Asianet Suvarna News Asianet Suvarna News

ಆರೆಸ್ಸೆಸ್‌ ಚೀಫ್‌ ಮೋಹನ್‌ ಭಾಗವತ್‌, ರಾಷ್ಟ್ರಪಿತ ಮತ್ತು ರಾಷ್ಟ್ರ ಋಷಿ: ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ!

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್‌ ಭಾಗವತ್‌ ಅವರನ್ನು ಮುಕ್ತಕಂಠದಿಂದ ಹೊಗಳಿರುವ  ಅಖಿಲ ಭಾರತ ಮುಸ್ಲಿಂ ಇಮಾಮ್ ಸಂಘಟನೆಯ ಮುಖ್ಯಸ್ಥ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ, ಅವರೊಬ್ಬ ರಾಷ್ಟ್ರಪಿತ ಹಾಗೂ ರಾಷ್ಟ್ರಋಷಿ ಎಂದು ಹೇಳಿದ್ದಾರೆ.

RSS Chief Mohan Bhagwat is rashtra pita and rashtra rishi says  Chief Imam All India Imam Org Dr Umer Ahmed Ilyasi san
Author
First Published Sep 22, 2022, 4:57 PM IST

ನವದೆಹಲಿ(ಸೆ.22): ಒಂದು ತಿಂಗಳ ಅವಧಿಯಲ್ಲಿ 2ನೇ ಬಾರಿಗೆ ಮುಸ್ಲಿಂ ಮುಖಂಡರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್‌ ಭಾಗವತ್‌ ಗುರುವಾರ ಭೇಟಿಯಾಗಿದ್ದರು.   ಅಖಿಲ ಭಾರತ ಮುಸ್ಲಿಂ ಇಮಾಮ್ ಸಂಘಟನೆಯ ಮುಖ್ಯಸ್ಥ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಅವರ ಆಹ್ವಾನದ ಮೇರೆಗೆ ದೆಹಲಿಯ ಮಸೀದಿಯಲ್ಲಿಯೇ ಇಂದು ಭೇಟಿ ನಡೆದಿತ್ತು. ಈ ಭೇಟಿಯ ಬಳಿಕ ಮಾತನಾಡಿರುವ ಇಮಾಮ್‌  ಉಮರ್ ಅಹ್ಮದ್ ಇಲ್ಯಾಸಿ, ಆರೆಸ್ಸೆಸ್‌ ಮುಖ್ಯಸ್ಥರನ್ನು ಮುಕ್ತಕಂಠದಿಂದ ಶ್ಲಾಘನೆ ಮಾಡಿದ್ದಾರೆ. ನನ್ನ ಆಹ್ವಾನದ ಮೇರೆಗೆ ಇಂದು ಮೋಹನ್‌ ಭಾಗವತ್‌ ಜೀ ನಮ್ಮ ಮಸೀದಿಗೆ ಬಂದಿದ್ದರು. ಅವರೊಬ್ಬ ರಾಷ್ಟ್ರಪಿತ ಹಾಗೂ ರಾಷ್ಟ್ರಋಷಿ. ಅವರ ಈ ಭೇಟಿಯಿಂದ ಖಂಡಿತವಾಗಿ ಸಮಾಜಕ್ಕೆ ಉತ್ತಮ ಸಂದೇಶವೊಂದು ತಲುಪುತ್ತದೆ. ದೇವರನ್ನು ಆರಾಧಿಸುವ ನಮ್ಮ ವಿಧಾನಗಳು ವಿಭಿನ್ನವಾಗಿವೆ ಆದರೆ ದೊಡ್ಡ ಧರ್ಮವೆಂದರೆ ಮಾನವೀಯತೆ. ದೇಶವು ಮೊದಲು ಬರುತ್ತದೆ ಎಂದು ನಾವು ನಂಬುತ್ತೇವೆ ಎಂದು ಅವರು ಹೇಳಿದ್ದಾರೆ.ದೆಹಲಿಯ ಕಸ್ತೂರ್‌ ಬಾ ಗಾಂಧಿ ಮಾರ್ಗ ಮಸೀದಿಯಲ್ಲಿ ಈ ಸಭೆ ನಡೆದಿತ್ತು. ಅಂದಾಜು ಒಂದು ಗಂಟೆಗಳ ಕಾಲ ಮೋಹನ್‌ ಭಾಗವತ್‌ ಹಾಗೂ ಇಮಾಮ್‌ ಉಮರ್‌ ಅಹ್ಮದ್‌ ಇಲ್ಯಾಸಿ ಅವರ ಸಭೆ ನಡೆದಿದೆ.

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಗುರುವಾರ ಕಸ್ತೂರಬಾ ಗಾಂಧಿ ಮಾರ್ಗ ಮಸೀದಿಯಲ್ಲಿ ಮುಖ್ಯ ಇಮಾಮ್ ಡಾ. ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಮತ್ತು ಇತರ ಮುಸ್ಲಿಂ ಮುಖಂಡರನ್ನು ಭೇಟಿಯಾಗಿ ಅವರ ಸ್ಥಿತಿಯನ್ನು ವಿಚಾರಿಸಿದರು. ಆ ನಂತರ ಮೋಹನ್ ಭಾಗವತ್ ಆಜಾದ್ ಬಜಾರ್ ನ ಮದರಸಾ ತಲುಪಿ ಅಲ್ಲಿ ಕೆಲ ಸಮಯ ಕಳೆದರು. ಇಲ್ಲಿ ಅವರು ಮದರಸಾದ ಮಕ್ಕಳನ್ನು ಭೇಟಿಯಾದರು. ಮದರಸಾದಲ್ಲಿನ ಮಕ್ಕಳಿಗೆ ಏನು ಓದುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದರು.  ಮೋಹನ್ ಭಾಗವತ್ ಅವರು ಮದರಸಾವೊಂದಕ್ಕೆ ಭೇಟಿ ನೀಡಿದ್ದಲ್ಲದೆ.  ಮಕ್ಕಳೊಂದಿಗೆ ದೀರ್ಘಕಾಲ ಸಂವಾದ ನಡೆಸಿದ್ದು ಬಹುಶಃ ಇದೇ ಮೊದಲು.

ದೆಹಲಿ ಮಸೀದಿಯ ಮುಖ್ಯ ಇಮಾಮ್‌ ಭೇಟಿ ಮಾಡಿದ ಆರೆಸ್ಸೆಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌!

ಮದರಸಾದಲ್ಲಿ ಮಕ್ಕಳನ್ನು ಭೇಟಿಯಾದ ನಂತರ, ಆರ್‌ಎಸ್‌ಎಸ್‌ನ ಇಂದ್ರೇಶ್ ಕುಮಾರ್ ಇದು ಸಂಘದ ದೊಡ್ಡ ಪ್ರಯತ್ನ ಎಂದು ಹೇಳಿದರು. ಅವರು 70 ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಒಗ್ಗೂಡಿಸುವವರು ಶಕ್ತಿಯಿಂದ ಹೋರಾಡುತ್ತಾರೆ ಮತ್ತು ವಿಭಜಿಸುವವರು ದುರ್ಬಲರಾಗುತ್ತಾರೆ.  ಮೋಹನ್‌ಜಿ ಮೊದಲು ಮುಂಬೈನಲ್ಲಿ ಮುಸ್ಲಿಮರನ್ನು ಭೇಟಿಯಾಗಿದ್ದರು. ನಂತರ ಆಗಸ್ಟ್ 22 ರಂದು ಮುಸ್ಲಿಂ ಬುದ್ಧಿಜೀವಿಗಳನ್ನು ಭೇಟಿಯಾದರು, ನಂತರ ಇಲ್ಯಾಸಿಯವರಿಂದ ಸ್ವೀಕರಿಸಿದ ಆಹ್ವಾನಕ್ಕೆ ಇಂದು ಭೇಟಿ ನೀಡಿದ್ದಾರೆ. ಸುದರ್ಶನಜಿ ಕೂಡ ಇಲ್ಯಾಸಿಯ ತಂದೆಯನ್ನು ಭೇಟಿಯಾಗುತ್ತಿದ್ದರು ಎಂದು ತಿಳಿಸಿದ್ದಾರೆ.

ವಿದೇಶದ ಕಮ್ಯುನಿಸಂನ ಒಪ್ಕೋತೀರಿ, ಆರೆಸ್ಸೆಸ್‌ ಸಿದ್ಧಾಂತ ಯಾಕೆ ಬೇಡ: ಕೇರಳ ರಾಜ್ಯಪಾಲ ಅರಿಫ್‌ ಮೊಹಮದ್‌ ಪ್ರಶ್ನೆ!

ಇಲ್ಯಾಸಿಯ ಬಡಾ ಹಿಂದೂರಾವ್ ಬಳಿ ಮದರಸಾ ಇದೆ ಎಂದ ಅವರು, ನಾವೂ ಅಲ್ಲಿಗೆ ಹೋಗಿದ್ದೆವು. ನೀವು ಏನು ಓದುತ್ತೀರಿ, ಏನಾಗುತ್ತೀರಿ ಎಂದು ಮೋಹನ್‌ಜೀ ಮಕ್ಕಳನ್ನು ಕೇಳಿದರು. ಡಾಕ್ಟರ್-ಇಂಜಿನಿಯರ್ ಎಂದು ಮಕ್ಕಳು ಹೇಳಿದರು. ಈ ಕುರಿತು ಭಾಗವತ್‌ಜಿಯವರು ಕೇವಲ ಧರ್ಮವನ್ನು ಅಧ್ಯಯನ ಮಾಡಿದರೆ, ಡಾಕ್ಟರ್‌-ಇಂಜಿನಿಯರ್‌ ಆಗಲು ಹೇಗೆ ಸಾಧ್ಯ ಎಂದು ಅವರಿಗೆ ಕೇಳಿದರು. ಇಲ್ಯಾಸಿ ಕೂಡ ಆಧುನಿಕ ಶಿಕ್ಷಣ ನೀಡುವ ಕೆಲಸ ಮಾಡುತ್ತಿರುವುದಾಗಿ ಹೇಳಿದರು.  ಇಲ್ಯಾಸಿ ಅವರಿಗೆ ಸಾಕಷ್ಟು ಜ್ಞಾನವಿರುವುದರಿಂದ ಸಂಸ್ಕೃತವನ್ನೂ ಕಲಿಸುವುದಾಗಿ ಹೇಳಿದರು. ಭಗವದ್ಗೀತೆಯ ಬಗ್ಗೆಯೂ ಇಲ್ಯಾಸಿ ಮಾತನಾಡಿದರು.

ಮೋಹನ್ ಭಾಗವತ್ (Mohan Bhagwat) ಆಗಮಿಸಿದಾಗ ಮಕ್ಕಳು ಜೈ ಹಿಂದ್ ಘೋಷಣೆಗಳನ್ನು ಕೂಗಿದರು. ಮದರಸಾಗಳ  (Madarasa)ಸಮೀಕ್ಷೆಗೆ ಸಂಬಂಧಿಸಿದಂತೆ ಮದನಿ ಅವರನ್ನು ಉಲ್ಲೇಖಿಸಿದ ಇಲ್ಯಾಸಿ, ನಡೆಯುತ್ತಿರುವ ಸಮೀಕ್ಷೆ ಚೆನ್ನಾಗಿದೆ ಎಂದು ಹೇಳಿದರು. ಮದರಸಾಗಳ ಸಮೀಕ್ಷೆ ಆಗಬೇಕು, ಆಧುನಿಕ ಶಿಕ್ಷಣ ನೀಡಬೇಕು. ಆಗಸ್ಟ್ 15, ಜನವರಿ 26ರ ಕಾರ್ಯಕ್ರಮ ದೇಶದ ಹೆಮ್ಮೆಯಾಗಬೇಕು. ಮುಸ್ಲಿಮರು ಈಗ ಫತ್ವಾ ಜಗತ್ತನ್ನು ತಿರಸ್ಕರಿಸುತ್ತಿದ್ದಾರೆ. ಓವೈಸಿ, ಮುಸ್ಲಿಂ ಸಮಾಜ (Muslim society ) ಪಿಎಫ್‌ಐ (PFI) ಅನ್ನು ತಿರಸ್ಕರಿಸುತ್ತಿದೆ ಎಂದರು. ಪಿಎಫ್‌ಐನಂತಹ ಸಂಘಟನೆಗಳ ಮೇಲಿನ ಕ್ರಮ ಸಮರ್ಥನೀಯ. ಆರ್‌ಎಸ್‌ಎಸ್ (RSS) ದೇಶಪ್ರೇಮಿ ಸಂಘಟನೆಯಾಗಿದ್ದು, ಸಮಾಜವನ್ನು ಸಂಪರ್ಕಿಸಲು ಮತ್ತು ಜನರಿಗೆ ಸೇವೆ ಸಲ್ಲಿಸಲು ಕೆಲಸ ಮಾಡುತ್ತದೆ. PFI ಹಿಂಸಾಚಾರ ಮತ್ತು ಮುರಿಯಲು ಕೆಲಸ ಮಾಡುತ್ತದೆ ಎಂದು ಇಲ್ಯಾಸಿ ಹೇಳಿದ್ದಾರೆ.

Follow Us:
Download App:
  • android
  • ios