Asianet Suvarna News Asianet Suvarna News

ಸ್ಫುಟ್ನಿಕ್ ಲಸಿಕೆ ಪ್ರವಾಸ, ರಷ್ಯಾಗೆ ಹೋಗಿ ವ್ಯಾಕ್ಸಿನ್ ಹಾಕಿಸಿಕೊಂಡು ಬನ್ನಿ!

* ರಷ್ಯಾಕ್ಕೆ ಸ್ಪುಟ್ನಿಕ್‌ ಲಸಿಕೆಪ್ರವಾಸೋದ್ಯಮ ಶುರು
* ದುಬೈ ಕಂಪನಿಯಿಂದ 24 ದಿನಗಳ ಡೆಲ್ಲಿ- ಮಾಸ್ಕೋ ಟೂರ್‌
* ಪ್ರವಾಸದ ಜತೆ ಲಸಿಕೆಯನ್ನು ಹಾಕಿಸಿಕೊಂಡು ಬನ್ನಿ
* ಸೋಶಿಯಲ್ ಮೀಡಿಯಾದಲ್ಲಿಯೂ ಸದ್ದು ಮಾಡಿದ ಲಸಿಕೆ ಪ್ರವಾಸ

Covid 19 24 days in Russia plus 2 Sputnik V shots for Rs 1.3 lakh mah
Author
Bengaluru, First Published May 21, 2021, 6:59 PM IST

ನವದೆಹಲಿ (ಮೇ 21)  ಮಹಾಮಾರಿ ಕೊರೋನಾ ವೈರಸ್‌ನಿಂದಾಗಿ ಕಳೆದೆರಡು ವರ್ಷಗಳಿಂದ ಜನರು ಯಾವುದೇ ಪ್ರವಾಸಕ್ಕೆ ಹೋಗುವುದು ಇರಲಿ. ಪಕ್ಕದ ಮನೆಯವರ ಬಳಿ ಈರುಳ್ಳಿ ತರಲು ಹೋಗಲು ಹೆದರುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಇಂಥ ಸಂಕಷ್ಟದ ಹೊತ್ತಿನಲ್ಲಿ ದುಬೈ ಮೂಲದ ಪ್ರವಾಸದ ಕಂಪನಿಯೊಂದು ಭಾರತೀಯರಿಗೆ 24 ದಿನಗಳ ಸ್ಪುಟ್ನಿಕ್‌-5 ಲಸಿಕೆಯ ಪ್ರವಾಸೋದ್ಯಮದ ಆಫರ್‌ ನೀಡಿದೆ.  ದೆಹಲಿಯ ಟ್ರಾವೆಲ್ ಏಜೆನ್ಸಿ ಇದಕ್ಕೆ ಸಾಥ್ ನೀಡಿದೆ. 

ದೇಶಾದ್ಯಂತ ಲಸಿಕೆ ಅಭಾವದ ಮಧ್ಯೆಯೇ ಆರಂಭಿಸಲಾದ ಸ್ಪುಟ್ನಿಕ್‌-5 ಲಸಿಕೆಯ ರಷ್ಯಾ ಪ್ರವಾಸಕ್ಕೆ ಬರಲು ಇಚ್ಚಿಸುವವರು 1.29 ಲಕ್ಷ ರು. ಪಾವತಿಸಬೇಕು ಎಂದು ದುಬೈ ಕಂಪನಿ ತಿಳಿಸಿದೆ. ಈ ಪ್ರವಾಸಕ್ಕೆ ಹೋಗಲು ಭಾರತೀಯರು ಉತ್ಸುಕರಾಗಿದ್ದು, ಮೇ 29ರಂದು ಆರಂಭವಾಗಲಿರುವ ಮೊದಲ ಹಂತದ ಪ್ರವಾಸಕ್ಕೆ ಈಗಾಗಲೇ 28 ಜನ ಬುಕ್‌ ಆಗಿದ್ದಾರೆ. ಮುಂದಿನ ಹಂತದ ರಷ್ಯಾ ಪ್ರವಾಸವು ಜೂ.7ರಿಂದ ಜು.15ರವರೆಗೆ ನಿಗದಿಯಾಗಿದೆ ಎಂದಿದೆ ಕಂಪನಿ.

ಕೊರೋನಾಕ್ಕೆ ಗಿಡಮೂಲಿಕೆ ಮದ್ದು, ಸಾಗರೋಪಾದಿಯಲ್ಲಿ ಈ ಹಳ್ಳಿಗೆ ಬಂದ್ರು!

ಪ್ರವಾಸದ ವಿವರ ಹೀಗಿದೆ

* ದೆಹಲಿ-ಮಾಸ್ಕೋ ಪ್ರವಾಸದ ಒಟ್ಟು ವೆಚ್ಚ 1.29 ಲಕ್ಷ ರು.
* ವಿಮಾನದ ಟಿಕೆಟ್‌, ಪಿಟ್ಸ್‌ಬರ್ಗ್‌ನಲ್ಲಿ 4 ದಿನ, ಮಾಸ್ಕೋದಲ್ಲಿ 20 ದಿನ 3 ಸ್ಟಾರ್‌ ಹೋಟೆಲ್ ನಲ್ಲಿ ವಾಸ್ತವ್ಯ
* ಮಾಸ್ಕೋದಿಂದ ಪಿಟ್ಸ್‌ಬರ್ಗ್‌ಗೆ ರೈಲು ಟಿಕೆಟ್‌, ಉಪಾಹಾರ, ಊಟದ ವ್ಯವಸ್ಥೆ
* ಸ್ಪುಟ್ನಿಕ್‌ ಲಸಿಕೆಯ 2 ಡೋಸ್‌ ಲಸಿಕೆ, ಲಸಿಕೆ ಪಡೆದಿದ್ದಕ್ಕಾಗಿ ಪ್ರಮಾಣ ಪತ್ರ~
* 2ನೇ ಡೋಸ್‌ ಲಸಿಕೆ ಪಡೆಯಲು ಇರುವ 20 ದಿನಗಳಲ್ಲಿ ಸೈಟ್‌ ಸೀಯಿಂಗ್‌
* ಲಸಿಕೆಗೆ ಪಾವತಿಸಬೇಕಿರುವ ಹಣ ಬಿಟ್ಟು ಉಳಿದೆಲ್ಲಾ ಖರ್ಚು ಕಂಪನಿಯದ್ದೇ
* ಪ್ರವಾಸಿಗರ ಸೈಟ್‌ಸೀಯಿಂಗ್‌ ಸ್ಥಳಗಳ ಟಿಕೆಟ್‌ ಖರೀದಿಯೂ ಕಂಪನಿ ಜವಾಬ್ದಾರಿ

ಕೋವ್ಯಾಕ್ಸಿನ್, ಕೋವಿಶೀಲ್ಡ್ ಇವೆರಡರ ನಡುವಿನ ವ್ಯತ್ಯಾಸ, ಅಡ್ಡ ಪರಿಣಾಮ, ವಿಶೇಷತೆ!

ಟೂರಿಸಂ ಕಂಪನಿಯ ಈ ಕೊಡುಗೆ ಜನರ ಭಾರಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ ಹಾಗೂ ಸತತವಾಗಿ ಪ್ಯಾಕೇಜ್ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಕಂಪನಿಗೆ ಕರೆಗಳನ್ನು ಮಾಡುತ್ತಿದ್ದಾರೆ.  ಎಷ್ಟೆ ಎಂದರೂ ಕೊರೋನಾ ಸಮಯದಲ್ಲಿಒ ಎಚ್ಚರಿಕೆಯನ್ನು ಮರೆಯುವ ಹಾಗಿಲ್ಲ. 

"

Follow Us:
Download App:
  • android
  • ios