ಡೆಹ್ರಾಡೂನ್‌(ಏ.15) ಉತ್ತರಾಖಂಡ್‌ನ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಲಕ್ಷ ಲಕ್ಷ ಸಾಧುಗಳು ಪಾಲ್ಗೊಳ್ಳುತ್ತಿದ್ದಾರೆ. ಏಪ್ರಿಲ್ 9ರಂದು ಆರಂಭವಾಗಿರುವ ಮೇಳ ಏಪ್ರಿಲ್ 30ರ ವರೆಗೆ ನಡೆಯಲಿದೆ.12 ವರ್ಷಗಳಿಗೊಮ್ಮೆ ನಡೆಯವ ಕುಂಭ ಮೇಳ ಹಿಂದೂ ಹಬ್ಬಗಳಲ್ಲಿ ಅತ್ಯಂತ ಪವಿತ್ರ ಹಬ್ಬ ಹಾಗೂ ಆಚರಣೆಯಾಗಿದೆ. ಮೇಳದ ಎರಡನೇ ಶಶಿ ಸ್ನಾನದ ನಂತರ ಸಾಧುಗಳು ಹಿಂತಿರುವಾಗ RSS ಕಾರ್ಯಕರ್ತರೊಬ್ಬರ ಶಾಖೆಯ ಸಮವಸ್ತ್ರ ಧರಿಸಿ ಜನರಿಗೆ  ಸಹಾಯ ಮಾಡಿದ್ದಾರೆ. ಮೇಳಕ್ಕೆ ಬಂದ ಭಕ್ತಾದಿಗಳಿಗೆ ದಾರಿ ತೋರಿಸುತ್ತ ಜೊತೆಗೆ ಸರಿಯಾಗಿ ಮಾಸ್ಕ್ ಧರಿಸುವಂತೆ ಕೂಡ ಜಾಗೃತಿ ಮೂಡಿಸಿದ್ದಾರೆ.

RSS ಮುಖ್ಯಸ್ಥ ಮೋಹನ್ ಭಾಗವತ್‌ಗೆ ಕೊರೋನಾ ಪಾಸಿಟಿವ್

ತಮ್ಮ 20ರ ವಯಸ್ಸಿನಲ್ಲಿರುವ  ಆಶಿಶ್ ಚೌದ್ರಿ ಮತ್ತು ತರುಣ್ ಶರ್ಮಾ ಏಪ್ರಿಲ್ ಏಳರಿಂದ ರಾತ್ರಿ 8 ರಿಂದ ಬೆಳಿಗ್ಗೆ 8 ರ ವರೆಗೆ 12 ಗಂಟೆಯ ಶಿಫ್ಟ್ ಮಾಡುತಿದ್ದಾರೆ. ಕೇಂದ್ರ ಮತ್ತು ಸ್ಥಳಿಯ ಪೊಲೀಸರಿಗೆ ಆಡಳಿತ ವ್ಯವಸ್ಥೆ ಮತ್ತು ಟ್ರಾಫಿಕ್ ನಿರ್ವಹಣೆಯಲ್ಲಿ ಇವರಿಬ್ಬರು ಸಹಾಯ ಮಾಡುತ್ತಿದ್ದಾರೆ.  ಕುಂಭಮೇಳದಲ್ಲಿ ಸೇವೆಗೆಂದು ಸಜ್ಜಾಗಿ ನಿಂತಿರುವುದು ಇವರೆಬ್ಬರೇ ಕಾರ್ಯಕರ್ತರಲ್ಲ. ಈ ವರ್ಷದ ಕುಂಭ ಮೇಳದ ನಿರ್ವಹಣೆಗಾಗಿ ಉತ್ತರಾಖಂಡ್ ಪೋಲಿಸರಿಂದ  ಒಟ್ಟು 1,553 ಆರೆಸ್ಸಸ್ ಕಾರ್ಯಕರ್ತರನ್ನು ಸ್ಪೆಷಲ್ ಪೋಲಿಸ್ ಆಫಿಸರ್ (SPO) ಗಳಾಗಿ ನಿಯೋಜಿಸಲಾಗಿದೆ. ಇವರಲ್ಲಿ  1,053 ಕಾರ್ಯಕರ್ತರು ಕೆಲಸ ಮಾಡುತ್ತಿದ್ದು ಉಳಿದ ಕಾರ್ಯಕರ್ತರು ಬ್ಯಾಕ್ಅಪ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪೋಲಿಸರು ಎಲ್ಲರಿಗೂ ಗುರುತೀನ ಚೀಟಿಗಳನ್ನು ಕೊಟ್ಟಿದ್ದು ಜಾಕೆಟ್ ಮತ್ತು ಕ್ಯಾಪ್ ಗಳನ್ನು ಕೂಡ ನೀಡಿದ್ದಾರೆ.

ʼಆರೆಸ್ಸಸ್ ಕಾರ್ಯಕರ್ತರು ಈ ಹಿಂದೆಯೂ ಕುಂಭ ಮೇಳದ ಸಮಯದಲ್ಲಿ ಸಹಾಯ ಮಾಡಿದ್ದರು. ಆದರೆ ಇದೇ ಮೊದಲ ಬಾರಿಗೆ ಅವರಿಗೆ ಸ್ಪೆಷಲ್ ಪೋಲಿಸ್ ಆಫೀಸರ್‌ಗಳ ಗುರುತಿನ ಚೀಟಿಗಳನ್ನು ನೀಡಲಾಗಿದೆ. ಅವರೆಲ್ಲರು ಟ್ರಾಫಿಕ್ ಮ್ಯಾನೇಜ್ಮೆಂಟ್ ಮತ್ತು ಆಡಳಿತ ವ್ಯವಸ್ಥೆಯಲ್ಲಿ ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಕಾಂಗ್ರೆಸ್‌ ಸೇವಾದಳದ ಕಾರ್ಯಕರ್ತರು ಸೇರಿದಂತೆ ಇತರ ಸಂಘ ಸಂಸ್ಥೆಗಳ ಕಾರ್ಯಕರ್ತರನ್ನು ಕೂಡ ಸ್ಪೆಷಲ್ ಆಫಿಸರ್‌ಗಳಾಗಿ ನೇಮಿಸಲಾಗಿದೆʼ ಎಂದು ಕುಂಭ ಮೇಳದ ಉಪ ಪೋಲಿಸ್ ಅಧೀಕಕ್ಷರಾದ ವಿರೇಂದ್ರ ಪ್ರಸಾದ ದರ್ಬಲ್ ಹೇಳಿದ್ದಾರೆ.

ʼಆರೆಸ್ಸೆಸ್ ಕಾರ್ಯಕರ್ತರನ್ನು ಸ್ಪೆಷಲ್ ಆಫೀಸರ್‌ಗಳಾಗಿ ನೇಮಿಸಬೇಕೆಂದು ಮಾರ್ಚ್‌ನಲ್ಲಿಯೇ ಕುಂಭ ಮೇಳದ ಐಜಿ ಸಂಜಯ್ ಗುಂಜ್ಯಾಲ್ ನಮ್ಮನ್ನು ಸಂರ್ಪಕಿಸಿದ್ದರು. ಆರೆಸ್ಸಸ್ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಪತ್ರವನ್ನು ಬರೆದು 18 ರಿಂದ 50 ವರ್ಷದೊಳಗಿನ ಕುಂಭ ಮೇಳದಲ್ಲಿ ಕೆಲಸ ಮಾಡಲಿಚ್ಛಿಸುವ ಕಾರ್ಯಕರ್ತರ ಪಟ್ಟಿಯನ್ನು ನೀಡುವಂತೆ ಆಗ್ರಹಿಸಿದ್ದರು. ನಂತರ ಇಬ್ಬರು ಪೋಲಿಸ್ ಅಧೀಕಕ್ಷರು ನಮ್ಮ ಕಾರ್ಯಕರ್ತರಿಗೆ ಅವರ ಜವಾಬ್ದಾರಿಗಳ ಬಗ್ಗೆ ತಿಳಿಸಿದ್ದರು.

ಈ ಬಾರಿ 1,500 ಕ್ಕೂ ಹೆಚ್ಚು ಕಾರ್ಯಕರ್ತರು ಇದೇ ಮೊದಲ ಬಾರಿಗೆ ಸ್ಪೆಷಲ್ ಪೋಲಿಸ್ ಆಫೀಸರ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕಾರ್ಯಕರ್ತರು ಜನರ ಸೇವೆ ಮಾಡುತ್ತಿದ್ದು ಅವರಿಗೆ ಯಾವುದೇ ರೀತಿ ಭತ್ಯೆ ನೀಡಲಾಗುವುದಿಲ್ಲʼ ಎಂದು ಆರ್‌ಎಸ್‌ಎಸ್‌ನ ಪ್ರಾಂತ ಶಾರೀರಿಕ ಪ್ರಮುಖರಾದ ಸುನಿಲ್ ತಿಳಿಸಿದ್ದಾರೆ.

BSY ಮತ್ತು ವಿಜಯೇಂದ್ರಗೆ ಯತ್ನಾಳ್ ಮತ್ತೊಂದು ಸವಾಲು.. ನಿಜ ಬಣ್ಣ ಬಯಲು!

ಕಾರ್ಯಕರ್ತರು ನಗರದ ಬೇರೆ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದೂ ಹರಿದ್ವಾರ ನಗರ, ಘಾಟ್, ರೈಲು ನಿಲ್ದಾಣ, ಕ್ರಾಸಿಂಗ್ ಮತ್ತು ಡೈವರ್ಷನ್ ಸೇರಿದಂತೆ ರಿಷೀಕೇಶ, ತೆಹ್ರಿ ಮತ್ತು ಉತ್ತರಪ್ರದೇಶದ ಗಡಿಗಳಲ್ಲಿ ಕೂಡ ಕೆಲಸ ಮಾಡುತ್ತಿದ್ದಾರೆ. ಪ್ರತಿ ಸ್ಥಳದಲ್ಲಿ ಕನಿಷ್ಠ ಆರು ಆರೆಸ್ಸಸ್ ಕಾರ್ಯಕರ್ತರು ಸೇವೆ ಮಾಡುತ್ತಿದ್ದಾರೆ.

ಮೇಳಕ್ಕೆ ಬಂದ ಭಕ್ತರು ನಿರ್ಭಂಧಿಸಿದ ಜಾಗಗಳಿಗೆ ಹೋಗುವಾಗ ಕೆಲವೊಂದು ಬಾರಿ ಪೋಲಿಸರು ಕೋಪದಿಂದ ವರ್ತಿಸಬಹುದು ಆದರೆ ನಾನು ಸಮಾಧಾನದಿಂದ ಜನರನ್ನು ಮಾತನಾಡಿಸಿ  ಆ ಜಾಗದಲ್ಲಿ ಯಾಕೆ ನಿರ್ಭಂಧ ಹೇರಲಾಗಿದೆ ಎಂದು ತಿಳಿಸಿ ಅವರಿಗೆ ಸರಿಯಾದ ಮಾರ್ಗವನ್ನು ತೋರಿಸಿ ಜನದಟ್ಟಣೆ ಕಡಿಮೆ ಮಾಡುವಲ್ಲಿನ ಸಹಾಯ ಮಾಡುತ್ತೇನೆ ಎಂದು ಆರೆಸ್ಸಸ್ ಕಾರ್ಯಕರ್ತ ಜೀತಿನ ವೇದಿ ಹೇಳಿದ್ದಾರೆ.

ರಾಷ್ಟ್ರ ಕಾರ್ಯಕ್ಕೆ ಆರೆಸ್ಸಸ್ ಸಂಘಟನೆ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ.  ಬರಗಾಲ ಪ್ರವಾಹಗಳಂತಹ ಸಂಧರ್ಭಗಳಲ್ಲಿ ಆರೆಸ್ಸಸ್ ಕಾರ್ಯಕರ್ತರು ಜನರ ಸೇವೆ ಮಾಡಿದ್ದನ್ನು ನಾವು ನೋಡಿದ್ದೇವೆ. ಕೊರೋನಾ ಸಂದರ್ಭದಲ್ಲೂ ಕೂಡ ಲಕ್ಷಾಂತರ ಕಾರ್ಯಕರ್ತರು ದೇಶಾದ್ಯಂತ ಜನರ ಸೇವೆ ಮಾಡಿದ್ದರು. ಈಗ ಕುಂಭಮೇಳದಲ್ಲೂ ಕೂಡ ಸ್ಪೆಷಲ್ ಪೋಲಿಸ್ ಆಫೀಸರ್‌ಗಳಾಗಿ ಸೇವೆ ಮಾಡುವುದರ ಮೂಲಕ ಆರೆಸ್ಸಸ್ ಕಾರ್ಯಕರ್ತರು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ.