Asianet Suvarna News Asianet Suvarna News

ಅಯೋಧ್ಯೆ ರಾಮಮಂದಿರದ ಭದ್ರತೆಗೆ 38 ಕೋಟಿ ವೆಚ್ಚದ ಭರ್ಜರಿ ಪ್ಲ್ಯಾನ್‌!

ನಿರ್ಮಾಣ ಹಂತದಲ್ಲಿರುವ ದೇವಸ್ಥಾನದ ಭದ್ರತೆಯ ಎಲ್ಲಾ ಅಂಶಗಳನ್ನು ವಿವರಿಸುವ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಸರ್ಕಾರಕ್ಕೆ ಕಳಿಸುವ ಕೆಲಸಗಳು ನಡೆಯುತ್ತಿವೆ.
 

Rs 38 crore security plan for Ayodhya Ram Temple threats from land air water covered san
Author
First Published Jun 27, 2023, 4:34 PM IST | Last Updated Jun 27, 2023, 4:34 PM IST

ನವದೆಹಲಿ (ಜೂ.27): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯವಾಗಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ಭದ್ರತೆಗೆ ಬರೋಬ್ಬರಿ 38 ಕೋಟಿ ರೂಪಾಯಿಯನ್ನು ವಾರ್ಷಿಕವಾಗಿ ವೆಚ್ಚ ಮಾಡಲಾಗುತ್ತದೆ. ಭದ್ರತಾ ಕಾರ್ಯಕ್ಕೆ ಅಗತ್ಯವಿರುವ ಮೊತ್ತವನ್ನು ಈಗಾಗಲೇ ಉತ್ತರ ಪ್ರದೇಶ ಸರ್ಕಾರವು ಅನುಮೋದಿಸಿದೆ. ಇದನ್ನು ಯುಪಿ ನಿರ್ಮಾಣ್ ನಿಗಮ್‌ಗೆ ವಹಿಸಲಾಗಿದೆ.  ನಿರ್ಮಾಣ ಹಂತದಲ್ಲಿರುವ ದೇವಸ್ಥಾನದ ಭದ್ರತೆಯ ಎಲ್ಲಾ ಅಂಶಗಳನ್ನು ವಿವರಿಸುವ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಸರ್ಕಾರಕ್ಕೆ ಕಳಿಸುವ ನಿಟ್ಟಿನಲ್ಲಿ ಕೆಲಸಗಳು ಪ್ರಗತಿಯಲ್ಲಿದೆ. ನವೆಂಬರ್‌ನ ಒಳಗಾಗಿ ದೇವಸ್ಥಾನಕ್ಕೆ ಯಾವೆಲ್ಲಾ ರೀತಿಯಲ್ಲಿ ಭದ್ರತೆ ನೀಡಬೇಕು. ಆಧುನಿಕ ವ್ಯವಸ್ಥೆಗಳನ್ನು ಹೇಗೆಲ್ಲಾ ಬಳಸಿಕೊಳ್ಳಬಹುದು ಎನ್ನುವುದನ್ನು ತಿಳಿಸುವ ಡಿಪಿಆರ್‌ ಸಿದ್ಧವಾಗಬೇಕು. ನವೆಂಬರ್‌ ಒಳಗಾಗಿ ಇದು ಸರ್ಕಾರದ ಮುಂದಿರಬೇಕು ಎಂದು ತಿಳಿಸಲಾಗಿದೆ. ಮೊದಲ ಹಂತದ ಭದ್ರತಾ  ಯೋಜನೆಗೆ ಶೀಘ್ರದಲ್ಲೇ ಚಾಲನೆ ದೊರೆಯುವ ನಿರೀಕ್ಷೆ ಇದೆ. ವೈಮಾನಿಕ ಮತ್ತು ಜಲಮೂಲ ದಾಳಿಯಿಂದ ದೇವಸ್ಥಾನವನ್ನು ಸುರಕ್ಷಿತವಾಗಿಡಲು ವ್ಯವಸ್ಥೆ ಮಾಡಲಾಗುವುದು. ನಗರದ ಆಡಳಿತವು ದೇವಾಲಯವನ್ನು ಹೊರಗಿನಿಂದ ರಕ್ಷಿಸುತ್ತದೆ. ಆಂತರಿಕ ವ್ಯವಸ್ಥೆಗಳನ್ನು ದೇವಸ್ಥಾನದ ಟ್ರಸ್ಟ್ ನೋಡಿಕೊಳ್ಳುತ್ತದೆ.

ದೇವಾಲಯದ ಹೊರಗೆ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗುವುದು. ಸಿಸಿಟಿವಿ ಕ್ಯಾಮೆರಾಗಳು ಮತ್ತು ಇತರ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗುವುದು. ದೇವಾಲಯದ ಬಳಿ ಹರಿಯುವ ಸರಯು ನದಿಯಿಂದ ಹೊರಹೊಮ್ಮುವ ಸಂಭಾವ್ಯ ಬೆದರಿಕೆಗಳ ಬಗ್ಗೆಯೂ ಗಮನಹರಿಸಲಾಗುವುದು. ಇದಕ್ಕಾಗಿ ದೇವಾಲಯದ ಬಳಿ ಬೋಟ್‌ಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಎಲ್ಲ ಸಿಸಿಟಿವಿ ಕ್ಯಾಮೆರಾಗಳ ಮೇಲೆ ನಿಗಾ ಇಡಲು ನಿಯಂತ್ರಣ ಕೊಠಡಿಯನ್ನೂ ದೇವಸ್ಥಾನದಲ್ಲಿ ನಿರ್ಮಾಣ ಮಾಡಲಾಗುತ್ತದೆ ಎನ್ನಲಾಗಿದೆ.

 

ರಾಮ ಮಂದಿರಕ್ಕೆ ಹನುಮ ನಾಡಿನಿಂದ ಮೃತ್ತಿಕೆ ಸಂಗ್ರಹ ಶೀಘ್ರ: ಸೂಲಿಬೆಲೆ

ಸರ್ಕಾರದ ಭದ್ರತಾ ಯೋಜನೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇವೆ ಎಂದು ಹಿರಿಯ ಅಧಿಕಾರಿ ಗೌರವ್ ದಯಾಳ್ ತಿಳಿಸಿದ್ದು,  ಇದಕ್ಕಾಗಿ 38 ಕೋಟಿ ರೂಪಾಯಿ ಸಂಭಾವ್ಯ ವೆಚ್ಚವಾಗಬಹುದು ಎಂದಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಯುಪಿ ಸರ್ಕಾರವು ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಲುವಾಗಿ  ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದೆ. ಮುಂದಿನ ವರ್ಷ ರಾಮ ಮಂದಿರ ಅನಾವರಣವಾಗುವ ಸಾಧ್ಯತೆ ಇದೆ.

ಸಂಕ್ರಾಂತಿ ದಿನ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ: ದೇಶ, ವಿದೇಶಗಳಲ್ಲಿ ಸಮಾರಂಭದ ಪ್ರಸಾರ

Latest Videos
Follow Us:
Download App:
  • android
  • ios