿ ಸೃಷ್ಟಿಯಾದ ಅಡೆತಡೆಗಳನ್ನು ಸಂವಿಧಾನದ ತೊಡೆದು ಹಾಕಿದೆ. ಇತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಎದುರಿಸುತ್ತಿರುವ ಅಡೆತಡೆ ಭಾರತದಲ್ಲಿಲ್ಲ. ಕಾರಣ ನಮ್ಮ ಸಂವಿಧಾನ ಗಟ್ಟಿಯಾಗಿದೆ ಎಂದು ಮೋದಿ ಸಂವಿಧಾನ ದಿನಾಚಾರಣೆಯಲ್ಲಿ ಹೇಳಿದರು. 

ಭಾರತದಲ್ಲಿ ವನ್ಯಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪರಿಸರ ಉಳಿಸಲು, ಪರಿಸರ ನೈರ್ಮಲ್ಯ ಕಾಪಾಡಲು ಇತರ ಎಲ್ಲಾ ದೇಶಗಳಿಗಿಂತ ಭಾರತ ಮುಂಚೂಣಿಯಲ್ಲಿದೆ. ನಮ್ಮ ಪೂರ್ವಜರೂ ಪರಿಸರ, ಪ್ರೃತಿಯನ್ನು ಪೂಜಿಸಿ ಕಾಪಾಡಿಕೊಂಡು ಬಂದಿದ್ದಾರೆ.  ಜಿ20 ದೇಶಗಳ ಪೈಕಿ ಅತ್ಯುತ್ತಮ ಕೆಲಸದೊಂದಿಗೆ ಮುನ್ನಗ್ಗುತ್ತಿರುವ ದೇಶ ಭಾರತ. 

 

ಜಗತ್ತು ಬದಲಾಗುತ್ತಿರುತ್ತದೆ. ಅದರೊಂದಿಗೆ ನಾವು ಬದಲಾಗಬೇಕು. ಆದರೆ ಮಾನವೀಯ ಮೌಲ್ಯಗಳಲ್ಲಿ ರಾಜೀಮಾಡಿಕೊಳ್ಳಬಾರದು. ಸತ್ಯದ ಪರವಾಗಿ ನಿಲ್ಲಬೇಕು. ಸಂವಿಧಾನ ಈ ಮೌಲ್ಯಗಳನ್ನು ಎತ್ತಿಹಿಡಿಯುತ್ತದೆ. ನಮ್ಮ ಕರ್ತವ್ಯಗಳನ್ನು ಶ್ರದ್ಧೆಯಿಂದ ಮಾಡಬೇಕು.  ಈ ವಿಶೇಷ ಹಾಗೂ ಸ್ಮರಣೀಯ ಸಂವಿಧಾನದ ಈ ದಿನ ಸಂದರ್ಭದಲ್ಲಿ ಸಮಸ್ತ ಭಾರತೀಯರಿಗೆ ನನ್ನ ನಮನಗಳನ್ನ ಸಲ್ಲಿಸುತ್ತೇನೆ. 

Constitution Day: 'ಸಂವಿಧಾನ ಅನೇಕ ವೈವಿಧ್ಯತೆಯ ಸಂಗ್ರಹ, ನಮ್ಮ ಪರಂಪರೆಯ ಆಧುನಿಕ ಅಭಿವ್ಯಕ್ತಿ'

ಸ್ವಾತಂತ್ರ್ಯ ಪಡೆದ ಬಳಿಕ ಭಾರತ ಹಲವು ಸಮಸ್ಯೆಗಳನ್ನು ಎದುರಿಸಿದೆ. ಸಮಸ್ಯೆಗಳನ್ನು ಪರಿಹರಿಸುತ್ತಾ ಬಂದಿದೆ. ದಶಕಗಳ ಬಳಿಕವೂ ಒಂದು ವರ್ಗದ ಜನರು ಸತತ ಬಹಿಷ್ಕಾರ ಅನುಭವಿಸಿದ್ದಾರೆ. ಮನೆಯಲ್ಲಿ ಶೌಚಾಲಯ, ವಿದ್ಯುತ್, ರಸ್ತೆ, ನೀರು ಇಲ್ಲದೆ ಜೀವಿಸಿದ್ದಾರೆ. ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಿ ಅವರ ಜೀವನ ಕ್ರಮವನ್ನು ಸುಧಾರಿಸಿದ್ದೇವೆ. ಇದು ಸಂವಿಧಾನಕ್ಕೆ ನೀಡುವ ನಿಜವಾದ ಗೌರವ ಎಂದು ನಾನು ಭಾವಿಸುತ್ತೇನೆ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಮೋದಿ ಹೇಳಿದರು.

ಇತರ ದೇಶಗಳಿಗೆ ಹೋಲಿಸಿದರೆ ನಾವು ಇನ್ನು ಹೆಚ್ಚು ಕೆಲಸ ಮಾಡಬೇಕಿದೆ. ಅವರಂತೆ ನಾವು ಮುಂದುವರಿದ ದೇಶವಾಗಿ ಹೊರಹೊಮ್ಮಬೇಕಿದೆ. ನಾವು ಗುರಿ ತಲುಪಲು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ. ಈ ಮೂಲಕ ಭಾರತ ಇತರ ಎಲ್ಲಾ ದೇಶಗಳಿಂತ ಅಗ್ರಸ್ಥಾನಕ್ಕೇರಲಿದೆ ಎಂದು ಮೋದಿ ಹೇಳಿದ್ದಾರೆ.

Follow Us:
Download App:
  • android
  • ios