ಮಣಿಪುರದಲ್ಲಿ ಪ್ರವಾಹ ಬಂದಿದೆ, ಕನ್ಯಾಕುಮಾರಿಯಲ್ಲಿ ಕ್ಯಾಮೆರಾ ಮುಂದೆ ಧ್ಯಾನಕ್ಕೆ ಕುಳಿತಿದ್ದಾರೆ ಮೋದಿ: ಪ್ರಿಯಾಂಕ್ ಖರ್ಗೆ ಕಿಡಿ
: ಮಣಿಪುರದಲ್ಲಿ ಪ್ರವಾಹ ಬಂದಿದೆ. ನಮ್ಮ ಪ್ರಧಾನಿ ಕನ್ಯಾಕುಮಾರಿಯಲ್ಲಿ ಧ್ಯಾನಕ್ಕೆ ಕುಳಿತಿದ್ದಾರೆ. ಮಣಿಪುರ ಹೊತ್ತಿ ಉರಿಯುತ್ತಿದ್ದಾಗ ಹೋಗಲಿಲ್ಲ, ಪ್ರವಾಹ ಬಂದಿದೆ ಈಗಲಾದರೂ ಹೋಗಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ಕಲಬುರಗಿ (ಜೂ.1): ಮಣಿಪುರದಲ್ಲಿ ಪ್ರವಾಹ ಬಂದಿದೆ. ನಮ್ಮ ಪ್ರಧಾನಿ ಕನ್ಯಾಕುಮಾರಿಯಲ್ಲಿ ಧ್ಯಾನಕ್ಕೆ ಕುಳಿತಿದ್ದಾರೆ. ಮಣಿಪುರ ಹೊತ್ತಿ ಉರಿಯುತ್ತಿದ್ದಾಗ ಹೋಗಲಿಲ್ಲ, ಪ್ರವಾಹ ಬಂದಿದೆ ಈಗಲಾದರೂ ಹೋಗಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ಇಂದು ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಅವರ ಖಾಸಗಿ ವಿಚಾರಗಳು ಹೇಗೆ ಪ್ರಚಾರ ಆಗುತ್ತೆ? ಧ್ಯಾನಕ್ಕೆ ಕುಳಿತ್ರೂ ಏಳೆಂಟು ಕ್ಯಾಮೆರಾ ಬೇಕು. ಅವರ ತಾಯಿ ಭೇಟಿ ಮಾಡೋದಕ್ಕೂ ಕ್ಯಾಮೆರಾಗಳು ಹಿಂದೆ ಮುಂದೆ ಇರಬೇಕು. ಇದೆಲ್ಲ ನೋಡಿದಾಗ ಮೋದಿ ಪ್ರಧಾನ ಮಂತ್ರಿ ಅಲ್ಲ, ಪ್ರಚಾರ ಮಂತ್ರಿ ಎನಿಸುತ್ತೆ. ಏಕೆಂದರೆ ಅವರು ಎಲ್ಲಿಯೇ ಹೋದ್ರೂ ಕ್ಯಾಮೆರಾ ಜೊತೆಗಿಟ್ಟುಕೊಂಡೇ ಹೋಗ್ತಾರೆ. ಧ್ಯಾನಕ್ಕೆ ಕುಳಿತಾಗಲೂ ಕನಿಷ್ಟ ಅಂದ್ರೂ ಹತ್ತು ಹದಿನೈದು ಕ್ಯಾಮೆರಾಗಳಿವೆ. ದಿನಕ್ಕೆ ಮೂರು ಬಾರಿ ಬಟ್ಟೆ ಬದಲಾಯಿಸ್ತಾರೆ, ಎರಡು ಚೇರ್ ಚೇಂಜ್ ಮಾಡ್ತಾರೆ. ಖಾಸಗಿ ವಿಚಾರಗಳಲ್ಲೂ ಕ್ಯಾಮೆರಾ ಇಟ್ಟುಕೊಂಡು ಹೋಗುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕೆಟ್ಟ ವಾಸನೆ ಬರ್ತಿದೆ, ಎಸ್‌ಐಟಿ ರೂಂನಲ್ಲಿ ಉಸಿರಾಡಲು ಕಷ್ಟ: ಪ್ರಜ್ವಲ್ ರೇವಣ್ಣ
ಇನ್ನು ಪ್ರಜ್ವಲ್ ರೇವಣ್ಣ ವಿಚಾರ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಸಚಿವರು, ಪ್ರಜ್ವಲ್ ರೇವಣ್ಣ ಕೇಸ್ ನಲ್ಲಿ ಮುಂಚೆ ಕೆಲ ಉಹಾಪೋಹಗಳು ಇದ್ವು ಆದರೀಗ ಪ್ರಜ್ವಲ್ ಎಸ್‌ಐಟಿ ವಶದಲ್ಲಿದ್ದಾರೆ. ಈಗ ಅವರು ಉತ್ತರ ಕೊಡಲಿ. ನಮಗಿಂತ ಚೆನ್ನಾಗಿ ಪ್ರಜ್ವಲ್ ರೇವಣ್ಣಗೆ ಎಲ್ಲೆಲ್ಲಿ ಏನೇನು ಮಾಡಿದ್ದಾರೆಂಬುದು ಗೊತ್ತಿರುತ್ತೆ. ಹೀಗಾಗಿ ಮೊದಲು ಪ್ರಜ್ವಲ್ ಉತ್ತರ ಕೊಡಲಿ. ಭವಾನಿ ರೇವಣ್ಣ ಮಿಸ್ಸಿಂಗ್ ಆಗಿದ್ದಾರೆ. ಅವರನ್ನ ಕಾನೂನು ಪ್ರಕಾರ ಅರೆಸ್ಟ್ ಮಾಡಲೇಬೇಕು ಎಂದರು. ಇದೇ ವೇಳೆ ಎಚ್‌ಡಿಕೆ ಫ್ಯಾಮಿಲಿ ಜೊತೆ ಪ್ರವಾಸ ಮಾಡಿದ ವಿಚಾರಕ್ಕೆ, ಅದು ಅವರ ವೈಯಕ್ತಿಕ ವಿಚಾರ ಅದರ ಬಗ್ಗೆ ನಾನು ಮಾತನಾಡೊಲ್ಲ ಎಂದರು.