Asianet Suvarna News Asianet Suvarna News

IT Raid: ಗುಜರಾತ್‌ ಮೂಲದ ಗುಟ್ಕಾ ಸಂಸ್ಥೆ ಮೇಲೆ ದಾಳಿ: 100 ಕೋಟಿ ಅಕ್ರಮ ಸಂಪತ್ತು ಪತ್ತೆ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೆಲವು ದಿನಗಳ ಹಿಂದೆ ಗುಜರಾತ್‌ ಮೂಲದ ಗುಟ್ಕಾ ಸಂಸ್ಥೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ 100 ಕೋಟಿ ರೂ. ಅಕ್ರಮ ಸಂಪತ್ತು ಪತ್ತೆಯಾಗಿದೆ.

100 Cr hidden income found IT raid on Gujarat Gutkha distributor anu
Author
Bangalore, First Published Nov 24, 2021, 8:29 PM IST

ಅಹಮದಾಬಾದ್ (ನ.24): ಗುಜರಾತ್ (Gujarat) ಮೂಲದ ಗುಟ್ಕಾ (Gutkha) ವಿತರಕ (distribution)) ಸಂಸ್ಥೆ ಮೇಲೆ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ (Income tax department) ದಾಳಿ (raid) ನಡೆಸಿದ ಸಮಯದಲ್ಲಿ 100 ಕೋಟಿ ರೂ.ಗೂ ಅಧಿಕ ಅಕ್ರಮ ಆದಾಯ  (Unaccounted Income) ಪತ್ತೆಯಾಗಿದೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ (CBDT) ತಿಳಿಸಿದೆ. ನವೆಂಬರ್‌ 16ರಂದು ಆದಾಯ ತೆರಿಗೆ ಅಧಿಕಾರಿಗಳು ಗುಟ್ಕಾ ವಿತರಕರ ಗುಂಪಿಗೆ ಸೇರಿದ 15 ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ದಾಖಲೆಗಳಿರದ ಸುಮಾರು 7.5 ಕೋಟಿ ರೂ. ನಗದು ಹಾಗೂ 4 ಕೋಟಿ ರೂ. ಮೌಲ್ಯದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆದಾಯ ತೆರಿಗೆ ಇಲಾಖೆಯು ಗುಟ್ಕಾ ವಿತರಕರ ಗುಂಪಿನ ಹೆಸರನ್ನು ಈ ತನಕ ಬಹಿರಂಗಪಡಿಸಿಲ್ಲ.ಆದ್ರೆ 30 ಕೋಟಿ ರೂ. ಅಘೋಷಿತ ಆದಾಯ ಹೊಂದಿರೋದಾಗಿ ಗುಂಪು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದೆ. ದಾಳಿಯ ವೇಳೆ ಅಧಿಕಾರಿಗಳು ಅಕ್ರಮ ಸಂಪತ್ತಿಗೆ ಸಂಬಂಧಿಸಿದ ವಿವಿಧ ದಾಖಲೆಗಳು ಹಾಗೂ ಡಿಜಿಟಲ್‌ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಎಲ್ಲ ದಾಖಲೆಗಳು ಹಾಗೂ ಸಾಕ್ಷ್ಯಗಳು ಈ ಗುಂಪು ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿರೋದಕ್ಕೆ ಸಾಕ್ಷ್ಯ ಒದಗಿಸಿವೆ ಎಂಬುದನ್ನು ಆದಾಯ ತೆರಿಗೆ ಅಧಿಕಾರಿಗಳು ದೃಢಪಡಿಸಿದ್ದಾರೆ. ವಸ್ತುಗಳ ಮಾರಾಟಕ್ಕೆ ಸಂಬಂಧಿಸಿ ಇನ್‌ವಾಯ್ಸ್‌ ನಿರ್ವಹಣೆ ಮಾಡದಿರೋದು ಹಾಗೂ ನಗದಿನಲ್ಲಿ ವ್ಯವಹಾರ ಮಾಡಿ ಆದಾಯ ತೆರಿಗೆ ಇಲಾಖೆಯ ಲೆಕ್ಕಕ್ಕೆ ಸಿಗದಂತಹ ಕ್ರಮಗಳನ್ನು ಅನುಸರಿಸೋದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

FIR against Kangana Ranaut: ಸ್ವಾತಂತ್ರ್ಯವಲ್ಲ, ಭಿಕ್ಷೆ ಹೇಳಿಕೆಗೆ ಆಗ್ರಾದಲ್ಲೂ ನಟಿ ವಿರುದ್ಧ ದೂರು

ಆದಾಯ ತೆರಿಗೆ ಲೆಕ್ಕದ ಪ್ರಕಾರ ಅಧಿಕಾರಿಗಳು ನಡೆಸಿರೋ ದಾಳಿಯಲ್ಲಿ 100 ಕೋಟಿಗೂ ಹೆಚ್ಚು ದಾಖಲೆಗಳಿಲ್ಲದ ಆದಾಯ ಪತ್ತೆಯಾಗಿದೆ. ಆದ್ರೆ ಗುಂಪು ಕೇವಲ 30 ಕೋಟಿ ಅಘೋಷಿತ ಆದಾಯವನ್ನು ಒಪ್ಪಿಕೊಂಡಿದೆ. ನಗದು ಹಣ ಪಡೆದು ವಸ್ತುಗಳನ್ನು ಮಾರಾಟ ಮಾಡಿರೋ ಬಗ್ಗೆ ಎಲ್ಲೂ ದಾಖಲೆಗಳನ್ನು ನಿರ್ವಹಣೆ ಮಾಡಿಲ್ಲ. ಅಲ್ಲದೆ, ಈ ಗುಂಪು ಅನೇಕ ಸ್ಥಳಗಳಲ್ಲಿ ಸ್ಥಿರ ಆಸ್ತಿಗಳ ಮೇಲೆ ಹೂಡಿಕೆ ಮಾಡಿದ್ದು, ಇದಕ್ಕೂ ಕೂಡ ಅಕ್ರಮ ಹಣ ಬಳಸಿರೋದಕ್ಕೆ ಪುರಾವೆಗಳು ಸಿಕ್ಕಿವೆ. ಈ ಗುಂಪಿಗೆ ಸೇರಿದ ಬ್ಯಾಂಕ್‌ ಲಾಕರ್‌ಗಳನ್ನು ಈಗಾಗಲೇ ಸೀಲ್‌ ಮಾಡಲಾಗಿದ್ದು, ಈ ಪ್ರಕರಣದ ಕುರಿತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ ತಿಳಿಸಿದೆ. 

ಅಭಿನಂದನ್ ಲೇವಡಿ ಮಾಡಿದ ಪಾಕ್ ಹರಕು ಬಾಯಿ!

ಗುಜರಾತ್‌ನಲ್ಲಿ ಮತ್ತೊಂದು ಐಟಿ ದಾಳಿ
ಗುಟ್ಕಾ ಸಂಸ್ಥೆ ಮೇಲಿನ ದಾಳಿಯ ಬಳಿಕ ಐಟಿ ಇಲಾಖೆ ಕಳೆದ ಗುರುವಾರ ಗುಜರಾತ್ ಮೂಲದ ರಾಸಾಯನಿಕ ಉತ್ಪಾದನಾ ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮ ಸಂಸ್ಥೆಗೆ ಸಂಬಂಧಿಸಿದ 20 ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿಗಳು ಗುಜರಾತ್‌ನ ವಾಪಿ, ಸರಿಗಮ್‌ ಹಾಗೂ ಮುಂಬೈಯಲ್ಲಿ ನಡೆದಿತ್ತು. ಈ ಸಂಸ್ಥೆಯು ಬೃಹತ ಮೊತ್ತದ ಅಕ್ರಮ ಆಸ್ತಿ ಸಂಪಾದಿಸಿರೋದು ಹಾಗೂ ವಿವಿಧ ಸ್ಥಿರಾಸ್ತಿಗಳಲ್ಲಿ ಹೂಡಿಕೆ ಮಾಡಿರೋ ಬಗ್ಗೆ ಸಾಕಷ್ಟು ದಾಖಲೆಗಳು ಹಾಗೂ ಡಿಜಿಟಲ್‌ ಸಾಕ್ಷ್ಯಗಳು ಐಟಿ ಇಲಾಖೆ ಅಧಿಕಾರಿಗಳಿಗೆ ಲಭಿಸಿರೋ ಬಗ್ಗೆ ಸಿಬಿಡಿಟಿ ಮಾಹಿತಿ ನೀಡಿದೆ. ಈ ಸಂಸ್ಥಗೆ ಸೇರಿದ  ಅಕ್ರಮ ಆಸ್ತಿಗಳನ್ನು ಸೀಜ್‌ ಮಾಡಲಾಗಿದೆ. ದಾಳಿ ಸಂದರ್ಭದಲ್ಲಿ 2.5 ಕೋಟಿ ರೂ. ಅಘೋಷಿತ ನಗದು ಹಾಗೂ 1ಕೋಟಿ ರೂ. ಮೌಲ್ಯದ ಒಡವೆಗಳನ್ನು  ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸಂಸ್ಥೆಗೆ ಸೇರಿದ 16 ಬ್ಯಾಂಕ್‌ ಲಾಕರ್‌ಗಳನ್ನು ನಿರ್ಬಂಧಿಸಲಾಗಿದೆ ಎಂದು ಸಿಬಿಡಿಟಿ ಮಾಹಿತಿ ನೀಡಿದೆ. 
 

Follow Us:
Download App:
  • android
  • ios