ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಏಪ್ರಿಲ್ 9 ಶುಕ್ರವಾರದಂದು COVID-19 ಪಾಸಿಟಿವ್ ಬಂದಿದೆ. ಈ ಮಾಹಿತಿಯನ್ನು ಟ್ವಿಟರ್‌ನಲ್ಲಿ ಶೇರ್ ಮಾಡಲಾಗಿದೆ.

ಟ್ವಿಟರ್‌ನಲ್ಲಿ ಸಂಸ್ಥೆ ನೀಡಿದ ಹೇಳಿಕೆಯ ಪ್ರಕಾರ, ಭಗವತ್ ಅವರನ್ನು ನಾಗ್ಪುರದ ಕಿಂಗ್ಸ್ವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರ್‌ಎಸ್‌ಎಸ್ ಸರ್ಸಂಗ್‌ಚಲಾಕ್ ಡಾ.ಮೋಹಂಜಿ ಭಾಗವತ್ ಅವರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಅವರು ಸಾಮಾನ್ಯ ರೋಗಲಕ್ಷಣಗಳನ್ನು ಹೊಂದಿದ್ದಾರೆ. ನಾಗ್ಪುರದ ಕಿಂಗ್ಸ್‌ವೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರ್ಎಸ್ಎಸ್ ಟ್ವೀಟ್ ಮಾಡಿದೆ.

RSS ಪ್ರಧಾನ ಕಾರ್ಯದರ್ಶಿಯಾಗಿ ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಆಯ್ಕೆ!

ನಾಗ್ಪುರ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಮಧ್ಯೆ ಭಾಗವತ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾಗ್ಪುರದಲ್ಲಿ ಶುಕ್ರವಾರ 6,489 ಹೊಸ covid -19 ಪ್ರಕರಣಗಳು ದಾಖಲಾಗಿದ್ದರೆ, ರಾಜ್ಯವು 58,993 ಹೊಸ ಪ್ರಕರಣಗಳು ಮತ್ತು 24 ಗಂಟೆಗಳಲ್ಲಿ 301 ಸಾವುಗಳು ದಾಖಲಾಗಿವೆ.

ಜಾನ್ಸನ್‌ ಅಂಡ್‌ ಜಾನ್ಸನ್‌ ಸಿಂಗಲ್‌ ಡೋಸ್‌ ಲಸಿಕೆ ಭಾರತದಲ್ಲಿ ಪರೀಕ್ಷೆ?