Asianet Suvarna News Asianet Suvarna News

UP Elections: ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಜಯಂತ್ ಚೌಧರಿ, SP ಜೊತೆಗಿನ ಮೈತ್ರಿ ಕತೆ ಏನು?

* ರಂಗೇರಿದ ಉತ್ತರ ಪ್ರದೇಶ ಚುನಾವಣಾ ಕಣ

* ಚುನಾವಣಾ ದಿನಾಂಕ ಘೋಷಣೆಗೆ ಕೌಂಟ್‌ಡೌನ್

* ಚುನಾವಣೆಗೂ ಮುನ್ನ ಮಹತ್ವದ ಮಾಹಿತಿ ಬಹಿರಂಗ

RLD Chief Jayant Chaudhary Wil Not contest Uttar Pradesh Elections pod
Author
Bangalore, First Published Jan 8, 2022, 2:59 PM IST
  • Facebook
  • Twitter
  • Whatsapp

ಲಕ್ನೋ(ನ.08): ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನವೇ ಬಹುದೊಡ್ಡ ಸುದ್ದಿ ಹೊರ ಬಿದ್ದಿದೆ. ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಿಸಿರುವ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮುಖ್ಯಸ್ಥ ಜಯಂತ್ ಚೌಧರಿ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಶುಕ್ರವಾರ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ನಂತರ ಜಯಂತ್ ಚೌಧರಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (ಯುಪಿ ಚುನಾವಣೆ 2022) ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದರು. ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿರುವ ಸಮಯದಲ್ಲಿ ಜಯಂತ್ ಚೌಧರಿ ಅವರ ಈ ಘೋಷಣೆ ಬಂದಿದೆ.

ಶುಕ್ರವಾರ ನಡೆದ ಆರ್‌ಎಲ್‌ಡಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ಆರ್‌ಎಲ್‌ಡಿ ನಾಯಕರೊಬ್ಬರು, ಜಯಂತ್ ಚೌಧರಿ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಶುಕ್ರವಾರ ಪಕ್ಷದ ನಾಯಕರ ಸಮ್ಮುಖದಲ್ಲಿ ಆರ್‌ಎಲ್‌ಡಿ ಎಸ್‌ಪಿಯೊಂದಿಗೆ ತನ್ನ ಮೈತ್ರಿಯನ್ನು ಔಪಚಾರಿಕವಾಗಿ ಘೋಷಿಸಿತು. ಅದಕ್ಕೂ ಒಂದು ದಿನ ಮುಂಚಿತವಾಗಿ ಜಯಂತ್ ಚೌಧರಿ ಅವರು ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಲು ಲಖನೌಗೆ ಬಂದಿದ್ದರು. ಗೊಂಡಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಖಿಲೇಶ್ ಯಾದವ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಎರಡು ಪಕ್ಷಗಳ ನಡುವಿನ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ.

5 States Assembly Election: ಚುನಾವಣಾ ಆಯೋಗದಿಂದ ಇಂದು ದಿನಾಂಕ ಪ್ರಕಟ!

ಎಕನಾಮಿಕ್ ಟೈಮ್ಸ್ ಪ್ರಕಾರ, ಜಯಂತ್ ಚೌಧರಿ ಅವರಿಗೆ ನಿಕಟವಾಗಿರುವ ನಾಯಕರೊಬ್ಬರು ಗೌತಮ್ ಬುದ್ಧ ನಗರ, ಗಾಜಿಯಾಬಾದ್, ಮುಜಾಫರ್ ನಗರ ಮತ್ತು ಬಾಗ್‌ಪತ್ ಸೇರಿದಂತೆ ಪಶ್ಚಿಮ ಯುಪಿ ಜಿಲ್ಲೆಗಳಲ್ಲಿ 24 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ. ಇದಲ್ಲದೆ, ಎಂಟು ಎಸ್ಪಿ ನಾಯಕರು ಈ ಕ್ಷೇತ್ರದಲ್ಲಿಆರ್‌ಎಲ್‌ಡಿ ಚಿಹ್ನೆಯಲ್ಲಿ ಸ್ಪರ್ಧಿಸಲಿದ್ದಾರೆ. ಚುನಾವಣೆಗೂ ಮುನ್ನ ಪಕ್ಷವು ಆರ್‌ಎಲ್‌ಡಿ ಮಾಜಿ ಮುಖ್ಯಸ್ಥ ಅಜಿತ್ ಸಿಂಗ್ ಅವರ ಜನ್ಮ ದಿನವಾದ ಜನವರಿ 15 ರಿಂದ ಫೆಬ್ರವರಿ 12 ರವರೆಗೆ “ಗಾಂವ್-ಗಾಲಿ ದಸ್ತಕ್” ಕಾರ್ಯಕ್ರಮವನ್ನು ಪ್ರಾರಂಭಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅಖಿಲೇಶ್ ಯಾದವ್ ಯಾದವ್ ಅವರಂತೆ ಜಯಂತ್ ಚೌಧರಿ ಅವರು ಎಂದಿಗೂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಮೂಲಗಳಿಂದ ಲಭ್ಯವಾದ ಮಾಹಿತಿ ಅನ್ವಯ, ಜಯಂತ್ ಚೌಧರಿ ಅವರು ಎಸ್‌ಪಿ-ಆರ್‌ಎಲ್‌ಡಿ ಮೈತ್ರಿಕೂಟ ಅಧಿಕಾರಕ್ಕೆ ಬಂದರೂ ಸರ್ಕಾರದಲ್ಲಿ ಯಾವುದೇ ಪಾತ್ರವನ್ನು ವಹಿಸದಿರಬಹುದು, ಬದಲಿಗೆ ಅವರು ರಾಜ್ಯಸಭೆಯಲ್ಲಿ ಸ್ಥಾನ ಪಡೆಯಲು ಬಯಸುತ್ತಾರೆ. ಅದೇನೆಂದರೆ, ಜಯಂತ್ ಚೌಧರಿ ರಾಜ್ಯಸಭೆಗೆ ಹೋಗಲು ಮುಂದಾಗಿದ್ದಾರೆ. ಜಯಂತ್ ಅವರು ಗುರುವಾರ ಮಾಜಿ ಕೇಂದ್ರ ಸಚಿವ ಸೋಂಪಾಲ್ ಶಾಸ್ತ್ರಿ ಅವರೊಂದಿಗೆ ಲಖನೌಗೆ ಆಗಮಿಸಿ ಅಖಿಲೇಶ್ ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ ಎಂಬುವುದು ಉಲ್ಲೇಖನೀಯ.

UP Elections: ಗಾಡಿ, ಬ್ಯಾನರ್ ಸಮಾಜವಾದಿ ಪಕ್ಷದ್ದು, ಮತ ಮಾತ್ರ ಬಿಜೆಪಿಗೆ ಕೊಡಿ!

RLD ಚುನಾವಣಾ ಇತಿಹಾಸ

ಇನ್ನು ಮೈತ್ರಿಯ ಬಗ್ಗೆ ಹೇಳುವುದಾದರೆ, 2002 ರ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು RLD ಚುನಾವಣಾ ಕಣಕ್ಕೆ ಪ್ರವೇಶಿಸಿತ್ತು. ಈ ಸಮಯದಲ್ಲಿ, RLD 14 ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು ಎರಡು ಶೇಕಡಾ ಮತಗಳನ್ನು ಪಡೆಯಿತು. 2007 ರಲ್ಲಿ, RLD ಏಕಾಂಗಿಯಾಗಿ ಚುನಾವಣಾ ಕಣಕ್ಕಿಳಿಯಿತು. ಈ ಚುನಾವಣೆಯಲ್ಲಿ ಆರ್‌ಎಲ್‌ಡಿ 10 ಸ್ಥಾನಗಳನ್ನು ಗೆದ್ದುಕೊಂಡರೆ ಮತಗಳ ಪ್ರಮಾಣ ಎರಡರಿಂದ ನಾಲ್ಕಕ್ಕೆ ಏರಿಕೆಯಾಗಿದೆ. 2012 ರ ಚುನಾವಣೆಯಲ್ಲಿ, RLD ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕೆ ಪ್ರವೇಶಿಸಿತು. ಈ ಸಮಯದಲ್ಲಿ, ಅದು ಶೇಕಡಾ ಎರಡರಷ್ಟು ಮತಗಳನ್ನು ಪಡೆಯುವ ಮೂಲಕ ಒಂಬತ್ತು ಸ್ಥಾನಗಳನ್ನು ಗೆದ್ದಿತು. ಅದೇ ಸಮಯದಲ್ಲಿ, 2017 ರಲ್ಲಿ ಮತ್ತೊಮ್ಮೆ, RLD ಏಕಾಂಗಿಯಾಗಿ ಸ್ಪರ್ಧಿಸಿತು, ಅದರಲ್ಲಿ ಎರಡು ಶೇಕಡಾ ಮತಗಳನ್ನು ಪಡೆಯುವ ಮೂಲಕ 1 ಸ್ಥಾನವನ್ನು ಗೆದ್ದಿತು.

Follow Us:
Download App:
  • android
  • ios