ಕೃಷಿ ಮಸೂದೆ ವೇಳೆ ಕೋಲಾಹಲ/ ಸಂಸದರ ದುರ್ವರ್ತನೆಗೆ ಎಂಪಿ ರಾಜೀವ್ ಚಂದ್ರಶೇಖರ್ ಆಕ್ರೋಶ/ ಸಂಸತ್ತಿನ ಇತಿಹಾಸದಲ್ಲಿ ಇಂಥ ಘಟನೆ ಕಂಡಿಲ್ಲ/ ಈ ರೀತಿಯ ವರ್ತನೆ ಸಹಿಸಿಕೊಳ್ಳಲು ಅಸಾಧ್ಯ

ನವದೆಹಲಿ(ಸೆ. 20) ಕೃಷಿ ಮಸೂದೆ ವಿಚಾರ ರಾಜ್ಯಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣ ಮಾಡಿತ್ತು. ಕೃಷಿ ಮಸೂದೆ ಮಂಡನೆ ವೇಳೆ ವಿಪಕ್ಷಗಳ ಎಂಪಿಗಳು ನಡೆದುಕೊಂಡ ವರ್ತನೆ ಬಗ್ಗೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯಸಭೆಯಲ್ಲಿ ಟಿಎಂಸಿ ಸಂಸದರ ಕೋಲಾಹಲ ಎದ್ದಿತ್ತು. ಕೃಷಿ ವಿಧೇಯಕ ಚರ್ಚೆ ವೇಳ ಉಪ ಸಭಾಪತಿ ಎದುರು ಸಂಸದರು ಆಕ್ರೋಶ ವ್ಯಕ್ತಪಡಿಸಿ . ರೂಲ್ ಬುಕ್ ಹರಿದು ಹಾಕಿದ್ದರು. ಟಿಎಂಸಿ ಸಂಸದ ಡೆರೆಕ್ ಒಬ್ರಿಯನ್ ಆಕ್ರೋಶ ಕಟ್ಟೆ ಒಡೆದಿತ್ತು.

ರೂಲ್ ಬುಕ್ ಹರಿದು ಸಂಸದನ ಕೋಲಾಹಲ

ಸಂಸತ್ತಿನಲ್ಲಿ ನಾನು ಇಷ್ಟು ವರ್ಷದಲ್ಲಿ ಇಂಥ ಹಿಂಸಾತ್ಮಕ ಚಟುವಟಿಕೆ ನೋಡಿರಲಿಲ್ಲ. ಸಿಪಿಎಂ, ಟಿಎಂಸಿ ಮತ್ತು ಕಾಂಗ್ರೆಸ್ ಸಂಸದರು ಸಭಾಪತಿ ಮತ್ತು ಮಾರ್ಷಲ್ ಗಳ ಜತೆ ನಡೆದುಕೊಂಡ ರೀತಿಯನ್ನು ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ರಾಜೀವ್ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಪಕ್ಷಗಳ ಗದ್ದಲದ ಹಿನ್ನೆಲೆಯಲ್ಲಿ ರಾಜ್ಯಸಭೆಯ ಕಲಾಪವನ್ನು ಸೋಮವಾರ ಬೆಳಿಗ್ಗೆ 9 ಗಂಟೆವರೆಗೆ ಮುಂದೂಡಲಾಗಿದೆ. ವಿರೋಧದ ನಡುವೆಯೂ ಕೃಷಿ ಮಸೂದೆ ಪಾಸ್ ಆಗಿದೆ. 

Scroll to load tweet…