ಕೋವಿಡ್‌ನಿಂದ ಅನಾಥರಾಗಿರುವ ಮಕ್ಕಳಿಗೆ ಉಚಿತ 5 ಲಕ್ಷ ರೂ ವಿಮೆ; ಮೋದಿ ಯೋಜನೆ ಜಾರಿ!

  • ಕೊರೋನಾ ಕಾರಣ ಪೋಷಕರನ್ನು ಕಳೆದುಕೊಂಡ ಮಕ್ಕಳ ಪೋಷಣೆಗೆ ನಿಂತ ಸರ್ಕಾರ
  • ಶಿಕ್ಷಣದ ನೆರವಿನಿ ಜೊತೆ ಇದೀಗ 5 ಲಕ್ಷ ರೂಪಾಯಿ ಉಚಿತ ವಿಮೆ ಘೋಷಣೆ
  • 18 ವರ್ಷದ ವರೆಗೆ ವಿಮೆ, 23 ವರ್ಷಕ್ಕೆ 10 ಲಕ್ಷ ರೂಪಾಯಿ ನೆರವು
PM Modi government provide free health insurance Rs 5 lakh to children orphaned due to covid 19 ckm

ನವದೆಹಲಿ(ಆ.05):  ಕೊರೋನಾ ವೈರಸ್ ಕಾರಣ ಅನಾಥರಾಗಿರುವ ಮಕ್ಕಳಿಗೆ ಕೇಂದ್ರ ಸರ್ಕಾರ ಹಲವು ಸೌಲಭ್ಯ ಘೋಷಿಸಿದೆ. ಇದೀಗ ಕೇಂದ್ರ ಈ ಹಿಂದೆ ಘೋಷಿಸಿದ ಯೋಜನೆಗಳು ಅನುಷ್ಠಾನಕ್ಕೆ ಬಂದಿದೆ. ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ 18 ವರ್ಷದ ವರೆಗೆ ಉಚಿತ ವಿಮೆ ಯೋಜನೆ ಜಾರಿಗೆ ತಂದಿದೆ.

ಕೋವಿಡ್‌ನಿಂದ ತಬ್ಬಲಿಯಾದ ಮಕ್ಕಳ ಸಬಲೀಕರಣಕ್ಕೆ ಹೊಸ ಯೋಜನೆ ಘೋಷಿಸಿದ ಮೋದಿ!

ಮೇ 29 ರಂದು ಪ್ರಧಾನಿ ನರೇಂದ್ರ ಮೋದಿ ಮಕ್ಕಳಿಗೆ ಪಿಎಂ ಕೇರ್ಸ್ ಫಂಡ್ ವಿನಿಯೋಗಿಸುವ ಯೋಜನೆ ಘೋಷಿಸಿದ್ದರು. ಇದೀಗ ಮೋದಿ ಘೋಷಿಸಿದ್ದ ಯೋಜನೆಗಳು ಜಾರಿಗೆ ಬಂದಿದೆ. ಈ ಕುರಿತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

 

ಕೋವಿಡ್‌ನಿಂದ ಪೋಷಕರ ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ಉಚಿತ 5 ಲಕ್ಷ ರೂಪಾಯಿ ವಿಮೆ ನೀಡಲಿದೆ. ವಿಮೆಯ ಕಂತನ್ನು ಪಿಎಂ ಕೇರ್ಸ್ ಫಂಡ್‌ನಿಂದ ಭರಿಸಲಿದೆ. ಮಕ್ಕಳಿಗೆ 18 ವರ್ಷದ ವರೆಗೆ ಈ ವಿಮೆ ಇರಲಿದೆ. ಆಯುುಷ್ಮಾನ್ ಭಾರತ್ ಯೋಜನೆಯಡಿ ಮಕ್ಕಳಿಗೆ ವಿಮೆ ಸೌಲಭ್ಯ ನೀಡಲಿದೆ. ಈ ಮೂಲಕ ಮಕ್ಕಳಿಗೆ ಸುರಕ್ಷಿತ ವಿಮೆಯನ್ನು ಸರ್ಕಾರವೇ ನೀಡಲಿದೆ.

ಕೊರೋನಾಗೆ ಬಲಿಯಾದರೆ 30 ಲಕ್ಷ ರು. ವಿಮೆ

ಇನ್ನು ಈ ಮಕ್ಕಳ ಶಿಕ್ಷಣಕ್ಕೆ ವಿಶೇಷ ಯೋಜನೆ ಘೋಷಿಸಲಾಗಿದೆ. 18 ವರ್ಷದ ವರೆಗೆ ಇದೇ ಮಕ್ಕಳಿಗೆ ಪ್ರತಿ ತಿಂಗಳು ಪರಿಹಾರ ಹಣ ನೀಡಲಾಗುತ್ತದೆ. ಇನ್ನು 23 ವರ್ಷದ ಬಳಿಕ 10 ಲಕ್ಷ ರೂಪಾಯಿ ಹಣವನ್ನು ನೀಡಲಾಗುತ್ತಿದೆ. ಈ ಎಲ್ಲಾ ಯೋಜನೆಗಳು ಜಾರಿಗೆ ಬಂದಿದೆ. 
 

Latest Videos
Follow Us:
Download App:
  • android
  • ios