Asianet Suvarna News Asianet Suvarna News

ತಮಿಳ್ನಾಡಲ್ಲಿ ಬಿಹಾರಿಗಳ ಕೊಲೆ ವದಂತಿ: ಉ.ಪ್ರ. ಬಿಜೆಪಿ ಮುಖಂಡ, ಇಬ್ಬರು ಪತ್ರಕರ್ತರ ವಿರುದ್ಧ ಕೇಸ್‌

ಕೆಲ ದಿನಗಳಿಂದ ತಮಿಳುನಾಡಿನಲ್ಲಿ ಬಿಹಾರಿ ವಲಸಿಗ ಕಾರ್ಮಿಕರನ್ನು ಹತ್ಯೆಗೈಯಲಾಗುತ್ತಿದೆ’ ಎಂದು ಉತ್ತರ ಭಾರತದ ರಾಜ್ಯಗಳಲ್ಲಿ ತೀವ್ರ ವದಂತಿ ಹರಡಿದೆ. ಈ ಕುರಿತು ಸುಳ್ಳು ಟ್ವೀಟ್‌ ಮಾಡಿದ ಉತ್ತರ ಪ್ರದೇಶದ ಬಿಜೆಪಿ ನಾಯಕನ ವಿರುದ್ಧ ಹಾಗೂ ಇಬ್ಬರು ಪತ್ರಕರ್ತರ ವಿರುದ್ಧ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

There is a strong rumor that Biharis are being killed in Tamil Nadu Case against Uttar Prdesh BJP leader and two journalists akb
Author
First Published Mar 5, 2023, 6:48 AM IST | Last Updated Mar 5, 2023, 7:09 AM IST

ಚೆನ್ನೈ: ಕೆಲ ದಿನಗಳಿಂದ ತಮಿಳುನಾಡಿನಲ್ಲಿ ಬಿಹಾರಿ ವಲಸಿಗ ಕಾರ್ಮಿಕರನ್ನು ಹತ್ಯೆಗೈಯಲಾಗುತ್ತಿದೆ’ ಎಂದು ಉತ್ತರ ಭಾರತದ ರಾಜ್ಯಗಳಲ್ಲಿ ತೀವ್ರ ವದಂತಿ ಹರಡಿದೆ. ಈ ಕುರಿತು ಸುಳ್ಳು ಟ್ವೀಟ್‌ ಮಾಡಿದ ಉತ್ತರ ಪ್ರದೇಶದ ಬಿಜೆಪಿ ನಾಯಕನ ವಿರುದ್ಧ ಹಾಗೂ ಇಬ್ಬರು ಪತ್ರಕರ್ತರ ವಿರುದ್ಧ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅದರ ಬೆನ್ನಲ್ಲೇ ತಮಿಳುನಾಡಿನ ಮುಖ್ಯಮಂತ್ರಿ (Tamil Nadu CM) ಎಂ.ಕೆ.ಸ್ಟಾಲಿನ್‌ (M.K. Stalin) ವಲಸಿಗ ಕಾರ್ಮಿಕರಿಗೆ ರಾಜ್ಯದಲ್ಲಿ ಎಲ್ಲ ರಕ್ಷಣೆ ನೀಡಲಾಗುವುದು ಎಂದು ಅಭಯ ನೀಡಿದ್ದಾರೆ. ಬಿಹಾರದ ಮುಖ್ಯಮಂತ್ರಿ (Bihar CM) ನಿತೀಶ್‌ ಕುಮಾರ್‌ (Nithish Kumar) ತಮಿಳುನಾಡಿನಲ್ಲಿರುವ ತಮ್ಮ ರಾಜ್ಯದ ವಲಸಿಗರನ್ನು ಭೇಟಿ ಮಾಡಲು ಕೆಲ ಅಧಿಕಾರಿಗಳನ್ನು ಕಳುಹಿಸಿದ್ದಾರೆ.

ಕನ್ನಡಿಗ ಖರ್ಗೆಗೆ ಕನ್ನಡ ಪಾಠ ಮಾಡಿದ ತಮಿಳುನಾಡು ಸಿಎಂ ಎಂಕೆ ಸ್ಟ್ಯಾಲಿನ್‌!

ವಿವಾದ ಏನು?:

ಇತ್ತೀಚೆಗಷ್ಟೇ ಬಿಹಾರದ ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್‌ ಜೈಸ್ವಾಲ್‌(Sanjay Jaiswal), ತಮಿಳುನಾಡಿನಲ್ಲಿ ಬಿಹಾರಿಗಳನ್ನು ಕೊಲ್ಲಲಾಗುತ್ತಿದೆ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಉತ್ತರ ಪ್ರದೇಶದ (Uttar Pradesh) ಬಿಜೆಪಿ ವಕ್ತಾರ ಪ್ರಶಾಂತ್‌ ಉಮ್ರಾವ್‌ (Prashanth Umrav), ತಮಿಳುನಾಡಿನಲ್ಲಿ ಹಿಂದಿ ಮಾತನಾಡಿದ್ದಕ್ಕಾಗಿ 12 ಬಿಹಾರಿ ಕಾರ್ಮಿಕರನ್ನು ನೇಣು ಬಿಗಿದು ಹತ್ಯೆಗೈಯಲಾಗಿದೆ. ಆದರೂ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರು ಸ್ಟಾಲಿನ್‌ರ ಹುಟ್ಟುಹಬ್ಬಕ್ಕೆ ಹೋಗುತ್ತಾರೆ ಎಂದು ಬರೆದು ತೇಜಸ್ವಿ ಮತ್ತು ಸ್ಟಾಲಿನ್‌ರ ಫೋಟೋ ಟ್ವೀಟ್‌ ಮಾಡಿದ್ದರು. ಅದು ತೀವ್ರ ವಿವಾದವಾಗುತ್ತಿದ್ದಂತೆ ಅವರು ಟ್ವೀಟ್‌ ಅಳಿಸಿದ್ದಾರೆ.

ಪ್ರಕರಣ ದಾಖಲು:

ಈ ಘಟನೆ ತಮಿಳುನಾಡಿನಲ್ಲಿ, ಉತ್ತರ ಪ್ರದೇಶದಲ್ಲಿ(Uttar prades) ಹಾಗೂ ಬಿಹಾರದಲ್ಲಿ ಆತಂಕ ಸೃಷ್ಟಿಸಿದ ಬೆನ್ನಲ್ಲೇ ತಮಿಳುನಾಡು ಪೊಲೀಸರು ಉಮ್ರಾವ್‌ ವಿರುದ್ಧ ಪ್ರಕರಣ ದಾಖಲಿಸಿ, ಅವರ ಬಂಧನಕ್ಕೆ ಪೊಲೀಸ್‌ ತಂಡ ರಚಿಸಿದ್ದಾರೆ. ಅಲ್ಲದೆ ಉತ್ತರ ಪ್ರದೇಶದ ದಿನಪತ್ರಿಕೆಯೊಂದರ ಸಂಪಾದಕ ಮತ್ತು ಇನ್ನೊಂದು ಪತ್ರಿಕೆಯ ಮಾಲಿಕನ ವಿರುದ್ಧವೂ ದ್ವೇಷ ಪ್ರಚೋದನೆಯ ಪ್ರಕರಣ ದಾಖಲಿಸಿದ್ದಾರೆ.

ತಮಿಳುನಾಡಿನಲ್ಲಿ ವ್ಯಾಪಕ ದಲಿತ ದೌರ್ಜನ್ಯ: ರಾಜ್ಯಪಾಲ ರವಿ ಆರೋಪ

ಸ್ಟಾಲಿನ್‌ ಅಭಯ:

ಕಳೆದೊಂದು ವಾರದಿಂದ ವಾಟ್ಸಾಪ್‌ನಲ್ಲಿ (Whatsapp) ತಮಿಳುನಾಡಿನಲ್ಲಿ ವಲಸಿಗರ ಮೇಲೆ ದಾಳಿ ನಡೆಯುತ್ತಿದೆ ಎಂದು ಹಲವಾರು ನಕಲಿ ಸಂದೇಶಗಳು ಹರಿದಾಡುತ್ತಿವೆ. ಹೀಗಾಗಿ ಮುಖ್ಯಮಂತ್ರಿ ಸ್ಟಾಲಿನ್‌, ‘ವಲಸಿಗ ಕಾರ್ಮಿಕರು ಹೆದರುವ ಅಗತ್ಯವಿಲ್ಲ. ಯಾರಾದರೂ ನಿಮ್ಮನ್ನು ಬೆದರಿಸಿದರೆ ಪೊಲೀಸರಿಗೆ ಕರೆ ಮಾಡಿ. ವಲಸಿಗರು ನಮ್ಮ ಸಹೋದರರು. ಸರ್ಕಾರ ನಿಮ್ಮ ರಕ್ಷಣೆಗಿದೆ’ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೂ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

Latest Videos
Follow Us:
Download App:
  • android
  • ios