Asianet Suvarna News Asianet Suvarna News

ಆ.31ರಿಂದ ಆರ್‌ಎಸ್‌ಎಸ್-ಬಿಜೆಪಿ ಮಹತ್ವದ ಸಭೆ; ಕೇರಳದಲ್ಲಿ ಆಯೋಜನೆ ಮಾಡಿದ್ದೇಕೆ?

ಲೋಕಸಭಾ ಚುನಾವಣೆ ಹಿನ್ನಡೆ ಬಗ್ಗೆ ಕೇರಳದ ಪಾಲಕ್ಕಾಡ್‌ನಲ್ಲಿ ಆರ್‌ಎಸ್‌ಎಸ್‌-ಬಿಜೆಪಿ ಚಿಂತನ ಮಂಥನ ಸಭೆ ನಡೆಯಲಿದೆ .

RSS and BJP To Hold Meeting In palakkad Kerala mrq
Author
First Published Jun 15, 2024, 8:36 AM IST

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಗೆದ್ದರೂ ಬಿಜೆಪಿಗೆ ಹಿನ್ನಡೆ ಆಗಿರುವ ಕಾರಣ, ಈ ಬಗ್ಗೆ ಪರಾಮರ್ಶೆ ಮಾಡಲು ಆ.30 ರಿಂದ ಸೆ.2ರ ವರಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಾಯಕರು ಕೇರಳದ ಪಲಕ್ಕಾಡ್‌ನಲ್ಲಿ ಸಭೆ ಸೇರಲಿದ್ದಾರೆ. ಕೇರಳದಲ್ಲೇ ಆರೆಸ್ಸೆಸ್‌ ಶಾಖೆಗಳು, ಹಿಂದೂ ದೇಗುಲಗಳು ಹೆಚ್ಚಾಗಿವೆ. ಮೊದಲ ಬಾರಿಗೆ ಬಿಜೆಪಿ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಆದ್ದರಿಂದಲೇ ಇಲ್ಲಿ ಸಭೆ ಆಯೋಜನೆ ಮಾಡಲಾಗಿದೆ.

ಈ ಸಭೆಯಲ್ಲಿ ಪ್ರಮುಖವಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ 240 ಸ್ಥಾನಗಳಲ್ಲಿ ಮಾತ್ರ ಗೆದ್ದಿದೆ. ಆದ್ದರಿಂದ ಬಿಜೆಪಿ ಹಿನ್ನಡೆಯಾಗಲು ಕಾರಣವೇನು? ಇದಕ್ಕೆ ಯಾರು ಹೊಣೆ, ಪ್ರಚಾರವನ್ನು ಸರಿಯಾಗಿ ಮಾಡಿರಲಿಲ್ಲವೇ ಎಂಬಿತ್ಯಾದಿ ವಿಷಯಗಳ ಕುರಿತು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಮುಖಂಡರು ಚರ್ಚೆ ನಡೆಸಲಿದ್ದಾರೆ.

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್‌ ಅವರು ಕೆಲ ದಿನಗಳ ಹಿಂದಷ್ಟೇ ಸೇವಕರಾದವರು ದುರಹಂಕಾರ ಬಿಟ್ಟು, ಗೌರವದೊಂದಿಗೆ ಜನರ ಸೇವೆ ಮಾಡಬೇಕು ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಕಿಡಿಕಾರಿದ್ದರು. ಆರೆಸ್ಸೆಸ್‌ ಪತ್ರಿಕೆ ಆರ್ಗನೈಸರ್‌ ಕೂಡ ಬಿಜೆಪಿ ನಡೆಗಳನ್ನು ಟೀಕಿಸಿತ್ತು.

ದುರಹಂಕಾರಿಗಳನ್ನು ಭಗವಾನ್‌ ರಾಮ 241ಕ್ಕೆ ನಿಲ್ಲಿಸಿದ್ದಾನೆ: ಬಿಜೆಪಿಗೆ ಟಾಂಗ್‌ ಕೊಟ್ಟ ಆರೆಸ್ಸೆಸ್‌ ನಾಯಕ!

ಬಿಜೆಪಿ-ಎನ್‌ಸಿಪಿ-ಶಿವಸೇನೆ ಮೈತ್ರಿಯಲ್ಲಿ ಒಡಕು ಸೃಷ್ಟಿ

 ಚುನಾವಣಾ ಸೋಲಿನ ಬೆನ್ನಲ್ಲೇ ಮಹಾರಾಷ್ಟ್ರದ ಬಿಜೆಪಿ-ಎನ್‌ಸಿಪಿ-ಶಿವಸೇನೆ ಮೈತ್ರಿಯಲ್ಲಿ ಒಡಕು ಸೃಷ್ಟಿಯಾಗಿದೆ. ಎನ್‌ಸಿಪಿ ರಾಜ್ಯಸಭೆ ಟಿಕೆಟ್‌ ಉಪಮುಖ್ಯಮಂತ್ರಿ ಅಜಿತ್‌ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್‌ ಪಾಲಾಗಿದ್ದಕ್ಕೆ, ಎನ್‌ಸಿಪಿ ಮುಖಂಡ ಛಗನ್‌ ಭುಜಬಲ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಕಡೆ ಜಲ್ನಾ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯ ರಾವ್‌ಸಾಹೇಬ್‌ ದಾನ್ವೆ ಪಾಟೀಲ್‌ ಸೋಲಿಗೆ ಶಿವಸೇನೆಯ ಸಚಿವ ಅಬ್ದುಲ್‌ ಸತ್ತಾರ್‌ ಕಾರಣ. ಅವರನ್ನು ಸಂಪುಟದಿಂದ ವಜಾ ಮಾಡಿ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಇದಕ್ಕೆ ಸತ್ತಾರ್ ತಿರುಗೇಟು ನೀಡಿ, ‘ಗೆದ್ದರೆ ಅವರು ಕಾರಣ, ಸೋತರೆ ನಾನು ಹೇಗೆ ಕಾರಣ?’ ಎಂದಿದ್ದಾರೆ.

ಅಣ್ಣಾಮಲೈ-ತಮಿಳಿಸಾಯಿ ಮುನಿಸು ಶಮನ

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಶುಕ್ರವಾರ ಪಕ್ಷದ ನಾಯಕಿ ತಮಿಳಿಸಾಯಿ ಸೌಂದರರಾಜನ್‌ ಅವರನ್ನು ಭೇಟಿ ಮಾಡಿ ಬಿಜೆಪಿ ಏಳ್ಗೆಯ ಕುರಿತು ಚರ್ಚೆ ನಡೆಸಿದ್ದಾರೆ. ಈ ಮೂಲಕ ಪರಸ್ಪರ ಭಿನ್ನಮತ ಶಮನಕ್ಕೆ ಯತ್ನಿಸಿದ್ದಾರೆ. ಲೋಕಸಭಾ ಚುನಾವಣೆಯ ನಂತರ ಇಬ್ಬರ ನಡುವೆ ಪರಸ್ಪರ ಭಿನ್ನಾಭಿಪ್ರಾಯಗಳು ಉಂಟಾಗಿದ್ದು, ಇಬ್ಬರು ನಾಯಕರ ಬೆಂಬಲಿಗರ ನಡುವೆ ಪರಸ್ಪರ ಮಾತಿನ ಚಕಮಕಿಗಳು ನಡೆದಿದ್ದವು. ಇದರ ಬೆನ್ನಲ್ಲೇ ಭಿನ್ನಮತ ಇತ್ಯರ್ಥ ಮಾಡಿಕೊಳ್ಳಿ ಎಂದು ಮೊನ್ನೆ ಆಂಧ್ರದಲ್ಲಿ ಕೇಂದ್ರ ಸಚಿವ ಅಮಿತ್‌ ಶಾ ಅವರು ತಮಿಳಿಸಾಯಿಗೆ ತಾಕೀತು ಮಾಡಿದ್ದರು.

ಮಹಾದಾಖಲೆಗೆ ನಿರ್ಮಲಾ ಸಜ್ಜು, ಜುಲೈ 22ಕ್ಕೆ ಕೇಂದ್ರ ಬಜೆಟ್‌ ಮಂಡನೆ ಸಾಧ್ಯತೆ!

ಹೀಗಾಗಿ ಈಗ ಅಣ್ಣಾಮಲೈ-ತಮಿಳಿಸಾಯಿ ಭೇಟಿ ನಡೆದಿದೆ. ಈ ಬಗ್ಗೆ ಅಣ್ಣಾಮಲೈ ಟ್ವೀಟ್‌ ಮಾಡಿ ಪಕ್ಷದ ಹಿರಿಯ ನಾಯಕಿ, ತಮಿಳುನಾಡಿನಲ್ಲಿ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಅಕ್ಕಾ ತಮಿಳಿಸಾಯಿ ಅವರನ್ನು ಭೇಟಿ ಮಾಡಿದ್ದು ಖುಷಿ ತಂದಿದೆ. ಅವರ ರಾಜಕೀಯ ಅನುಭವ ಮತ್ತು ಸಲಹೆಗಳು ಪಕ್ಷದ ಬೆಳವಣಿಗೆಗೆ ನಿರಂತರವಾಗಿ ಪ್ರಚೋದನೆಯನ್ನು ನೀಡುತ್ತಿದೆ ಎಂದು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios