ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ‘ಸೂತ್ರಧಾರ’ ಎಂದೇ ಖ್ಯಾತಿ ಪಡೆದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಈಗ ದೇಶದ ಶೇ.95 ಭಾಗದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ನಾಗಪುರದಲ್ಲಿ ನಡೆದ 3 ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭಾದ ವೇಳೆ ಬಿಡುಗಡೆ ಮಾಡಿದ ವರದಿಯಲ್ಲಿ ಈ ಅಚ್ಚರಿಯ ಅಂಶಗಳಿವೆ.

ನವದೆಹಲಿ: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ‘ಸೂತ್ರಧಾರ’ ಎಂದೇ ಖ್ಯಾತಿ ಪಡೆದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಈಗ ದೇಶದ ಶೇ.95 ಭಾಗದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ನಾಗಪುರದಲ್ಲಿ ನಡೆದ 3 ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭಾದ ವೇಳೆ ಬಿಡುಗಡೆ ಮಾಡಿದ ವರದಿಯಲ್ಲಿ ಈ ಅಚ್ಚರಿಯ ಅಂಶಗಳಿವೆ.

ಆರೆಸ್ಸೆಸ್‌ ಈಗ ದೇಶದಲ್ಲಿ 58,976 ಶಾಖೆಗಳನ್ನು ಹೊಂದಿದೆ. ಈ ಮೂಲಕ ದೇಶದ ಶೇ.95 ಭಾಗಗಳಲ್ಲಿ ಸಂಘವು ಅಸ್ತಿತ್ವದಲ್ಲಿ ಇದ್ದಂತಾಗಿದೆ. ನಾಗಾಲ್ಯಾಂಡ್‌, ಮಿಜೋರಂ ಹಾಗೂ ಕಾಶ್ಮೀರ ಕಣಿವೆಯಂಥ ಕೆಲವು ಪ್ರದೇಶಗಳನ್ನು ಹೊರತುಪಡಿಸಿದರೆ ದೇಶದ ಮಿಕ್ಕೆಲ್ಲ ಸ್ಥಳಗಳಲ್ಲಿ ಸಂಘದ ಶಾಖೆಗಳು ವ್ಯಾಪಿಸಿವೆ ಎಂದು ಆರೆಸ್ಸೆಸ್‌ ಜಂಟಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಗೋಪಾಲ ಹೇಳಿದ್ದಾರೆ.

2004ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪತನಗೊಂಡ ನಂತರ ಆರೆಸ್ಸೆಸ್‌ ಚಟುವಟಿಕೆಗಳು ಮಂಕಾಗಿದ್ದವು ಹಾಗೂ ಸುಮಾರು 10 ಸಾವಿರದಷ್ಟುಶಾಖೆಗಳು ಬಂದ್‌ ಅಗಿದ್ದವು. ಆದರೆ 2014ರಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ನಂತರ ಶಾಖೆಗಳ ಸಂಖ್ಯೆ 40 ಸಾವಿರದಷ್ಟುಏರಿದೆ.

ಆಕಾಶವಾಣಿಗಿಂತ ಹೆಚ್ಚು ವ್ಯಾಪ್ತಿ!

ಸರ್ಕಾರಿ ಸ್ವಾಮ್ಯದ ಆಕಾಶವಾಣಿ (ಆಲ್‌ ಇಂಡಿಯಾ ರೇಡಿಯೋ) ದೇಶದಲ್ಲಿ 262 ನಿಲಯಗಳನ್ನು ಹೊಂದಿದೆ ಹಾಗೂ ದೇಶದ ಶೇ.92ರಷ್ಟುಭಾಗದಲ್ಲಿ ಪ್ರಸಾರಗೊಳ್ಳುತ್ತದೆ. ಈಗ ಆರೆಸ್ಸೆಸ್‌ ಶೇ.95 ವ್ಯಾಪ್ತಿ ಹೊಂದುವ ಮೂಲಕ ಆಕಾಶವಾಣಿಯನ್ನೂ ಮೀರಿಸಿದೆ!