ನವದೆಹಲಿ(ಏ.10): ಕೊರೋನಾ ವೈರಸ್‌ ವಿರುದ್ಧ ಹೋರಾಡಲು ಜಾಗತಿಕ ಔಷಧ ಕಂಪನಿ ಜಾನ್ಸನ್‌ ಅಂಡ್‌ ಜಾನ್ಸನ್‌ ಅಭಿವೃದ್ಧಿಪಡಿಸಿರುವ ಸಿಂಗಲ್‌ ಡೋಸ್‌ ಲಸಿಕೆಯನ್ನು ಭಾರತದಲ್ಲಿ ಕ್ಲಿನಿಕಲ್‌ ಟ್ರಯಲ್‌ಗೆ ಒಳಪಡಿಸುವ ಸಂಬಂಧ ಕೇಂದ್ರ ಸರ್ಕಾರದ ಜತೆ ಆ ಕಂಪನಿ ಮಾತುಕತೆಯಲ್ಲಿ ನಿರತವಾಗಿದೆ.

ಈಗಾಗಲೇ ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಸಂಸ್ಥೆ ಜಾನ್ಸನ್‌ ಅಂಡ್‌ ಜಾನ್ಸನ್‌ ಕಂಪನಿಯ ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಿದೆ. ಇದರ ಬೆನ್ನಲ್ಲೇ ಭಾರತದಲ್ಲೂ ಪರೀಕ್ಷೆಗೆ ಅನುಮತಿ ಕೋರಿ ಕಂಪನಿ ಮಾತುಕತೆಯಲ್ಲಿ ನಿರತವಾಗಿದೆ ಎಂದು ವಕ್ತಾರರು ಇ-ಮೇಲ್‌ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಜಾನ್ಸನ್‌ ಅಂಡ್‌ ಜಾನ್ಸನ್‌ ಕಂಪನಿಯ ಲಸಿಕೆಯನ್ನು ರೆಫ್ರಿಜರೇಟರ್‌ ತಾಪಮಾನದಲ್ಲೂ ಸಂಗ್ರಹಿಸಬಹುದಾಗಿದೆ.

ಸದ್ಯ ಭಾರತದಲ್ಲಿ ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್‌ ಲಸಿಕೆಗಳನ್ನು ನಾಗರಿಕರಿಗೆ ನೀಡಲಾಗುತ್ತಿದೆ.