Asianet Suvarna News Asianet Suvarna News

Third Party Motor Insurance ಪ್ರೀಮಿಯಂ ಹೆಚ್ಚಳಕ್ಕೆ ಕೇಂದ್ರ ಪ್ರಸ್ತಾಪ

ಥರ್ಡ್ ಪಾರ್ಟಿ ಮೋಟಾರ್ ವಿಮೆ ಪ್ರೀಮಿಯಂ

ಪ್ರೀಮಿಯಂ ಮೊತ್ತ ಏರಿಕೆಗೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಶಿಫಾರಸು

ಏಪ್ರಿಲ್ 1 ರಿಂದ ಕಾರು ಮತ್ತು ದ್ವಿಚಕ್ರ ವಾಹನಗಳ ವಿಮಾ ವೆಚ್ಚದಲ್ಲಿ ಏರಿಕೆ

Road Transport Ministry proposed increase third party motor insurance premium for various categories of vehicles san
Author
Bengaluru, First Published Mar 6, 2022, 4:45 AM IST | Last Updated Mar 6, 2022, 4:45 AM IST

ನವದೆಹಲಿ (ಮಾ.6): ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು (Road Transport Ministry) ವಿವಿಧ ವರ್ಗಗಳ ವಾಹನಗಳಿಗೆ (various categories of vehicles) ಥರ್ಡ್‌ ಪಾರ್ಟಿ ಮೋಟಾರು ವಿಮಾ ಪ್ರೀಮಿಯಂ (Third Party Motor Insurance) ಅನ್ನು ಹೆಚ್ಚಿಸಲು ಪ್ರಸ್ತಾಪ ಮಾಡಿದೆ. ಹೀಗಾಗಿ ಏಪ್ರಿಲ್‌ 1 ರಿಂದ ಕಾರು (Car) ಮತ್ತು ದ್ವಿಚಕ್ರ (Bike) ವಾಹನಗಳ ವಿಮಾ ವೆಚ್ಚದಲ್ಲಿ (premium ) ಏರಿಕೆಯಾಗುವ ಸಾಧ್ಯತೆಯಿದೆ.

ಪ್ರಸ್ತಾಪಿಸಿದ ಪರಿಷ್ಕೃತ ದರದ ಪ್ರಕಾರ 1000 ಸಿಸಿ ಸಾಮರ್ಥ್ಯದ ಖಾಸಗಿ ಕಾರುಗಳಿಗೆ 2072 ರು. ಬದಲು 2,094 ರು, 1000 ಸಿಸಿ ಯಿಂದ 1,500 ಸಿಸಿ ಖಾಸಗಿ ಕಾರುಗಳಿಗೆ 3,416 ರು. ಹಾಗೂ 1,500 ಸಿಸಿಗಿಂತ ಅಧಿಕ ಸಾಮರ್ಥ್ಯದ ಕಾರುಗಳಿಗೆ 7,897 ರು. ಪ್ರೀಮಿಯಂ ದರವನ್ನು ನಿರ್ಧರಿಸಲಾಗಿದೆ. ಅದೇ 150 ಸಿಸಿಯಿಂದ 350 ಸಿಸಿ ಸಾಮರ್ಥ್ಯದೊಳಗಿನ ದ್ವಿಚಕ್ರ ವಾಹನಗಳಿಗೆ 1,366 ರು ಹಾಗೂ 350 ಸಿಸಿಗಿಂತ ಅಧಿಕ ಸಾಮರ್ಥ್ಯದ ದ್ವಿಚಕ್ರ ವಾಹನಗಳಿಗೆ 2,804 ರು ಪ್ರೀಮಿಯಂ ದರವನ್ನು ಪ್ರಸ್ತಾಪಿಸಲಾಗಿದೆ. ಅಲ್ಲದೇ ಎಲೆಕ್ಟ್ರಿಕ್‌ ವಾಹನಗಳ (Electric vehicles ) ಮೇಲೆ ಶೇ. 15 ರಷ್ಟುರಿಯಾಯತಿ ನೀಡಲು ಪ್ರಸ್ತಾಪಿಸಲಾಗಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ವಿಳಂಬದ ನಂತರ, ಪರಿಷ್ಕೃತ ಥರ್ಡ್ ಪಾರ್ಟಿ ವಿಮಾ ಪ್ರೀಮಿಯಂ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಈ ಹಿಂದೆ, ವಿಮಾ ನಿಯಂತ್ರಕ ಐಆರ್ಡಿಎಐ (IRDAI)ನಿಂದ ಟಿಪಿ ದರಗಳನ್ನು ಸೂಚಿಸಲಾಗುತ್ತಿತ್ತು. ರಸ್ತೆ ಸಾರಿಗೆ ಸಚಿವಾಲಯವು ವಿಮಾ ನಿಯಂತ್ರಕರೊಂದಿಗೆ ಸಮಾಲೋಚಿಸಿ ಟಿಪಿ ದರಗಳನ್ನು ತಿಳಿಸಿರುವುದು ಇದೇ ಮೊದಲ ಬಾರಿಯಾಗಿದೆ.

ಸ್ಪುಟ್ನಿಕ್‌ ಲೈಟ್‌ ಬೂಸ್ಟರ್‌ ಡೋಸ್‌ ಆಗಿ ಬಳಸಲು 3ನೇ ಹಂತದ ಪರೀಕ್ಷೆಗೆ ಶಿಫಾರಸು
ನವದೆಹಲಿ:
ಒಂದೇ ಡೋಸ್‌ನ ಸ್ಪುಟ್ನಿಕ್‌ ಲೈಟ್‌ (Sputnik Lite) ಲಸಿಕೆಯನ್ನು ಬೂಸ್ಟರ್‌ ಡೋಸ್‌ ಆಗಿ ಬಳಸಲು 3ನೇ ಹಂತದ ಪರೀಕ್ಷೆಗೆ ಅನುಮತಿ ನೀಡಬೇಕು ಎಂದು ಕೇಂದ್ರ ಔಷಧ ಪ್ರಾಧಿಕಾರದ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಈ ಶಿಫಾರಸ್ಸನ್ನು ಅನುಮತಿಗಾಗಿ ಡಿಸಿಜಿಐಗೆ ಕಳುಹಿಸಲಾಗಿದೆ.

ಗುಜರಾತ್ Congress ಮುಖಂಡನ ಪುತ್ರನ ಮದುವೆ, ಮಾಂಸದೂಟ ತಿಂದ 1200 ಮಂದಿ ಆಸ್ಪತ್ರೆಗೆ ದಾಖಲು!
ಫೆ.4ರಂದು ಸ್ಪುಟ್ನಿಕ್‌ ಲಸಿಕೆಯ ತುರ್ತು ಬಳಕೆಗೆ ಡಿಸಿಜಿಐ ಅನುಮತಿ ನೀಡಿತ್ತು. ಈ ಲಸಿಕೆಯನ್ನು ಬೂಸ್ಟರ್‌ ಡೋಸ್‌ ಆಗಿ ಬಳಸಲು 3ನೇ ಹಂತದ ಪರೀಕ್ಷೆಗೆ ಅನುಮತಿ ಕೋರಿ ಎಂದು ಹೈದರಾಬಾದ್‌ನ ಡಾ.ರೆಡ್ಡೀಸ್‌ ಪ್ರಯೋಗಾಲಯ ಪ್ರಸ್ತಾವನೆ ಸಲ್ಲಿಸಿತ್ತು. ‘ತಜ್ಞರ ಸಮಿತಿ ಈ ಪ್ರಸ್ತಾವನೆಯನ್ನು ಸಂಪೂರ್ಣವಾಗಿ ವಿಮರ್ಶೆ ನಡೆಸಿದ್ದು, ಮೂರನೇ ಹಂತದ ಪರೀಕ್ಷೆಗೆ ಅನುಮತಿ ನೀಡುವಂತೆ ಡಿಸಿಜಿಐಗೆ ಶಿಫಾರಸು ಮಾಡಿದೆ’ ಎಂದು ಮೂಲಗಳು ತಿಳಿಸಿವೆ. ಸ್ಪುಟ್ನಿಕ್‌ ಲೈಟ್‌ ಲಸಿಕೆಗೆ 29 ರಾಷ್ಟ್ರಗಳು ಮಾನ್ಯತೆ ನೀಡಿವೆ.

Rahul Gandhi Taunt "ಪೆಟ್ರೋಲ್ ಟ್ಯಾಂಕ್ ಭರ್ತಿ ಮಾಡಿಕೊಳ್ಳಿ" ಚುನಾವಣೆಯ ಆಫರ್ ಕ್ಲೋಸ್ ಆಗಲಿದೆ!
ಕೋವಿಡ್‌ ಮತ್ತಷ್ಟುಇಳಿಕೆ: 5,921 ಕೇಸು, 289 ಸಾವು
ನವದೆಹಲಿ:
ದೇಶದಲ್ಲಿ ಕೋವಿಡ್‌ (Covid-19) ಪ್ರಕರಣಗಳ ಸಂಖ್ಯೆ ಮತ್ತಷ್ಟುಕಡಿಮೆಯಾಗಿದ್ದು, ಶನಿವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ 5,921 ಪ್ರಕರಣಗಳು ದಾಖಲಾಗಿವೆ. ಇದು ಎರಡೂವರೆ ತಿಂಗಳ ಕನಿಷ್ಠ ಪ್ರಕರಣವಾಗಿದೆ. ಇದೇ ಅವಧಿಯಲ್ಲಿ 289 ಸೋಂಕಿತರು ಸಾವಿಗೀಡಾಗಿದ್ದಾರೆ. ಸತತ 27 ದಿನಗಳಿಂದ ದೇಶದಲ್ಲಿ 1 ಲಕ್ಷಕ್ಕೂ ಕಡಿಮೆ ದೈನಂದಿನ ಕೋವಿಡ್‌ ಕೇಸುಗಳು ದಾಖಲಾಗುತ್ತಿದ್ದು, ಸಕ್ರಿಯ ಕೇಸುಗಳ ಸಂಖ್ಯೆ 63,878ಕ್ಕೆ ಕುಸಿದಿದೆ. ದೈನಂದಿನ ಪಾಸಿಟಿವಿಟಿ ದರವು ಶೇ. 0.63ರಷ್ಟಿದ್ದು, ವಾರದ ಪಾಸಿಟಿವಿಟಿ ದರವು 0.84ಕ್ಕೆ ಇಳಿಕೆಯಾಗಿದೆ. ಈವರೆಗೆ ದೇಶದಲ್ಲಿ 178.55 ಕೋಟಿ ಡೋಸು ಲಸಿಕೆಯನ್ನು ವಿತರಿಸಲಾಗಿದೆ.

Latest Videos
Follow Us:
Download App:
  • android
  • ios