Asianet Suvarna News Asianet Suvarna News

IT Raid: ಉತ್ತರ ಪ್ರದೇಶ ಸೆಂಟ್‌ ಉದ್ಯಮಿ ಮನೆಯಲ್ಲಿ ಸಿಕ್ಕಿದ್ದು 177 ಕೋಟಿ..!

*   ಜಿಎಸ್‌ಟಿ ವಿಭಾಗದ ಇತಿಹಾಸದಲ್ಲೇ ಇಷ್ಟು ಹಣವನ್ನು ಜಪ್ತು ಮಾಡಿರುವುದು ಇದೇ ಮೊದಲು
*  11 ಸ್ಥಳಗಳಲ್ಲಿ ದಾಳಿ(Raid) ನಡೆಸಿದ್ದ ಅಧಿಕಾರಿಗಳು
*  ದುಡ್ಡು ಲೆಕ್ಕ ಹಾಕಲು ನೋಟು ಎಣಿಕೆ ಯಂತ್ರಗಳ ಬಳಕೆ

Rs 177 Crore Seized from Uttara Pradesh Businessman grg
Author
Bengaluru, First Published Dec 26, 2021, 7:06 AM IST

ಕಾನ್ಪುರ(ಡಿ.26):  ಸುಗಂಧ ದ್ರವ್ಯ ಹಾಗೂ ಪಾನ್‌ ಮಸಾಲಾ ಉದ್ಯಮಿ ಪೀಯೂಷ್‌ ಜೈನ್‌ಗೆ(Piyush Jain) ಸಂಬಂಧಿಸಿದ 177.45 ಕೋಟಿ ರು. ನಗದನ್ನು ಕಾನ್ಪುರದ(Kanour) ವಿವಿಧ ಸ್ಥಳಗಳಿಂದ ಸರಕು ಮತ್ತು ಸೇವಾ ತೆರಿಗೆ ವಿಭಾಗದ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಶುಕ್ರವಾರದವರೆಗೆ 150 ಕೋಟಿ ರು. ಎಣಿಸಲಾಗಿತ್ತು. ತಡರಾತ್ರಿ ಎಣಿಕೆ ಮುಂದುವರಿದಾಗ 177 ಕೋಟಿ ರು.ಗೆ ಏರಿದೆ. ಜಿಎಸ್‌ಟಿ(GST) ವಿಭಾಗದ ಇತಿಹಾಸದಲ್ಲೇ ಇಷ್ಟು ಹಣವನ್ನು(Money) ಜಪ್ತು ಮಾಡುವುದು ಇದೇ ಮೊದಲು ಎನ್ನಲಾಗಿದೆ.

ಶಿಖರ್‌ ಪಾನ್‌ಮಸಾಲಾ ಹಾಗೂ ತಂಬಾಕು ಉತ್ಪನ್ನಗಳನ್ನು ತಯಾರಿಸುವ ತ್ರಿಮೂರ್ತಿ ಫ್ರೇಗ್ರನ್ಸ್‌ ಸೇರಿದಂತೆ ಪಿಯೂಷ್‌ಗೆ ಸೇರಿದ ಕಾರ್ಖಾನೆ, ಕಚೇರಿ, ಪೆಟ್ರೋಲ್‌ ಪಂಪ್‌ ಸೇರಿದಂತೆ 11 ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ(Raid) ನಡೆಸಿದ್ದರು. ಭಾರೀ ಪ್ರಮಾಣದಲ್ಲಿ ಹಣ ಪತ್ತೆಯಾದ ಕಾರಣ ಸ್ಟೇಟ್‌ ಬ್ಯಾಂಕಿನಿಂದ 19 ನೋಟು ಎಣಿಕೆ ಯಂತ್ರಗಳನ್ನು ತೆಗೆದುಕೊಳ್ಳಲಾಗಿತ್ತು. ಅವುಗಳನ್ನು 24 ಗಂಟೆ ಸತತ ಬಳಕೆ ಮಾಡಿ ಶನಿವಾರ ಹಿಂತಿರುಗಿಸಲಾಗಿದೆ.

UP IT raids ಉದ್ಯಮಿ ಮನೆ ಮೇಲೆ ಅಧಿಕಾರಿಗಳ ದಾಳಿ, 150 ಕೋಟಿ ರೂ ಮೀರಿದ ನಗದು ಪತ್ತೆ!

ಚೀನಾ ಮೊಬೈಲ್‌ ಕಂಪನಿಗಳ ಮೇಲೆ ದೇಶವ್ಯಾಪಿ ಐಟಿ ದಾಳಿ!

ನವದೆಹಲಿ: ಬೆಂಗಳೂರು(Bengaluru) ಸೇರಿದಂತೆ ದೇಶಾದ್ಯಂತ ಚೀನಾ ಮೊಬೈಲ್‌ ಕಂಪನಿಗಳು(ಚೀನಾ ಮೊಬೈಲ್‌ ಕಂಪನಿಗಳು)  ಮತ್ತು ವಿತರಕ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ(Department of Income Tax) ಅಧಿಕಾರಿಗಳು ದಾಳಿ ನಡೆಸಿದ್ದಾರೆ ಹಾಗೂ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದ ಘಟನೆ ಡಿ 23 ರಂದು ನಡೆದಿತ್ತು.  

ಚೀನಾದ ಮೊಬೈಲ್‌ ಕಂಪನಿಗಳು ಭಾರತದ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿದ್ದು, ಸರ್ಕಾರಕ್ಕೆ ಭಾರೀ ಪ್ರಮಾಣದ ತೆರಿಗೆ ವಂಚನೆ ಎಸಗುತ್ತಿವೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಈ ಮಾಹಿತಿ ಮೇರೆಗೆ ಚೀನಾದ ಮೊಬೈಲ್‌ ಕಂಪನಿಗಳಾದ ಶವೋಮಿ, ಒನ್‌ಪ್ಲಸ್‌, ಒಪ್ಪೋ ಮೇಲೆ ಈ ದಾಳಿ ನಡೆದಿದೆ. ಅಲ್ಲದೆ ಈ ಕಂಪನಿಗಳ ಮೇಲೆ ತನಿಖಾ ಸಂಸ್ಥೆಗಳು ಕಣ್ಗಾವಲು ವಹಿಸಿದ್ದವು.

ಬೆಂಗಳೂರು, ಚೆನ್ನೈ, ಹೈದರಾಬಾದ್‌, ದೆಹಲಿ, ಮುಂಬೈ, ಗ್ರೇಟರ್‌ ನೋಯ್ಡಾ, ಕೋಲ್ಕತಾ, ಗುವಾಹಟಿ, ಇಂದೋರ್‌ ಸೇರಿದಂತೆ ಇನ್ನಿತರ ನಗರಗಳಲ್ಲಿರುವ ಚೀನೀ ಮೊಬೈಲ್‌ ಕಂಪನಿಗಳ ಉತ್ಪಾದನಾ ಘಟಕಗಳು, ಗೋಡೌನ್‌ಗಳು, ಕಾರ್ಪೊರೆಟ್‌ ಕಚೇರಿಗಳ ಮೇಲೆ ದಾಳಿ ನಡೆದಿದೆ. ಈ ಕಂಪನಿಗಳ ಹಿರಿಯ ಅಧಿಕಾರಿಗಳ ಕಚೇರಿ ಮತ್ತು ನಿವಾಸಗಳಲ್ಲೂ ದಾಳಿ ನಡೆಸಲಾಗಿದ್ದು, ಅವರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕಾನೂನು ಗೌರವಿಸುತ್ತೇವೆ- ಒಪ್ಪೋ, ಶವೋಮಿ:

ದಾಳಿ ಬಗ್ಗೆ ಒಪ್ಪೋ ವಕ್ತಾರ ಪ್ರತಿಕ್ರಿಯಿಸಿ, ‘ಭಾರತದಲ್ಲಿ(India) ಹೂಡಿಕೆ ಪಾಲುದಾರಿಕೆ ಹೊಂದಿರುವ ನಾವು ಈ ನೆಲದ ಕಾನೂನುಗಳನ್ನು ಗೌರವಿಸುತ್ತೇವೆ ಹಾಗೂ ಅದನ್ನು ಪಾಲಿಸುತ್ತಿದ್ದೇವೆ. ಪ್ರಕರಣದ ತನಿಖೆಗೆ ತನಿಖಾ ಸಂಸ್ಥೆಗಳಿಗೆ ಪೂರ್ತಿ ಸಹಕಾರ ನೀಡುತ್ತೇವೆ’ ಎಂದು ತಿಳಿಸಿದ್ದಾರೆ.

IT Raid: ಗುಜರಾತ್‌ ಮೂಲದ ಗುಟ್ಕಾ ಸಂಸ್ಥೆ ಮೇಲೆ ದಾಳಿ: 100 ಕೋಟಿ ಅಕ್ರಮ ಸಂಪತ್ತು ಪತ್ತೆ

‘ಜವಾಬ್ದಾರಿಯುತ ಕಂಪನಿಯಾಗಿ ನಾವು ಭಾರತದ ಕಾನೂನುಗಳಿಗೆ ಹೆಚ್ಚಿನ ಮಹತ್ವ ನೀಡುತ್ತೇವೆ. ಜತೆಗೆ ತನಿಖಾ ಸಂಸ್ಥೆಗಳು ಕೋರುವ ಎಲ್ಲಾ ಮಾಹಿತಿಗಳನ್ನು ನೀಡಿ, ಸಹಕರಿಸುತ್ತೇವೆ’ ಎಂದು ಶವೋಮಿ ತಿಳಿಸಿದೆ.

ಅಖಿಲೇಶ್ ಯಾದವ್ ಆಪ್ತ ರೈ ಸೇರಿ ಹಲವು SP ನಾಯಕರ ಮೇಲೆ IT Raid!

ಉತ್ತರ ಪ್ರದೇಶದಲ್ಲಿ (Uttar Pradesh), ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ಪಕ್ಷಗಳಲ್ಲಿ ರಾಜಕೀಯ ಕ್ರಾಂತಿಯಾಗಿದೆ (Assembly Elections 2022). ಅದೇ ಸಮಯದಲ್ಲಿ, ಡಿ.18 ರಂದು ಆದಾಯ ತೆರಿಗೆ ಇಲಾಖೆಯು ಎಸ್ಪಿ ನಾಯಕರ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡುವ ಮೂಲಕ ಸಂಚಲನವನ್ನು ಸೃಷ್ಟಿಸಿತ್ತು.

ಸಮಾಜವಾದಿ ಪಕ್ಷದ ಮುಖಂಡ ರಾಜೀವ್ ರೈ ಮನೆ ಮೇಲೆ ಆದಾಯ ತೆರಿಗೆ ಇಲಾಖೆ 2 ಗಂಟೆಗಳ ಕಾಲ ದಾಳಿ ನಡೆಸಿತ್ತು. ಆದಾಯ ತೆರಿಗೆ ಇಲಾಖೆಯ ಈ ದಾಳಿಯು ಎಸ್ಪಿ ನಾಯಕ ರಾಜೀವ್ ರೈ ಅವರ ಮೌವಿನಲ್ಲಿರುವ ಮನೆ ಮೇಲೆ ದಾಳಿ ನಡೆದಿತ್ತು.
 

Follow Us:
Download App:
  • android
  • ios