ಬಿಹಾರದ ವಲಸೆ ಕಾರ್ಮಿಕರ ಮೇಲೆ ತಮಿಳುನಾಡಿನಲ್ಲಿ ಹಲ್ಲೆ ನಡೆಸಲಾಗುತ್ತಿದೆ ಎಂಬ ಸುಳ್ಳು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು, ವಲಸೆ ಕಾರ್ಮಿಕರಲ್ಲಿ ಭಾರೀ ಅತಂಕ ಸೃಷ್ಟಿಸಿದ್ದ ಮನೀಶ್ ಕಶ್ಯಪ್ ಎಂಬ ಯುಟ್ಯೂಬರ್‌ನನ್ನು ಬಿಹಾರ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಪಟನಾ: ಬಿಹಾರದ ವಲಸೆ ಕಾರ್ಮಿಕರ ಮೇಲೆ ತಮಿಳುನಾಡಿನಲ್ಲಿ ಹಲ್ಲೆ ನಡೆಸಲಾಗುತ್ತಿದೆ ಎಂಬ ಸುಳ್ಳು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು, ವಲಸೆ ಕಾರ್ಮಿಕರಲ್ಲಿ ಭಾರೀ ಅತಂಕ ಸೃಷ್ಟಿಸಿದ್ದ ಮನೀಶ್ ಕಶ್ಯಪ್ ಎಂಬ ಯುಟ್ಯೂಬರ್‌ನನ್ನು ಬಿಹಾರ ಪೊಲೀಸರು ಶನಿವಾರ ಬಂಧಿಸಿದ್ದಾರೆ. ನಾಪತ್ತೆಯಾಗಿದ್ದ ಮನೀಶ್‌ನ ಮನೆ ಜಪ್ತಿಗೆ ಪೊಲೀಸರು ಮುಂದಾದ ಬೆನ್ನಲ್ಲೇ ಆತ ಪಶ್ಚಿಮ ಚಂಪಾರಣ ಜಿಲ್ಲೆಯ ಬೆಟ್ಟಯ್ಯಾ ಎಂಬಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. ಬಳಿಕ ಆತನನ್ನು ಬಂಧಿಸಲಾಗಿದೆ. ಮಾ.6ರಂದು ಕಶ್ಯಪ್ (Manish Kashyap)ಮೇಲೆ ಬಿಹಾರ ಪೊಲೀಸರು ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದರೆ. ತಮಿಳುನಾಡು ಪೊಲೀಸರು ಸಹ 13 ಪ್ರಕರಣ ದಾಖಲಿಸಿದ್ದಾರೆ.
ತಮಿಳುನಾಡಿನ ವಿವಿಧ ಕಡೆ ಉತ್ತರ ಭಾರತದ ವಲಸಿಗ ಕಾರ್ಮಿಕರ (Labourer)ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಬಿಂಬಿಸುವ ವಿಡಿಯೋವೊಂದನ್ನು ಮನೀಶ್ ಜಾಲತಾಣದಲ್ಲಿ ಹಾಕಿದ್ದ. ಇದರಿಂದ ಆತಂಕಕ್ಕೆ ಒಳಗಾದ ಸಾವಿರಾರು ಬಿಹಾರ ವಲಸಿಗ ಕಾರ್ಮಿಕರು ಏಕಾಏಕಿ ತವರಿನತ್ತ ಮುಖ ಮಾಡಿದ್ದರು. ಈ ವಿಷಯ ಬಿಹಾರದಲ್ಲಿ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು.ಮತ್ತೊಂದೆಡೆ ಬಿಹಾರ ಸರ್ಕಾರ ಹಿರಿಯ ಐಎಎಸ್ ಅಧಿಕಾರಿಗಳ (IAS Officer) ಸತ್ಯಶೋಧನಾ ತಂಡ ಕಳುಹಿಸಿ ಪರಿಸ್ಥಿತಿ ಪರಿಶೀಲಿಸುವ ಕೆಲಸ ಮಾಡಿತ್ತು. ಇನ್ನೊಂದೆಡೆ ಸ್ವತಃ ತಮಿಳುನಾಡು(tamilnadu) ಮುಖ್ಯಮಂತ್ರಿ ಸ್ಟಾಲಿನ್ (Stalin) ಅವರೇ ವಲಸೆ ಕಾರ್ಮಿಕರನ್ನು ಭೇಟಿಯಾಗಿ ರಾಜ್ಯ ಸುರಕ್ಷಿತವಾಗಿದೆ ಎಂದು ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸುವ ಯತ್ನ ಮಾಡಿದ್ದರು.
ವಲಸೆ ಕಾರ್ಮಿಕರ ಮೇಲೆ ಹಲ್ಲೆ: ನಕಲಿ ವಿಡಿಯೋ ಬಿಟ್ಟ ಬಿಹಾರಿ ಸೆರೆ
ಇದಕ್ಕೂ ಮೊದಲು ಇತ್ತೀಚೆಗೆ ತಮಿಳುನಾಡಿನಲ್ಲಿ ಬಿಹಾರದ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ ಎಂದು ಸುಳ್ಳು ವಿಡಿಯೋ ಹರಿಬಿಟ್ಟ 32 ವರ್ಷದ ವ್ಯಕ್ತಿಯನ್ನು ಜಾರ್ಖಂಡಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ತಿರುಪುರ ಸೈಬರ್ ಅಪರಾಧ ದಳದ ವಿಶೇಷ ತಂಡ ಆರೋಪಿಯನ್ನು ಬಂಧಿಸಿದೆ. ಬಂಧಿತ 32 ವರ್ಷದ ವ್ಯಕ್ತಿ ಬಿಹಾರ ಮೂಲದವನಾಗಿದ್ದು ಪ್ರಸ್ತುತ ಜಾರ್ಖಂಡಿನ (Jharkhand) ಲಾತೇಹಾರದಲ್ಲಿ ಕೆಲಸ ಮಾಡುತ್ತಿದ್ದ. ಈತ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮಿಳುನಾಡಿನ ತಿರುಪುರ್‌ನಲ್ಲಿ (Tirupur) ವಲಸೆ ಕಾರ್ಮಿಕರ ಮೇಲೆ ಹಲ್ಲೆಯಾಗಿದೆ ಎಂಬಂತೆ ಫೇಕ್ ವಿಡಿಯೋವನ್ನು ಹರಿಬಿಟ್ಟು ಕಾರ್ಮಿಕರಲ್ಲಿ ಭಯ ಮೂಡಿಸಿದ್ದ.
ಪ್ರಶಾಂತ್ ಕುಮಾರ್ (Prashanth kumar) ಬಂಧಿತ ಆರೋಪಿ. ಮಾರ್ಚ್ 11 ರಂದು ಈತನನ್ನು ಬಂಧಿಸಿ ಲಾತೇಹಾರ್‌ನ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂತರ ಟ್ರಾನ್ಸಿಟ್ ವಾರೆಂಟ್ ಪಡೆದು ತಮಿಳುನಾಡಿನ (Tamilnadu) ತಿರುಪುರ್‌ನ ಮೂರನೇ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಿದ್ದರು. ನ್ಯಾಯಾಲಯ ಈತನನ್ನು ನ್ಯಾಯಾಂಗ ವಶಕ್ಕೆ ನೀಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬಿಹಾರ ಸಮಿತಿ ತಮಿಳುನಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇದು ಸುಳ್ಳು ವಿಡಿಯೋ ಎಂದು ಖಾತ್ರಿಪಡಿಸಿದ್ದರು. ಅನಂತರ ಇದರ ತನಿಖೆ ನಡೆಸಿದ ತಿರುಪೂರು ಸೈಬರ್ ಪೊಲೀಸರು (Cyber Police), ಈತನನ್ನು ಜಾರ್ಖಂಡಿನಲ್ಲಿ ಬಂಧಿಸಿ ತಿರುಪುರದ 3ನೇ ಮ್ಯಾಜಿಸ್ಪ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯ ಈತನಿಗೆ ನ್ಯಾಯಾಂಗ ಬಂಧನದಲ್ಲಿಡುವಂತೆ ಆದೇಶಿಸಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು 11 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಮೂವರನ್ನು ಬಂಧಿಸಿದ್ದರು.
ತಮಿಳ್ನಾಡಲ್ಲಿ ಬಿಹಾರಿಗಳ ಕೊಲೆ ವದಂತಿ: ಉ.ಪ್ರ. ಬಿಜೆಪಿ ಮುಖಂಡ, ಇಬ್ಬರು ಪತ್ರಕರ್ತರ ವಿರುದ್ಧ ಕೇಸ್
ಉ.ಪ್ರ. ಬಿಜೆಪಿ ಮುಖಂಡ, ಇಬ್ಬರು ಪತ್ರಕರ್ತರ ವಿರುದ್ಧ ಕೇಸ್
ಕೆಲ ದಿನಗಳಿಂದ ತಮಿಳುನಾಡಿನಲ್ಲಿ ಬಿಹಾರಿ ವಲಸಿಗ ಕಾರ್ಮಿಕರನ್ನು ಹತ್ಯೆಗೈಯಲಾಗುತ್ತಿದೆ’ ಎಂದು ಉತ್ತರ ಭಾರತದ ರಾಜ್ಯಗಳಲ್ಲಿ ತೀವ್ರ ವದಂತಿ ಹರಡಿತ್ತು. ಈ ಕುರಿತು ಸುಳ್ಳು ಟ್ವೀಟ್ ಮಾಡಿದ ಉತ್ತರ ಪ್ರದೇಶದ ಬಿಜೆಪಿ ನಾಯಕನ ವಿರುದ್ಧ ಹಾಗೂ ಇಬ್ಬರು ಪತ್ರಕರ್ತರ ವಿರುದ್ಧ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.