Asianet Suvarna News Asianet Suvarna News

ಭಾರತದ ಗಡಿಗಳನ್ನು ಇನ್ನಷ್ಟು ಭದ್ರಪಡಿಸುವ ಅಗತ್ಯವಿದೆ : ಮೋಹನ್ ಭಾಗ್ವತ್

  • ಭಾರತದ  ಗಡಿ ಪ್ರದೇಶಗಳಲ್ಲಿ ಸೇನಾಪಡೆಯನ್ನು ಇನ್ನಷ್ಟು ಬಲಪಡಿಸಬೇಕು 
  • ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಮುಖ್ಯಸ್ಥರಾದ ಮೋಹನ್ ಭಾಗ್ವತ್ ಕರೆ 
RSS Chief Calls For Strengthening Border Cites China, Pak With Taliban snr
Author
Bengaluru, First Published Oct 15, 2021, 4:11 PM IST
  • Facebook
  • Twitter
  • Whatsapp

ನಾಗ್ಪುರ (ಅ.15): ಭಾರತದ (India) ಗಡಿ ಪ್ರದೇಶಗಳಲ್ಲಿ ಸೇನಾಪಡೆಯನ್ನು (Army) ಇನ್ನಷ್ಟು ಬಲಪಡಿಸಬೇಕು ಎಂದು ರಾಷ್ಟ್ರಿಯ ಸ್ವಯಂ ಸೇವಕ ಸಂಘದ (RSS) ಮುಖ್ಯಸ್ಥರಾದ ಮೋಹನ್ ಭಾಗ್ವತ್ (Mohan Bhagwath) ಕರೆ ನೀಡಿದರು. 

ನಾಗ್ಪುರದಲ್ಲಿ (Nagpur) ವಿಜಯದಶಮಿ (Vijayadashami) ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಪ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಅರಾಜನತೆ, ತಾಲಿಬಾನ್ (Taliban) ಕ್ರೌರ್ಯದ ಬಗ್ಗೆ  ನೋವನ್ನು ವ್ಯಕ್ತಪಡಿಸಿದರು. ಅಲ್ಲದೇ ಭಾರತದ ಪಾಕಿಸ್ತಾನ (Pakistan), ಚೀನಾ (china) ಗಡಿಗಳಲ್ಲಿ ಸೈನ್ಯವನ್ನು ಇನ್ನಷ್ಟು ಬಲಪಡಿಸಬೇಕೆಂದು ಕರೆ ನೀಡಿದರು. 

ಎಲ್ಲರಿಗೂ ತಾಲಿಬಾನ್ ಇತಿಹಾಸ (Histrory) ತಿಳಿದಿದೆ. ಆದರೂ ಚೀನಾ, ಪಾಕಿಸ್ತಾನಗಳು ತಮ್ಮ ಬೆಂಬಲ ನೀಡುತ್ತಿವೆ. ಇದರಿಂದ ನಾವು ಈ ದೇಶಗಳ ಗಡಿಯಲ್ಲಿ (Border) ನಮ್ಮ ಸೇನೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ಹೇಳಿದರು. 

ನಾವು ಯಾವಾಗಳು ಸಿದ್ಧವಾಗಿ, ಎಚ್ಚರಿಕೆಯಿಂದ, ಅರಿವಿನಿಂದಲೇ ಇರಬೇಕಾಗುತ್ತದೆ ಎಂದು ಕರೆ ನೀಡಿದರು. 

ಈಗ ದೇಶದ ಶೇ.95 ಭಾಗದಲ್ಲಿದೆ ಆರೆಸ್ಸೆಸ್‌!

ತಾಲಿಬಾನಿಗಳು ಅವರ ಮತಾಂಧ, ದೌರ್ಜನ್ಯ ಮತ್ತು ಇಸ್ಲಾಂ ಹೆಸರಿನಲ್ಲಿ ಭಯೋತ್ಪಾದನೆ (Terrorism) ಮಾಡುತ್ತಿದ್ದಾರೆ. ಇದರಿಂದ ತಾಲಿಬಾನ್ ಎಂದರೆ ಎಲ್ಲರ ಭಯಭೀತರಾಗುವಂತಾಗಿದೆ. ಆದರೆ ಈಗ ಚೀನಾ, ಪಾಕಿಸ್ತಾನ, ಟರ್ಕಿ ದೇಶಗಳು ತಾಲಿಬಾನ್ ಜೊತೆ ಆಪ್ತ ಮೈತ್ರಿ ಮಾಡಿಕೊಂಡಿವೆ. ಆದ್ದರಿಂದ ನಮ್ಮ ಗಡಿ ವಿಷಯ ಅತ್ಯಂತ ಗಂಭೀರವಾಗಿದ್ದು, ಕಾಳಜಿ  ಕೈಗೊಳ್ಳುವ ಅನಿವಾರ್ಯತೆ ಇದೆ ಎಂದರು. 

ಕೆವಲ ಭೂ ಗಡಿ ಮಾತ್ರವಲ್ಲದೇ ಸಮುದ್ರದದ (sea) ಗಡಿ ಭಾಗಗಳಲ್ಲಿಯೂ ಹೆಚ್ಚಿನ ಭದ್ರತಾ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ. ಅಲ್ಲಿಯೂ ತಣ್ಣನೆಯ ಕ್ರೌರ್ಯಗಳು ಗೊತ್ತಿಲ್ಲದೆಯೇ ಸಂಭವಿಸಬಹುದು.  ಅಕ್ರಮ ಗಡಿ ನುಸುಳುವಿಕೆ ಬಗ್ಗೆಯೂ  ಕಾಲಜಿ ವಹಿಸಬೇಕಾದ ಅಗತ್ಯವಿದೆ ಎಂದರು. 

ಇನ್ನು ಕಾಶ್ಮೀರದಲ್ಲಿ (Kashmir) ಮತ್ತೆ ಹತ್ಯಾಕಾಂಡದಂತೆ ಘಟನೆಗಳು ಮರುಕಳಿಸುತ್ತಿದೆ.  ಅದರಲ್ಲಿಯೂ ರಾಷ್ಟ್ರೀಯವಾದಿಗಳ ಹಾಗು ಹಿಂದುತ್ವವಾದಿಗಳ ಹತ್ಯಗಳಾಗುತ್ತಿದೆ.  ಈ ಬಗ್ಗೆ ಅಗತ್ಯದ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ ಎಂದರು. 

ಇನ್ನು ಭಾಷಾ, ಧಾರ್ಮಿಕ ಮತ್ತು ಪ್ರಾದೇಶಿಕ ಸಂಪ್ರದಾಯಗಳನ್ನು ಸಂಯೋಜಿಸುವುದು ಮತ್ತು ಎಲ್ಲರ ನಡುವೆ ಪರಸ್ಪರ  ಸಹಕಾರವನ್ನು ಉತ್ತೇಜಿಸುವುದು ಮತ್ತು ಎಲ್ಲರನ್ನೂ ಸಮಾನವಾಗಿ ಕಾಣುವುದು  ಭಾರತೀಯ ಸಂಸ್ಕೃತಿ ಎಂದು ಹೇಳಿದರು. 

ಸಂಪ್ರದಾಯಕ್ಕೆ ವಿದಾಯ ಹೇಳಿದ ರಾಷ್ಟ್ರಪತಿ : ಮೊದಲ ಬಾರಿಗೆ ರಾಷ್ಟ್ರ ರಾಜಧಾನಿಯಿಂದ ಅಚೆಗೆ ದಸರಾ ಹಬ್ಬವನ್ನು (Dasara) ಆಚರಿಸುವ ಮೂಲಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ramanath Kovind) ಆಚರಿಸಿದ್ದಾರೆ.   

ಜಮ್ಮು ಕಾಶ್ಮೀರ (Jammu Kashmir) ಪ್ರವಾಸದಲ್ಲಿರುವ ರಾಷ್ಟ್ರಪತಿ ಕಾರ್ಗಿಲ್‌ನಲ್ಲಿ ಸೈಬಿಕರ ಜೊತೆಗೆ ದಸರಾ ಹಬ್ಬವನ್ನು ಆಚರಣೆ ಮಾಡಿದ್ದಾರೆ. 

Follow Us:
Download App:
  • android
  • ios