ಇಲ್ಲೊಂದು ಅಚ್ಚರಿ ನಡೆದಿದೆ. ರಸ್ತೆ, ಪಾರ್ಕ್, ಶಾಲೆ, ಕಟ್ಟಡ ಸೇರಿ ಒಂದು ಗ್ರಾಮದ ಅಭಿವೃದ್ಧಿಗೆ 43 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ವಿಶೇಷ ಅಂದರೆ 6 ವರ್ಷದ ಬಳಿಕ ಅಂತಹ ಒಂದು ಗ್ರಾಮವೇ ಇಲ್ಲ ಅನ್ನೋದು ಗೊತ್ತಾಗಿದೆ. ಹಾಗಾದ್ರೆ 43 ಲಕ್ಷ ರೂ ಖರ್ಚಾಗಿದ್ದು ಹೇಗೆ?
ಚಂಡೀಘಡ(ಜ.25) ಹ್ಯಾಟ್ ಒಳಗಿನಿಂದ ಪಾರಿವಾಳ ತೆಗೆಯುವುದು, ಶೂನ್ಯದಿಂದ ಹೂವು ಹೊರ ತೆಗೆಯುುದು ಸೇರಿದಂತೆ ಮ್ಯಾಜಿಶಿಯನ್ ಇಂದ್ರಜಾಲವನ್ನು ಎಲ್ಲರೂ ಗಮನಿಸಿರುತ್ತೀರಿ. ಶೂನ್ಯದಿಂದ ಏನಾದರು ಸೃಷ್ಟಿಸಿ ಅಚ್ಚರಿಗೊಳಿಸುತ್ತಾರೆ. ಆದರೆ ಇಲ್ಲಿ ಸರ್ಕಾರದ ಮಂತ್ರಿಗಳು, ಅಧಿಕಾರಿಗಳು ಇಂದ್ರಜಾಲಗಾರನಿಗಿಂತ ಉತ್ತಮವಾಗಿ ಶೂನ್ಯದಿಂದ ಒಂದು ಇಡೀ ಗ್ರಾಮನ್ನೇ ಸೃಷ್ಟಿಸಿದ್ದಾರೆ. ಈ ಗ್ರಾಮದಲ್ಲಿ ಶಾಲೆ, ರಸ್ತೆ, ಪಾರ್ಕ್, ಪಾದಾಚಾರಿಗಳು ನಡೆದಾಡಲು ಇಂಟರ್‌ಲಾಕ್ ರಸ್ತೆ, ಹೊಸ ಪಂಚಾಯಿತಿ ಕಟ್ಟಡ, ಕುಡಿಯಲು ನೀರು, ಪ್ರತಿ ಮನೆಗೆ ವಿದ್ಯುತ್. ಹೀಗೆ ಎಲ್ಲವನ್ನೂ ಶೂನ್ಯದಲ್ಲಿ ಸೃಷ್ಟಿಸಿ ಬಳಿಕ ಮಾಯ ಮಾಡಿದ ಘಟನೆ ಪಂಜಾಬ್‌ನ ಫೆರೋಜೆಪುರ್‌ದಲ್ಲಿ ನಡೆದಿದೆ.
ಭ್ರಷ್ಟಾಚಾರ ಯಾವ ಮಟ್ಟಿಗೆ ಇದೆ ಅನ್ನೋದು ಬಿಡಿಸಿ ಹೇಳಬೇಕಿಲ್ಲ, ಎಲ್ಲರಿಗೂ ಅನುಭವಕ್ಕೆ ಬಂದಿರುತ್ತೆ. ಪ್ರಮುಖವಾಗಿ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ನಡೆಯುವ ಅವ್ಯವಹಾರಗಳು ಹಲವು ಬಾರಿ ಸುದ್ದಿಯಾಗುವುದಿಲ್ಲ. ಪಂಜಾಬ್‌ನ ಗಡಿಯಲ್ಲಿರುವ ಫೆರೋಜೆಪುರ್‌ದಲ್ಲೂ ಇದೇ ಆಗಿದೆ. 2018-19ರಲ್ಲಿ ನವ ಗತ್ತಿ ರಾಜೋ ಕಿ ಗ್ರಾಮ ಅನ್ನೋ ಹೊಸ ಗ್ರಾಮವನ್ನು ಸೃಷ್ಟಿಸಲಾಗಿದೆ. ಈ ಗ್ರಾಮದ ರೋಚಕ ಕತೆಗಳು ಇನ್ನು ಆರಂಭಗೊಳ್ಳುತ್ತದೆ.
ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆಯಲ್ಲಿ ಅತೀ ಹೆಚ್ಚು ನರೇಗಾ ಹಾಜರಾತಿ ಅಕ್ರಮ
ಆಡಳಿತ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಹೊಸ ಗ್ರಾಮವನ್ನು ಪಂಜಾಬ್‌ನಲ್ಲಿ ಮಾಡಲಾಗಿದೆ. ಹಳ್ಳಿಗಳ ಅಭಿವೃದ್ಧಿ ಯೋಜನೆಯಡಿ ಹಲವು ಜಿಲ್ಲೆಗಳಲ್ಲಿ ಹೊಸ ಗ್ರಾಮ ಪಂಚಾಯಿತಿ ಮಾಡಿ ಅನುದಾನ ನೀಡಲಾಗಿದೆ. ಈ ಪೈಕಿ ಫೆರೋಜೆಪುರ್‌ದಲ್ಲಿ ನ್ಯೂ ಗತ್ತಿ ರಾಜೋ ಕಿ ಗ್ರಾಮ್ ಅನ್ನೋದು ಸೃಷ್ಟಿಯಾಗಿದೆ. ಬಳಿಕ ಈ ಹೊಸ ಗ್ರಾಮದಲ್ಲಿ 55 ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗಿದೆ. ವಿಶೇಷ ಅಂದರೆ ಹೊಸ ಗ್ರಾಮವಾಗಿರುವ ಕಾರಣ ಹೊಸ ಪಂಚಾಯಿತಿ ಕಟ್ಟಡ, ಗ್ರಾಮಕ್ಕೊಂದು ಶಾಲೆ, ಆಟದ ಮೈದಾನ, ರಸ್ತೆ, ಪಾರ್ಕ್, ಗ್ರಾಮ ಶುಚಿ ಮಾಡಲು ವ್ಯವಸ್ಥೆ, ಕುಡಿಯುವ ನೀರಿಗೆ ಕೊಳವೆ ಬಾವಿ, ನೀರು ಸಾಗಿಸಲು ಪೈಪ್ಲೈನ್ ಮಾಡಲಾಗಿದೆ. ಇದಕ್ಕಾಗಿ ಸರ್ಕಾರ 43 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ಈ ಹಣವನ್ನು ಗ್ರಾಮದ ಅಬಿವೃದ್ಧಿಗೆ ಖರ್ಚು ಮಾಡಲಾಗಿದೆ. ಇದರ ಜೊತೆಗೆ 140 ಮನರೇಗಾ ಕಾರ್ಡ್ ಕೂಡ ಮಾಡಿಸಲಾಗಿದೆ.
6 ವರ್ಷದ ಬಳಿಕ ನ್ಯೂ ಗತ್ತಿ ರಾಜೋ ಕಿ ಗ್ರಾಮದ ಅಸಲಿ ವಿಚಾರ ಬಹಿರಂಗವಾಗಿದೆ. ಆರ್‌ಟಿಐ ಕಾರ್ಯಕರ್ತ, ಗ್ರಾಮದ ಬ್ಲಾಕ್ ಕಮಿಟಿ ಮೆಂಬರ್ ಗುರುದೇವ್ ಸಿಂಗ್ ಈ ಗ್ರಾಮದ ಕುರಿತು ಅನುಮಾನ ಮೂಡಿದೆ. ಹೀಗಾಗಿ ಈ ಕುರಿತು ಅಧಿಕಾರಿಗಳ ಬಳಿ ಮಾಹಿತಿ ಕೇಳಿದ್ದಾನೆ. ಆದರೆ ಎಲ್ಲಾ ಅಧಿಕಾರಿಗಳು, ನಾಯಕರು ಈತನಿಗೆ ಉತ್ತರ ಕೊಡದೆ ದೂರವಿಟ್ಟಿದ್ದಾರೆ. ಹೀಗಾಗಿ ಆರ್‌ಟಿಐ ಮೂಲಕ ಈ ಗ್ರಾಮದ ಮಾಹಿತಿ ಪಡೆದಿದ್ದಾನೆ.
ವಿಶೇಷ ಅಂದರೆ ದಾಖಲೆಯಲ್ಲಿ ನ್ಯೂ ಗತ್ತಿ ರಾಜೋ ಕಿ ಗ್ರಾಮದಲ್ಲಿ ಎಲ್ಲಾ ಅಭಿವೃದ್ಧಿ ಕೆಲಸ ಮಾಡಿ ಮುಗಿಸಲಾಗಿದೆ. ಗ್ರಾಮದ ಮ್ಯಾಪ್, ಹೋಗಬೇಕಾದ ಮಾರ್ಗ ಸೇರಿ ಎಲ್ಲವೂ ಸ್ಪಷ್ಟವಾಗಿದೆ. ಎಲ್ಲಾ ಅಭಿವದ್ಧಿಗೆ 43 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಅನ್ನೋ ದಾಖಲೆ ಇದೆ. ಈ ಮಾಹಿತಿ ಅಧರಿಸಿ ಗ್ರಾಮಕ್ಕೆ ತೆರಳಿದರೇ ಅಂತಹ ಒಂದು ಗ್ರಾಮವೇ ಇಲ್ಲ. ದಾಖಲೆ ಹಾಗೂ ಸೂಚಿಸಿರುವ ಮ್ಯಾಪ್ ಹಿಡಿದು ತೆರಳಿದಾಗ ಈ ಸ್ಥಳ ಭಾರತ ಹಾಗೂ ಪಂಜಾಬ್ ಗಡಿಯ ಝೀರೋ ಲೈನ್ ಬಳಿ ಇದೆ. ಇದು ಝಿರೋ ಲೈನ್ ಇಲ್ಲಿ ಏನು ಮಾಡವಂತಿಲ್ಲ. ಇಷ್ಟೇ ಅಲ್ಲ ಇದು ಅಂತಾರಾಷ್ಟ್ರೀಯ ಗಡಿ ರೇಖೆ. ಇದೇ ಜಾಗವನ್ನು ತೋರಿಸಿ ನಾಯಕರು, ಅಧಿಕಾರಿಗಳು ಹೊಸ ಗ್ರಾಮ ಸೃಷ್ಟಿಸಿದ್ದೇವೆ ಎಂದು ಬರೋಬ್ಬರಿ 43 ಲಕ್ಷ ರೂಪಾಯಿ ಗುಳುಂ ಮಾಡಿದ್ದಾರೆ.
ಆರ್‌ಟಿಐ ಮಾಹಿತಿ ಹೊರಬೀಳುತ್ತಿದ್ದಂತೆ ಫೆರೋಜೆಪುರ್‌ದಲ್ಲಿ ಕೋಹಾಲ ಸೃಷ್ಟಿಯಾಗಿದೆ. ಫೆರೋಜೆಪುರ್ ಜಿಲ್ಲಾಧಿಕಾರಿ ದೀಪಾಕ್ಷ ಶರ್ಮಾ ತನಿಖೆಗೆ ಆದೇಶಿಸಿದ್ದಾರೆ. ಮ್ಯಾಜಿಶೀಯನ್ ಶೂನ್ಯದಿಂದ ಸಣ್ಣ ಸಣ್ಣ ವಸ್ತುಗಳು, ಯುವತಿಯನ್ನು ಅಚಾನಕ್ಕಾಗಿ ಸೃಷ್ಟಿಸಿದರೆ, ಅಧಿಕಾರಿಗಳು, ಜನ ನಾಯಕರು ಒಂದು ಇಡೀ ಗ್ರಾಮನ್ನೇ ಸೃಷ್ಟಿಸಿರುವುದು ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿದೆ.
83 ವರ್ಷದ ವೃದ್ಧನ ಹತ್ತಿರ 2 ಲಕ್ಷ ಲಂಚ ತೆಗೆದುಕೊಂಡ ಕಾರ್ಪೋರೇಷನ್ ಆಫೀಸರ್ ಅಮಾನತು
