ಪ್ರತಿಭಟನಾನಿರತ ರಾಜ್ಯಸಭಾ ಸದಸ್ಯರಿಗೆ ಖುದ್ದು ಟೀ ತಂದು ಕೊಟ್ಟ ಉಪಸಭಾಪತಿ!

ರಾಜ್ಯಸಭೆಯಲ್ಲಿ ಭಾನುವಾರ ತೀವ್ರ ಕೋಲಾಹಲ| ಕೋಲಾಹಲ ಸೃಷ್ಟಿಸಿದ್ದ ಎಂಟು ಸದಸ್ಯರನ್ನು ಒಂದು ವಾರ ಅಮಾನತ್ತುಗೊಳಿಸಿದ ವೆಂಕಯ್ಯ ನಾಯ್ಡು| ಅಮಾನತ್ತು ವಿರೋಧಿಸಿ ಗಾಂಧೀ ಪ್ರತಿಮೆ ಎದುರು ಸದಸ್ಯರ ಪ್ರತಿಭಟನೆ| ಪ್ರತಿಭಟನಾ ನಿರತ ಸದಸ್ಯರಿಗೆ ಟೀ ತಂದುಕೊಟ್ಟ ಉಪಸಭಾಪತಿ ಹರಿವಂಶ್

RS Deputy Chairman Harivansh brought tea for the Rajya Sabha MPs who are protesting  at Gandhi statue pod

ನವದೆಹಲಿ(ಸೆ.22): ಕೊರೋನಾತಂಕ ನಡುವೆಯೂ ಮುಂಜಾಗೃತಾ ಕ್ರಮಗಳೊಂದಿಗೆ ಸಂಸತ್ತು ಅಧಿವೇಶನ ಆರಂಭವಾಗಿದೆ. ಈ ನಡುವೆ ಭಾನುವಾರ ಕೃಷಿ ಮಸೂದೆ ವಿರೋಧಿಸಿ ತೀವ್ರ ಕೋಲಾಹಲದ ಸೃಷ್ಟಿಸಿದ್ದ ಎಂಟು ಸದಸ್ಯರನ್ನು ವೆಂಕಯ್ಯ ನಾಯ್ಡು ಅಮಾನತುಗೊಳಿಸಿದ್ದಾರೆ. ಆದರೀಗ ತಮ್ಮನ್ನು ಅಮಾನತ್ತುಗೊಳಿಸಿರುವ ನಿರ್ಧಾರವನ್ನು ಖಂಡಿಸಿ ಸದಸ್ಯರು ಗಾಂಧೀ ಪ್ರತಿಮೆ ಬಳಿ ಪ್ರತಿಭಟನೆ ಮುಂದುವರೆಸಿದ್ದಾರೆ. ಹೀಗಿರುವಾಗ ಪ್ರತಿಭಟನಾನಿರತರಿಗೆ ರಾಜ್ಯಸಭೆಯ ಉಪಸಭಾಪತಿಯವರು ಖುದ್ದು ಟೀ ತಂದು ನೀಡಿದ ಘಟನೆ ಬೆಳಕಿಗೆ ಬಂದಿದೆ.\

'ಹಾಸಿಗೆ-ದಿಂಬು ಇಟ್ಟುಕೊಂಡು ಸಂಸದರ ಧರಣಿ' ಕರ್ನಾಟಕದಲ್ಲೂ ಆಗಿತ್ತು!

ಹೌದು ಭಾನುವಾರದಂದು ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿ(ಎಪಿಎಂಸಿ)ಯಿಂದ ಹೊರಗೆ, ದೇಶದ ಯಾವುದೇ ಭಾಗದಲ್ಲಾದರೂ ಉತ್ಪನ್ನ ಮಾರಲು ರೈತರಿಗೆ ಅವಕಾಶ ಕಲ್ಪಿಸುವ ಹಾಗೂ ಸಗಟು ವ್ಯಾಪಾರಿಗಳ ಜತೆ ಗುತ್ತಿಗೆ ಕರಾರು ಮಾಡಿಕೊಳ್ಳಲು ಅನ್ನದಾತರಿಗೆ ಅನುಮತಿ ನೀಡುವ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ 2 ಮಸೂದೆಗಳು ರಾಜ್ಯಸಭೆಯಲ್ಲಿ ತೀವ್ರ ವಿರೋಧದ ನಡುವೆ ಅಂಗೀಕಾರ ಪಡೆದಿವೆ. ಹೀಗಿರುವಾಗ ಹಿರಿಯರು ಹಾಗೂ ವಿಚಾರವಾದಿಗಳ ಸದನವಾಗಿರುವ ಸಂಸತ್ತಿನ ಮೇಲ್ಮನೆಯಲ್ಲಿ ಪ್ರತಿಪಕ್ಷಗಳ ಸದಸ್ಯರು ರಾಜ್ಯಸಭೆ ಉಪಸಭಾಪತಿಯತ್ತ ನಿಯಮಾವಳಿ ಪುಸ್ತಕವನ್ನು ತೂರಿದ್ದರು. 

ಕೃಷಿ ಮಸೂದೆ ಕೋಲಾಹಲ; ವಿಪಕ್ಷ ಸಂಸದರ ವರ್ತನೆಗೆ ರಾಜೀವ್ ಚಂದ್ರಶೇಖರ್ ಆಕ್ರೋಶ

ಇದರ ಬೆನ್ನಲ್ಲೇ ಸೋಮವಾರದಂದು ಉಪ ಸಭಾಪತಿ ಹರಿವಂಶ್ ಎಲ್ಲ ನಿಯಮಗಳನ್ನು,ಸಂಸದೀಯ ಪ್ರಕ್ರಿಯೆಗಳನ್ನು ಉಲ್ಲಂಘಿಸಿದ್ದಾರೆ. ಕೃಷಿ ಮಸೂದೆಯನ್ನು ವಿರೋಧಿಸುತ್ತಿರುವ ವಿವಿಧ ರಾಜಕೀಯ ಪಕ್ಷಗಳ ಸದಸ್ಯರಿಗೆ ಮಾತನಾಡಲು ಅವಕಾಶ ನೀಡಿಲ್ಲ. ಉಪಸಭಾಪತಿಯನ್ನು ಹುದ್ದೆಯಿಂದ ಕೆಳಗಿಳಿಸಬೇಕೆಂದು ಆಗ್ರಹಿಸಿ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿಲುವಳಿಯನ್ನು ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಸೋಮವಾರ ತಿರಸ್ಕರಿಸಿದ್ದರು ಹಾಗೂ ಕೋಲಾಹಲ ಸೃಷ್ಟಿಸಿ ಕಲಾಪಕ್ಕೆ ಅಡ್ಡಿ ಪಡಿಸಿದ ಹಾಗೂ ಉಪ ಸಭಾಪತಿಯನ್ನು ಅನುಚಿತವಾಗಿ ನಡೆಸಿಕೊಂಡ ಆರೋಪದಡಿ ಎಂಟು ಮಂದಿಯನ್ನು ಒಂದು ವಾರ ಅಮಾನತುಗೊಳಿಸಿದ್ದಾರೆ.

ಹೀಗಿರುವಾಗ ವಿಪಕ್ಷ ನಾಯಕರು ಸಂಸತ್ತಿನೆದುರಿನ ಗಾಂಧಿ ಪ್ರತಿಮೆ ಎದುರು ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ. ರಾತ್ರಿಯನ್ನೂ ಅಲ್ಲೇ ಕಳೆದಿದ್ದಾರೆ. ಹೀಗಿರುವಾಗ ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ಬೆಳ್ಳಂ ಬೆಳಗ್ಗೆ ತಮ್ಮ ಮನೆಯಲ್ಲಿ ತಯಾರಿಸಿದ ಚಹಾವನ್ನು ಪ್ರತಿಭಟನಾನಿರತ ಸದಸ್ಯರಿಗೆ ತಾವೇ ತಂದು ಕೊಟ್ಟಿದ್ದಾರೆ. ಸದನದಲ್ಲಿ ಸದಸ್ಯರು ತಮ್ಮ ವಿರುದ್ಧ ಪ್ರತಿಭಟಿಸಿದ್ದರೂ, ಅದನ್ನೆಲ್ಲಾ ಮರೆತು ಸದಸ್ಯರ ಪರ ಕಾಳಜಿ ತೋರಿರುವ ಹರಿವಂಶ್‌ರವರ ಮಾನವೀಯ ನಡೆಗೆ ಸದ್ಯ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Latest Videos
Follow Us:
Download App:
  • android
  • ios