PM Cares Fund ಪಿಎಂ ಕೇರ್ಸ್ ಫಂಡ್‌ಗೆ 10,900 ಕೋಟಿ ರೂ ದೇಣಿಗೆ, 3976 ಕೋಟಿ ವೆಚ್ಚ!
- ಪಿಎಂ ಕೇರ್ಸ್ ಫಂಡ್ ದೇಣಿಗೆ ಮೊತ್ತವು 10,990 ಕೋಟಿಗೆ ತಲುಪಿದೆ
- 1392 ಕೋಟಿ ರು. ಅನ್ನು ಕೋವಿಡ್ ಲಸಿಕೆಗಾಗಿ ವೆಚ್ಚ
- ಒಟ್ಟು ಆದಾಯದಲ್ಲಿ 494.91 ಕೋಟಿ ರು. ವಿದೇಶಿ ದೇಣಿಗೆ
ನವದೆಹಲಿ(ಫೆ.08):: ತುರ್ತು ಸಂದರ್ಭಗಳು(emergency) ಮತ್ತು ಕೋವಿಡ್(Covid) ಸಾಂಕ್ರಾಮಿಕಕ್ಕೆ ಸಹಾಯ ಮಾಡಲು ಸ್ಥಾಪನೆ ಮಾಡಲಾದ ಪಿಎಂ ಕೇರ್ಸ್ ಫಂಡ್‌ಗೆ(PM Cares Fund) ನೀಡಲಾದ ಒಟ್ಟಾರೆ ದೇಣಿಗೆ ಮೊತ್ತವು 10,990 ಕೋಟಿಗೆ ತಲುಪಿದೆ. ಇದರಲ್ಲಿ 3,976 ಕೋಟಿ ರು.ಗಳನ್ನು ವಿವಿಧ ಯೋಜನೆಗಳಿಗೆ ವೆಚ್ಚ ಮಾಡಲಾಗಿದೆ. ಈ ಪೈಕಿ ವಲಸೆ ಕಾರ್ಮಿಕರ(Migrant Workers) ಕಲ್ಯಾಣಕ್ಕೆ 1000 ಕೋಟಿ ರು, ಕೋವಿಡ್(Covid Vaccine) ಲಸಿಕೆಗೆ 1392 ಕೋಟಿ ರು. ವೆಚ್ಚ ಮಾಡಲಾಗಿದೆ. ಒಟ್ಟು ಆದಾಯದಲ್ಲಿ 494.91 ಕೋಟಿ ರು. ವಿದೇಶಿ ದೇಣಿಗೆಯಾಗಿದ್ದರೆ, 7,183 ಕೋಟಿ ರು. ಸ್ವಯಂಪ್ರೇರಿತವಾಗಿ ಬಂದ ದೇಣಿಗೆಯಾಗಿದೆ ಎಂದು ಇತ್ತೀಚಿನ ಲೆಕ್ಕ ಪರಿಶೋಧನಾ ವರದಿ ಹೇಳಿದೆ.
ಕೋವಿಡ್‌ನಿಂದ ಅನಾಥ ಮಕ್ಕಳ ಸಹಾಯಧನಕ್ಕೆ 5491 ಅರ್ಜಿ ಸಲ್ಲಿಕೆ
ಕೋವಿಡ್-19ನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ನೆರವಾಗಲು ಆರಂಭಿಸಿದ ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಗೆ ಬಂದ 5491 ಅರ್ಜಿಗಳು ಬಂದಿವೆ. ಈ ಪೈಕಿ 3049 ಅರ್ಜಿಗಳನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಅನುಮೋದಿಸಿದ್ದು, 483 ಅರ್ಜಿಗಳು ಮಂಜೂರಾತಿ ಪಡೆಯುವುದು ಬಾಕಿಯಿದೆ ಎಂದು ತಿಳಿಸಿದೆ. ಈ ಯೋಜನೆ ಪ್ರಕಾರ ಆರೈಕೆ ಕೇಂದ್ರ ಆಶ್ರಯಿಸಿದ ಪ್ರತಿ ಮಗುವಿಗೆ ತಿಂಗಳಿಗೆ 2160 ರು ನಿರ್ವಹಣಾ ಸಹಾಯಧನ ನೀಡಲಾಗುವುದು. ಮಗು 18 ನೇ ವಯಸ್ಸನ್ನು ತಲುಪಿದಾಗ 10 ಲಕ್ಷ ರು. ಸಿಗುವ ರೀತಿಯಲ್ಲಿ ಠೇವಣಿ ಇಡಲಾಗುವುದು. 23 ವರ್ಷದವರೆಗೂ ಉನ್ನತ ಶಿಕ್ಷಣಕ್ಕಾಗಿ ಪ್ರತಿ ತಿಂಗಳು ಸಹಾಯಧನ ಒದಗಿಸಲಾಗುವುದು. 23 ವರ್ಷ ತಲುಪಿದ ನಂತರ ಠೇವಣಿ ಮೊತ್ತವನ್ನು ಒಂದೇ ಕಂತಿನಲ್ಲಿ ನೀಡಲಾಗುವುದು.
ಕೋವಿಡ್‌ನಿಂದ ಅನಾಥರಾಗಿರುವ ಮಕ್ಕಳಿಗೆ ಉಚಿತ 5 ಲಕ್ಷ ರೂ ವಿಮೆ; ಮೋದಿ ಯೋಜನೆ ಜಾರಿ!
ಆರೋಗ್ಯ ವಲಯಕ್ಕೆ . 2.23 ಲಕ್ಷ ಕೋಟಿ
ಕೊರೋನಾ ಅಲೆ ಎದುರಿಸಲು ಆಮ್ಲಜನಕ ಘಟಕಗಳ ನಿರ್ಮಾಣಕ್ಕಾಗಿ ಪಿಎಂ ಕೇರ್ಸ್ ನಿಧಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲ ರಾಜ್ಯಗಳಿಗೆ ಅನುದಾನ ಒದಗಿಸಿದ್ದು ದೇಶದ ಎಲ್ಲೆಡೆ ಆರೋಗ್ಯ ಮೂಲ ಸೌಕರ್ಯಗಳು ಅಭಿವೃದ್ಧಿಯಾಗುತ್ತಿವೆ. ಕೊರೋನಾ ಮೊದಲ ಮತ್ತು 2ನೇ ಅಲೆಯ ವೇಳೆ ಆರೋಗ್ಯ ಕ್ಷೇತ್ರಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆರೋಗ್ಯ ವಲಯಕ್ಕೆ . 2.23 ಲಕ್ಷ ಕೋಟಿ ಮೀಸಲಿಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಕೋವಿಡ್‌ನಿಂದ ತಬ್ಬಲಿಯಾದ ಮಕ್ಕಳ ಸಬಲೀಕರಣಕ್ಕೆ ಹೊಸ ಯೋಜನೆ ಘೋಷಿಸಿದ ಮೋದಿ!
ವೈದ್ಯಕೀಯ ಪದವಿ ಸೀಟುಗಳ ಸಂಖ್ಯೆ 83 ಸಾವಿರ, ಸ್ನಾತಕೋತ್ತರ ಪದವಿಗೆ 54 ಸಾವಿರಕ್ಕೆ ಹೆಚ್ಚಿಸಲಾಗಿದೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳ ಸಂಖ್ಯೆಯನ್ನು 7 ರಿಂದ 16ಕ್ಕೆ ಹೆಚ್ಚಿಸಲಾಗಿದೆ. ದಂತ ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನೂ ಕೂಡ ಹೆಚ್ಚಿಸಲಾಗಿದೆ. ಕೋವಿಡ್ ಲಸಿಕಾಕರಣ ದೇಶದಲ್ಲಿ ಪರಿಣಾಮಕಾರಿಯಾಗಿ ಸಾಗಿದೆ. ಜನತೆ ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸದೇ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
1,224 ಆಮ್ಲಜನಕ ಘಟಕಗಳ ಸ್ಥಾಪನೆ
ಪಿಎಂ ಕೇರ್ಸ್ ಫಂಡ್ ಅಡಿಯಲ್ಲಿ ಈವರೆಗೆ ದೇಶದಲ್ಲಿ 1,224 ಆಮ್ಲಜನಕ ಘಟಕಗಳನ್ನುಸ್ಥಾಪಿಸಲಾಗಿದೆ. ಇವುಗಳಲ್ಲಿ 1,100 ಘಟಕಗಳಿಂದ ಪ್ರತಿನಿತ್ಯ 1,750 ಮೆಟ್ರಿಕ್ ಟನ್ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ಹೊಸದಾಗಿ ಉತ್ತರಾಖಂಡದ ಹೃಷಿಕೇಶದಲ್ಲಿ 35 ಘಟಕಗಳನ್ನು ನಿರ್ಮಿಸಲಾಗಿದೆ.
ಕೋವಿಡ್‌ನಿಂದ ಪೋಷಕರ ಕಳೆದುಕೊಂಡ ಮಕ್ಕಳಿಗೆ ಮಾಸಿಕ 4000ರು.ನೆರವು
ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಪ್ರತಿ ತಿಂಗಳು ನೀಡಲಾಗುತ್ತಿದ್ದ 2000 ರು. ಆರ್ಥಿಕ ನೆರವನ್ನು 4000 ರು. ಗೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಕೊರೋನಾದಿಂದ ತಂದೆ-ತಾಯಿಯನ್ನು ಕಳೆದಕೊಂಡು ಅನಾಥರಾದ ಮಕ್ಕಳಿಗೆ ಪಿಎಂ ಕೇರ್ಸ್ ನಿಧಿಯಿಂದ ನೆರವು ನೀಡುವುದಾಗಿ ಕೇಂದ್ರ ಸರ್ಕಾರ ಕಳೆದ ಮೇ ನಲ್ಲಿ ಘೋಷಿಸಿತ್ತು.