Asianet Suvarna News Asianet Suvarna News

ಮಣಿಪುರ ವಿಚಾರವನ್ನು ಬೇಗ ಇತ್ಯರ್ಥ ಮಾಡಿ, ಹೊಸ ಸರ್ಕಾರದ ಬೆನ್ನಲ್ಲಿಯೇ ಆರೆಸ್ಸೆಸ್‌ ತಾಕೀತು!

Rashtriya Swayamsevak Sangh  on Manipur ಮಣಿಪುರ ವಿಚಾರವನ್ನು ಆದ್ಯತೆ ಮೇಲೆ ಚರ್ಚಿಸಬೇಕು ಎಂದು ಚುನಾವಣಾ ಫಲಿತಾಂಶದ ಬಗ್ಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿರುವ ಮೊದಲ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

RSS chief Mohan Bhagwat big statement on Manipur san
Author
First Published Jun 10, 2024, 9:11 PM IST

ನವದೆಹಲಿ (ಜೂ.10): ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಣಿಪುರ ಸಂಘರ್ಷವನ್ನು ಆದ್ಯತೆಯ ಮೇಲೆ ಹೊಸ ಸರ್ಕಾರ ಪರಿಹರಿಸಬೇಕು ಎಂದು ಸೋಮವಾರ ಹೇಳಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಣಿಪುರ ಶಾಂತಿಗಾಗಿ ಕಾದು ಒಂದು ವರ್ಷವಾಗಿದೆ, ಕಳೆದ 10 ವರ್ಷಗಳಿಂದ ರಾಜ್ಯವು ಶಾಂತಿಯುತವಾಗಿತ್ತು, ಆದರೆ ಇದ್ದಕ್ಕಿದ್ದಂತೆ ರಾಜ್ಯದಲ್ಲಿ ಮತ್ತೆ ಬಂದೂಕು ಸಂಸ್ಕೃತಿ ಹೆಚ್ಚಾಗಿದೆ, ಆದ್ಯತೆಯ ಮೇಲೆ ಇಲ್ಲಿನ ಸಂಘರ್ಷ ಪರಿಹರಿಸುವುದು ಮುಖ್ಯವಾಗಿದೆ ಎಂದು ಅವರು ಹೇಳಿದ್ದರೆ. ಒಮ್ಮತ ಮೂಡಿಸಿ ಮುನ್ನಡೆಯುವ ಸಂಪ್ರದಾಯ ನಮ್ಮಲ್ಲಿದೆ... ಒಮ್ಮತ ಮೂಡಿಸಲು ಸಂಸತ್ತು ರಚನೆಯಾಗಿದೆ.ಆದರೆ, ಪೈಪೋಟಿ ಮೂಲಕ ಬಂದವರು ಒಮ್ಮತ ಮೂಡಿಸುವ ಸಾಧ್ಯತೆ ಕಡಿಮೆ ಎಂದಿದ್ದಾರೆ.

2024ರ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಅವರು ನೀಡಿದ ಮೊದಲ ಹೇಳಿಕೆಯಲ್ಲಿ, "ಚುನಾವಣೆಯು ಒಮ್ಮತವನ್ನು ಮೂಡಿಸುವ ಪ್ರಕ್ರಿಯೆಯಾಗಿದೆ. ಅಂತಹ ವ್ಯವಸ್ಥೆಯು ಜಾರಿಯಲ್ಲಿದೆ ಆದ್ದರಿಂದ ಯಾವುದೇ ಪ್ರಶ್ನೆಯ ಎರಡೂ ಅಂಶಗಳನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ. ಚುನಾವಣಾ ಪ್ರಚಾರದ ಸಮಯದಲ್ಲಿ ಜನರು ಪರಸ್ಪರ ನಿಂದನೆ, ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವುದು, ನಕಲಿ ಸುದ್ದಿಗಳನ್ನು ಹರಡುವುದು ಸರಿಯಲ್ಲ" ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದ್ದಾರೆ.

ಶ್ರೀದೇವಿಗೆ ಅನೈತಿಕ ಸಂಬಂಧವಿದೆ, ಬಾಯ್‌ಫ್ರೆಂಡ್‌ನಿಂದ ಮಗು ಪಡೆಯುವ ನಿರ್ಧಾರ ಮಾಡಿದ್ರು: ಯುವ ಪರ ವಕೀಲನ ಹೇಳಿಕೆ

ಗಮನಾರ್ಹವಾಗಿ, ಇಂಫಾಲ್ ಕಣಿವೆ ಮೂಲದ ಮೈಟೈಸ್ ಮತ್ತು ಬೆಟ್ಟಗಳ ಮೂಲದ ಕುಕಿಗಳ ನಡುವಿನ ಜನಾಂಗೀಯ ಸಂಘರ್ಷವು 200 ಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗಿದೆ ಮತ್ತು ಕಳೆದ ವರ್ಷದಿಂದ ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.

ಮಣಿಪುರದಲ್ಲಿ ಪ್ರವಾಹ ಬಂದಿದೆ, ಕನ್ಯಾಕುಮಾರಿಯಲ್ಲಿ ಕ್ಯಾಮೆರಾ ಮುಂದೆ ಧ್ಯಾನಕ್ಕೆ ಕುಳಿತಿದ್ದಾರೆ ಮೋದಿ: ಪ್ರಿಯಾಂಕ್ ಖರ್ಗೆ ಕಿಡಿ

Latest Videos
Follow Us:
Download App:
  • android
  • ios