RSS Chief Mohan Bhagwat Speech: ಬಾಂಗ್ಲಾದೇಶ ಮತ್ತು ಫ್ರಾನ್ಸ್ ಮಾದರಿಯಲ್ಲಿ ಭಾರತದಲ್ಲೂ ಆಡಳಿತ ಬದಲಾವಣೆ ಮತ್ತು ದೇಶವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಎಚ್ಚರಿಸಿದ್ದಾರೆ. ದೇಶದ ಯುವಜನತೆ ಇಂತಹ ಷಡ್ಯಂತ್ರಗಳ ಬಗ್ಗೆ ಎಚ್ಚರದಿಂದಿರಬೇಕು ಎಂದರು.

ಫ್ರಾನ್ಸ್, ಬಾಂಗ್ಲಾದೇಶದಲ್ಲಿ ನಡೆದಂತಹ ಪ್ರಯತ್ನಗಳು ಭಾರತದಲ್ಲಿ ನಡೆದಿವೆ. ಆದರೆ ಆಡಳಿತ ಬದಲಾವಣೆಯು ದೇಶಕ್ಕೆ ಎಂದಿಗೂ ಪ್ರಯೋಜನ ನೀಡುವುದಿಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.

ನಾಗ್ಪುರದಲ್ಲಿ ನಡೆದ ವಿಜಯದಶಮಿ ಕಾರ್ಯಕ್ರಮದಲ್ಲಿ ಭಾರತದ ಯುವಕರನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಇತ್ತೀಚೆಗೆ ಜೆನ್‌-ಝಡ್, ಎಸ್‌ಐಆರ್ ನೆಪದಲ್ಲಿ ನಡೆಯುತ್ತಿರುವ ಹೋರಾಟ, ಪ್ರತಿಭಟನೆ ಉಲ್ಲೇಖಿಸಿ ಮಾತನಾಡಿದರು.

ಇದನ್ನೂ ಓದಿ:ನಾವು ಯಾವಾಗೆಲ್ಲ ಡಿವೈಡ್ ಆಗಿದ್ದೇವೋ ಆಗೆಲ್ಲ ದುರ್ಬಲರಾಗಿದ್ದೇವೆ: ವಿಜಯದಶಮಿಯಂದು ದೇಶದ ಯುವಕರಿಗೆ ಆರೆಸ್ಸೆಸ್ ಮುಖ್ಯಸ್ಥ ಮಹತ್ವದ ಸಂದೇಶ

ಈಗ ಅವರ ಅಂತಿಮ ಗುರಿ ಭಾರತವಾಗಿದೆ!

ಇಂದು ಫ್ರಾನ್ಸ್, ಅಲ್ಬೇನಿಯಾ, ಹಿಂದೆ ಬಾಂಗ್ಲಾದೇಶ, ನೇಪಾಳದಲ್ಲಿ ನಡೆಯುತ್ತಿರುವುದೆಲ್ಲವೂ ಅವರ ಕೃತ್ಯ. ಆಡಳಿತ ಬದಲಾಯಿಸುವುದರಿಂದ ದೇಶದ ಪರಿಸ್ಥಿತಿ, ಸಮಸ್ಯೆ ಬದಲಾಗುತ್ತದೆ ಎಂದು ಅವರು ಹೇಳ್ತಾರೆ. ಆದರೆ ಅದು ಆಗಿಲ್ಲ, ತಮ್ಮದೇ ಆದ ಹಿತಾಸಕ್ತಿ ಇಟ್ಟುಕೊಂಡಿರುವ ಅವರ ಗುಲಾಮರು ಎಲ್ಲೆಡೆ ಪ್ರಭಾವಶಾಲಿಯಾಗಿದ್ದಾರೆ. ಅದಕ್ಕಾಗಿಯೇ ಪ್ರಪಂಚದಾದ್ಯಂತ ಒಂದೇ ರೀತಿಯ ಪ್ರತಿಭಟನೆ, ಹಿಂಸಾಚಾರ ನಡೆಯುತ್ತಿದೆ. ಈಗ ಅವರ ಅಂತಿಮ ಗುರಿ ಭಾರತವಾಗಿದೆ. ಹೀಗಾಗಿ ದೇಶದ ಯುವಶಕ್ತಿ ಎಚ್ಚೆತ್ತುಕೊಳ್ಳಬೇಕು. ಯಾವುದನ್ನಾದರೂ ನಂಬುವ ಮುನ್ನ ಅದು ದೇಶದ ಹಿತದೃಷ್ಟಿಗೆ ಸೂಕ್ತವಾಗಿದೆಯೋ, ಸತ್ಯವಾಗಿದೆಯೋ, ಸುಳ್ಳಾಗಿದೆಯೋ ಎಂದು ತಿಳಿಯದೇ ಯಾವುದನ್ನು ಒಪ್ಪಿಕೊಳ್ಳಬಾರದು ಎಂದು ಎಚ್ಚರಿಸಿದರು.

ಭಾರತವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ; ಭಾಗವತ್ ಎಚ್ಚರಿಕೆ

ಭಾರತದಲ್ಲಿಯೂ ಇದೇ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಆದರೆ ಕಳೆದ ದಶಕಗಳಿಂದ ಭಾರತ ಅನುಸರಿಸುತ್ತಿರುವ ದೃಢ ನೀತಿಗಳು, ಅವುಗಳನ್ನು ಜಾರಿಗೆ ತಂದಿರುವ ಅಷ್ಟೇ ದೃಢವಾದ ನಾಯಕತ್ವವು ಅವರ ಯೋಜನೆಗಳನ್ನು ಕೊನೆಗೊಳಿಸಿದೆ. ಅವರು ಭಾರತ, ಹಿಂದೂಗಳು ಮತ್ತು ಸಂಘವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ದೇಶ ಇನ್ನೂ ಅಭಿವೃದ್ಧಿ ಹೊಂದುತ್ತಿದೆ, ಆದರೆ ಅದು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿಲ್ಲ. ಇದೇ ಇಂದು ಸಮಸ್ಯೆಗಳನ್ನು ಉಂಟುಮಾಡುತ್ತದೆ' ಎಂದು ಹೇಳಿದರು.

ಇದನ್ನೂ ಓದಿ: ನ್ಯೂಜಿಲೆಂಡ್​ನಿಂದ ಭಾರತದಲ್ಲಿ 20 ಲಕ್ಷ ಕೋಟಿ ಹೂಡಿಕೆ: ಭರಪೂರ ಉದ್ಯೋಗಾವಕಾಶ, ರೈತರಿಗೂ ಬಂಪರ್​

ನೇಪಾಳ ದುರಂತದ ಬಗ್ಗೆ ಭಾಗವತ್ ಹೇಳಿದ್ದೇನು?

ಇದೇ ವೇಳೆ ನೇಪಾಳದ ಉದಾಹರಣೆಯನ್ನು ಉಲ್ಲೇಖಿಸಿದ ಭಾಗವತ್ ಅವರು, ನೇಪಾಳ ಅನುಭವಿಸಿದ ಭೀಕರ ದುರಂತವು ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿತು, ಇದು ಭಾರತ, ಟಿಬೆಟ್, ಭೂತಾನ್ ಮತ್ತು ಚೀನಾದಂತಹ ಹಲವಾರು ದೇಶಗಳ ಮೂಲಕ ಹಾದುಹೋಗುವ ಇಡೀ ಹಿಮಾಲಯ ಪ್ರದೇಶದ ಏಕಪಕ್ಷೀಯ ಅಭಿವೃದ್ಧಿಯಲ್ಲಿ ಬೇರೂರಿದೆ ಎಂದು ಹೇಳಿದರು. ಆದ್ದರಿಂದ, ಅಭಿವೃದ್ಧಿಗೆ ಸಮಗ್ರ ಮತ್ತು ಸಮತೋಲಿತ ವಿಧಾನವು ಅತ್ಯಗತ್ಯ ಎಂದರು.