India Russia ವೈದ್ಯಕೀಯ ನೆರವು ನೀಡುವಂತೆ ಭಾರತಕ್ಕೆ ಮನವಿ ಮಾಡಿದ ರಷ್ಯಾ!

  • ಹಲವು ದೇಶಗಳಿಂದ ವ್ಯಾಪಾರ ನಿರ್ಬಂಧ ಘೋಷಣೆ ಹಿನ್ನೆಲೆ
  • ರಷ್ಯಾದಲ್ಲಿ ವೈದ್ಯಕೀಯ ಸಲಕರಣೆ ಕೊರತೆಯಿಂದ ಸಮಸ್ಯೆ
  • ಭಾರತದಿಂದ ಆಮದು ಮಾಡಿಕೊಳ್ಳಲು ರಷ್ಯಾ ಚಿಂತನೆ
Russia Ask medical Medical Equipment from India after sanctions on invasion of Ukraine ckm

ಮಾಸ್ಕೋ(ಏ.20): ಉಕ್ರೇನ್‌ ಮೇಲಿನ ಆಕ್ರಮಣದ ನಂತರ ನಾನಾ ರೀತಿಯ ನಿರ್ಬಂಧಕ್ಕೆ ಒಳಗಾಗಿ ವಿದೇಶಗಳೊಂದಿಗೆ ವ್ಯಾಪಾರ ಸಂಪರ್ಕ ಕಡಿತಕ್ಕೊಳಗಾಗಿರುವ ರಷ್ಯಾ, ಇದೀಗ ಅಗತ್ಯ ವೈದ್ಯಕೀಯ ಉಪಕರಣ ಪೂರೈಸುವಂತೆ ಭಾರತಕ್ಕೆ ಮನವಿ ಮಾಡಿದೆ.

ಈ ಹಿನ್ನೆಲೆಯಲ್ಲಿ ರಷ್ಯಾಕ್ಕೆ ಬೇಕಾದ ವೈದ್ಯಕೀಯ ಉಪಕರಣಗಳು ಮತ್ತು ಅವುಗಳ ಪೂರೈಕೆ ವಿಧಿವಿಧಾನ ಕುರಿತು ಚರ್ಚಿಸಲು ಭಾರತ ಹಾಗೂ ರಷ್ಯಾದ ವೈದ್ಯಕೀಯ ಉತ್ಪನ್ನಗಳ ಕಂಪನಿಗಳು ಏ.22ರಂದು ವರ್ಚುವಲ್‌ ಆಗಿ ಸಭೆ ನಡೆಸಲಿವೆ. ಇದರಲ್ಲಿ ವ್ಯಾಪಾರ ವೃದ್ಧಿಸುವ ಮಾರ್ಗಗಳ ಮಾತುಕತೆ ನಡೆಯಲಿದೆ ಎಂದು ಭಾರತೀಯ ವೈದ್ಯಕೀಯ ಉತ್ಪನ್ನಗಳ ಉದ್ಯಮ ಸಂಘದ ಸಂಯೋಜಕರಾದ ರಾಜೀವ್‌ ನಾಥ್‌ ಹೇಳಿದ್ದಾರೆ. ಇದಕ್ಕೆ ರಷ್ಯಾ ವ್ಯಾಪಾರ ಸಮೂಹವಾದ ಬ್ಯುಸಿನೆಸ್‌ ರಷ್ಯಾ ಒಪ್ಪಿಗೆ ಸೂಚಿಸಿದೆ ಎಂದೂ ಅವರು ಹೇಳಿದ್ದಾರೆ.

ಉಕ್ರೇನ್‌ ಮೇಲೆ ರಷ್ಯಾ ದಾಳಿ ತೀವ್ರ: ಕೀವ್‌ ನಗರದ ಬಳಿ 900 ಮೃತ ದೇಹ ಪತ್ತೆ

ವ್ಯಾಪಕವಾದ ಆರ್ಥಿಕ ನಿರ್ಬಂಧಗಳನ್ನು ಮಾಸ್ಕೋ ಎದುರಿಸುತ್ತಿದೆ. ಹಾಗಾಗಿ ಶೀತಲ ಸಮರದ ಸಮಯದಲ್ಲಿ ಬಳಸಿದಂತೆಯೇ ಸ್ಥಳೀಯ ಕರೆನ್ಸಿಗಳ ಪಾವತಿ ವ್ಯವಸ್ಥೆಯ ಮೂಲಕ ರಷ್ಯಾಗೆ ರಫ್ತನ್ನು ಹೆಚ್ಚು ಮಾಡಲು ಭಾರತ ಆಶಿಸುತ್ತಿದೆ. ಪಾಶ್ಚಿಮಾತ್ಯ ದೇಶಗಳು ನಿರ್ಬಂಧ ವಿಧಿಸಿದ ನಂತರ ರಷ್ಯಾದಿಂದ ಹೆಚ್ಚಿನ ತೈಲ ಖರೀದಿಸುವ ಭಾರತದ ನಿರ್ಧಾರಕ್ಕೆ ಪಾಶ್ಚಿಮಾತ್ಯ ದೇಶಗಳು ವಿರೋಧ ವ್ಯಕ್ತಪಡಿಸಿದ್ದವು.

ಯುದ್ಧದ ನಡುವೆಯೇ ಭಾರತಕ್ಕೆ ರಷ್ಯಾದಿಂದ ‘ಎಸ್‌-400’ ಆಗಮನ
ಉಕ್ರೇನ್‌ನೊಂದಿಗಿನ ಯುದ್ಧದ ಹೊರತಾಗಿಯೂ, ಭಾರತಕ್ಕೆ ಎರಡನೇ ಎಸ್‌-400 ವಾಯುರಕ್ಷಣಾ ವ್ಯವಸ್ಥೆಯನ್ನು ಪೂರೈಸುವ ಪ್ರಕ್ರಿಯೆಯನ್ನು ರಷ್ಯಾ ಆರಂಭಿಸಿದೆ. ಮಾಸಾಂತ್ಯದ ವೇಳೆಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮೂಳಗಳು ತಿಳಿಸಿವೆ. ಇದರೊಂದಿಗೆ ಶೀಘ್ರವೇ ಭಾರತದ ವಾಯರಕ್ಷಣಾ ವ್ಯವಸ್ಥೆ ಮತ್ತಷ್ಟುಬಲಗೊಳ್ಳಲಿದೆ.

ಒಟ್ಟು ಇಂಥ 5 ಏರ್‌ ಡಿಫೆನ್ಸ್‌ ಸಿಸ್ಟಮ್‌ಗಳನ್ನು 37000 ಕೋಟಿ ರು. ವೆಚ್ಚದಲ್ಲಿ ಖರೀದಿಸಲು ಭಾರತ 2018ರಲ್ಲಿ ರಷ್ಯಾದ ಜೊತೆ ಒಪ್ಪಂದ ಮಾಡಿಕೊಂಡಿದೆ. ಮೊದಲ ವ್ಯವಸ್ಥೆ 2021ರಲ್ಲಿ ಭಾರತಕ್ಕೆ ಪೂರೈಕೆಯಾಗಿದ್ದು ಅದನ್ನು ಭಾರತೀಯ ಸೇನೇ ಈಗಾಗಲೇ ಪಂಜಾಬ್‌ ಗಡಿಯಲ್ಲಿ ಅಳವಡಿಸಿದೆ.

ಉಕ್ರೇನ್‌ನ ಬೃಹತ್‌ ಸಿಟಿಗಳ ಮೇಲೆ ರಷ್ಯಾ ಭೀಕರ ದಾಳಿ

‘ಎಸ್‌-400 ಟ್ರಯಂಫ್‌’ ರಷ್ಯಾ ಅಭಿವೃದ್ಧಿಪಡಿಸಿರುವ ವಿಶ್ವದ ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆಯಾಗಿದೆ. ಇದರಲ್ಲಿನ ರಾಡಾರ್‌ಗಳು, ಶತ್ರು ದೇಶ ನಡೆಸುವ ದಾಳಿಯನ್ನು 1000 ಕಿ.ಮೀ ದೂರದಲ್ಲೇ ಪತ್ತೆ ಹಚ್ಚಿ ಅದನ್ನು ಸಮರ್ಥವಾಗಿ ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿವೆ. ಜೊತೆಗೆ ಒಂದೇ ಬಾರಿಗೆ 30ಕ್ಕೂ ಹೆಚ್ಚು ದಾಳಿ ನಡೆದರೂ ಅದನ್ನು ಪತ್ತೆ ಹಚ್ಚಿ, ಪ್ರತಿದಾಳಿ ನಡೆಸುವ ಸಾಮರ್ಥ್ಯ ಇದಕ್ಕಿದೆ. ಈ ವ್ಯವಸ್ಥೆಗಳನ್ನು ಪಾಕಿಸ್ತಾನ, ಚೀನಾ ಗಡಿ ಮತ್ತು ದೇಶದ ಇತರೆ ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲು ಸೇನೆ ಉದ್ದೇಶಿಸಿದೆ.

ರಷ್ಯಾಗೆ ಸಿರಿಯಾ ಸೈನಿಕರ ಬೆಂಬಲ
ಉಕ್ರೇನ್‌ ಮೇಲೆ ತೀವ್ರ ದಾಳಿ ನಡೆಸುತ್ತಿರುವ ರಷ್ಯಾ ಪಡೆಗಳಿಗೆ ಸಿರಿಯಾ ಸೈನಿಕರೂ ಬೆಂಬಲ ನೀಡಿದ್ದಾರೆ ಎಂದು ವರದಿಯಾಗಿದೆ. ಸಿರಿಯಾದಲ್ಲಿ ಇಸ್ಲಾಮಿಕ್‌ ಸ್ಟೇಟ್‌ ವಿರುದ್ಧ ಹಲವು ವರ್ಷಗಳ ಕಾಲ ಹೋರಾಡಿದ್ದ, ರಷ್ಯಾದಿಂದ ತರಬೇತಿ ಪಡೆದ ನೂರಾರು ಸಿರಿಯಾ ಸೈನಿಕರು, ಮಾಜಿ ಬಂಡುಕೋರರು ಮತ್ತು ಅನುಭವಿ ಹೋರಾಟಗಾರರು ರಷ್ಯಾ ಪಡೆ ಸೇರ್ಪಡೆಗೆ ಸಹಿ ಮಾಡಿದ್ದಾರೆ. ಈ ಪೈಕಿ ಸಿರಿಯಾದಲ್ಲಿ ಬಂಡುಕೋರರನ್ನು ಹುಟ್ಟಡಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜ

ಸುಹೇಲ್‌ ಅಲ್‌-ಹಸನ್‌ ನೇತೃತ್ವದ ಹೋರಾಟಗಾರರ ಪಡೆಯೂ ಇದೆ ಎನ್ನಲಾಗುತ್ತಿದೆ. ಈವರೆಗೆ 40,000 ಜನರು ನೋಂದಣಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.ಈವರೆಗೆ ಸಣ್ಣ ಸಂಖ್ಯೆಯ ಸಿರಿಯಾ ಪಡೆ ಮಾತ್ರ ರಷ್ಯಾಗೆ ಆಗಮಿಸಿದೆ. ಆದರೆ ಪೂರ್ವ ಉಕ್ರೇನಿನ ಮೇಲೆ ಪೂರ್ಣಪ್ರಮಾಣದ ದಾಳಿ ನಡೆಸಲು ರಷ್ಯಾ ತಯಾರಿ ನಡೆಸುತ್ತಿರುವುದರಿಂದ ಮುಂದಿನ ವಾರದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆ ಸಿರಿಯಾ ಸೈನಿಕರು ರಷ್ಯಾ ಪಡೆ ಸೇರ್ಪಡೆಯಾಗಬಹುದು ಎಂದು ಅಂದಾಜಿಸಲಾಗಿದೆ.

2017ರಲ್ಲಿ ಸಿರಿಯಾಗೆ ಭೇಟಿ ನೀಡಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಜಸುಹೇಲ್‌ ಅವರನ್ನು ಹೊಗಳಿದ್ದರು. ಮತ್ತು ರಷ್ಯಾದ ಪಡೆಗಳೊಂದಿಗಿನ ಸಹಕಾರವು ಭವಿಷ್ಯದಲ್ಲಿ ಉತ್ತಮ ಯಶಸ್ಸನ್ನು ನೀಡುತ್ತದೆ ಎಂದು ಹೇಳಿದ್ದರು.

Latest Videos
Follow Us:
Download App:
  • android
  • ios