Asianet Suvarna News Asianet Suvarna News

ಲುಲು ಮಾಲ್‌ ಹೊರಗಡೆ ಗಲಾಟೆ, ಹನುಮಾನ್‌ ಚಾಲೀಸಾ ಪಠಣ ಮಾಡುತ್ತಿದ್ದವರ ಬಂಧನ!

ಲಕ್ನೋದ ಲುಲು ಮಾಲ್ ಹೊರಗೆ ಜಮಾಯಿಸಿದ ಹಿಂದೂ ಮಹಾಸಭಾದ ಸದಸ್ಯರು  ಮತ್ತೊಮ್ಮೆ ಪ್ರತಿಭಟನೆ ನಡೆಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಎಲ್ಲ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನಾಕಾರರು ಹನುಮಾನ್ ಚಾಲೀಸಾ ಪಠಣ ಮಾಡಲು ಲುಲು ಮಾಲ್‌ಗೆ ಬಂದಿದ್ದರು ಎಂದು ಹೇಳಲಾಗಿದೆ.

Riot outside Lulu Mall in Lucknow 15 people arrived for Hanuman Chalisa recitation in custody san
Author
Bengaluru, First Published Jul 16, 2022, 4:00 PM IST

ಲಕ್ನೋ (ಜುಲೈ 16): ಕಳೆದ ಕೆಲವು ದಿನಗಳಿಂದ ವಿವಾದದ ಕಾರಣದಿಂದ ಸುದ್ದಿಯಲ್ಲಿರುವ ಲಕ್ನೋನಲ್ಲಿ ನೂತನವಾಗಿ ನಿರ್ಮಿಸಿರುವ ಲುಲು ಮಾಲ್‌ನಲ್ಲಿ ಶನಿವಾರ ಹನುಮಾನ್‌ ಚಾಲೀಸಾ ಪಠಣ ಮಾಡಲು ಪ್ರಯತ್ನಿಸಿದ ಹಿಂದು ಮಹಾಸಭಾದ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಾಹಿತಿ ಸಿಕ್ಕ ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹಿಂದು ಮಹಾಸಭಾದ ಸದಸ್ಯರಕೈಯಲ್ಲಿ ಕೇಸರಿ ಬಣ್ಣದ ಧ್ವಜಗಳು ಇದ್ದವು ಎಂದು ತಿಳಿಸಿದ್ದು, ಮಾಲ್‌ನ ಎದುರುಗಡೆಯೇ ಜೈ ಶ್ರೀರಾಮ್‌ ಎನ್ನವ ಘೋಷಣೆಯನ್ನೂ ಕೂಗಿದ್ದಾರೆ. ತನ್ನನ್ನು ಹಿಂದೂ ಸಂಘಟನೆ ಕಾರ್ಯಕರ್ತ ಎಂದು ಹೇಳಿಕೊಳ್ಳುವ ಆದಿತ್ಯ ಮಿಶ್ರಾ ಮತ್ತು ಅವರ ಬೆಂಬಲಿಗರು ಮಾಲ್‌ನ ಹೊರಗೆ ಪ್ರತಿಭಟನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆಯಿತು ಎಂದು ಹೇಳಲಾಗುತ್ತಿದೆ. ಸುಮಾರು 15 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಲುಲು ಮಾಲ್‌ನ ಒಳಗಡೆ ನಮಾಜ್‌ ಮಾಡಲು ಸ್ಥಳಾವಕಾಶ ಕಲ್ಪಿಸಿದ್ದಾರೆ ಅದನ್ನು ವಿರೋಧಿಸಿ ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ಹಾಗೂ ವಿರೋಧಗಳು ವ್ಯಕ್ತವಾಗುತ್ತಿದೆ.

ಮಾಲ್‌ನ ಒಳಗೆ ಹನುಮಾನ್ ಚಾಲೀಸಾ ಪಠಿಸಲು ಬಯಸಿದ್ದರು: ಮಾಹಿತಿ ಪ್ರಕಾರ, ಪ್ರತಿಭಟನಾಕಾರರು ಹನುಮಾನ್ ಚಾಲೀಸಾ (Hanuman Chalisa) ಓದಲು ಮಾಲ್ (Lulu Mall) ಒಳಗೆ ಬಂದಿದ್ದರು. ಈ ವೇಳೆ ಅವರು ಪ್ರತಿಭಟನೆಯನ್ನೂ ಆರಂಭಿಸಿದರು. ಮಾಹಿತಿ ತಿಳಿದು ಬಂದ ಪೊಲೀಸರನ್ನು ಕಂಡು ಕೆಲ ಪ್ರತಿಭಟನಾಕಾರರು ಓಡಲಾರಂಭಿಸಿದರು. ಕೆಲಕಾಲ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಕಣ್ಣಾಮುಚ್ಚಾಲೆ ಆಟ ಕೂಡ ನಡೆಯಿತು. ಇದಾದ ಬಳಿಕ ಮಾಲ್‌ನ ಸುತ್ತಲೂ ಓಡುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಹಿಡಿದು ಜೀಪ್‌ಗೆ ಹಾಕಿದ್ದಾರೆ.


ಇದಕ್ಕೂ ಮೊದಲು ಹಿಂದೂ ಮಹಾಸಭಾದ ಜನರು ಲುಲು ಮಾಲ್‌ನ ಹೊರಗೆ ಪ್ರತಿಭಟನೆ ನಡೆಸಿದ್ದರು. ಶುಕ್ರವಾರ ಸಂಜೆ 6 ಗಂಟೆಗೆ ಮಾಲ್‌ನಲ್ಲಿ ಸುಂದರಕಾಂಡ ಪಠಿಸುವುದಾಗಿ ಮಹಾಸಭಾ ವಕ್ತಾರ ಶಿಶಿರ್ ಚತುರ್ವೇದಿ (Shishir Chaturvedi) ಘೋಷಿಸಿದ್ದರು. ಅವರನ್ನು ಪೊಲೀಸರು ಗೃಹಬಂಧನದಲ್ಲಿರಿಸಿದ್ದರೂ, ಅನುಮತಿಯಿಲ್ಲದೆ ಮಾಲ್‌ನಲ್ಲಿ ಧಾರ್ಮಿಕ ಕಾರ್ಯ ಮಾಡಲು ಬಂದ 4 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಹೆಲಿಕಾಪ್ಟರ್‌ ಪತನ: ಲುಲು ಗ್ರೂಪ್ ಮುಖ್ಯಸ್ಥ ಯೂಸುಫ್ ಸೇರಿ 7 ಮಂದಿ ಪಾರು!

ಈ ವಿವಾದ ಆರಂಭವಾಗಿದ್ದು ಹೇಗೆ: ಜುಲೈ 10 ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Uttar Pradesh Chief Minister Yogi Adityanath) ಲುಲು ಮಾಲ್‌ಅನ್ನು ಉದ್ಘಾಟನೆ ಮಾಡಿದ್ದರು. ಅದಾದ ಬಳಿಕ, ಜುಲೈ 12 ರಂದು ಲುಲು ಮಾಲ್‌ನ ಕ್ಯಾಂಪಸ್‌ನಲ್ಲಿ ಕೆಲವರು ನಮಾಜ್ ನೀಡುತ್ತಿರುವ ವೀಡಿಯೊ ವೈರಲ್‌ ಆಗಿದ್ದವು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಖಿಲ ಭಾರತ ಹಿಂದೂ ಮಹಾಸಭಾ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಹಿಂದೂ ಮಹಾಸಭಾದ ರಾಷ್ಟ್ರೀಯ ವಕ್ತಾರ ಶಿಶಿರ್ ಚತುರ್ವೇದಿ ಅವರು, 'ಲುಲು ಮಾಲ್‌ನಲ್ಲಿ ಜನರು ನೆಲದ ಮೇಲೆ ಕುಳಿತು ನಮಾಜ್ ಮಾಡಿದ್ದಾರೆ. ಉತ್ತರ ಪ್ರದೇಶ ಸರ್ಕಾರ ಈಗಾಗಲೇ ಆದೇಶ ನೀಡಿರುವಂತೆ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್‌ ಮಾಡುವಂತಿಲ್ಲ ಎಂದು ಹೇಳಿದೆ. ಆದರೆ, ಲುಲು ಮಾಲ್‌ನಲ್ಲಿ ನಮಾಜ್‌ ಮಾಡಲು ಅವಕಾಶ ಮಾಡಿರುವುದು ತಪ್ಪು ಎಂದು ಹೇಳಿದ್ದರು. 

ಇದನ್ನೂ ಓದಿ: ಶ್ರೀರಂಗಪಟ್ಟಣ ಮಸೀದಿಯಲ್ಲಿ ಚಾಲೀಸಾ ಪಠಣ: ಹಿಂದು ಸಂಘಟನೆಗಳ ಪ್ರತಿಭಟನೆ ಬೆನ್ನಲ್ಲೇ ವಿಡಿಯೋ ವೈರಲ್‌

ಲುಲು ಮಾಲ್ ದೇಶದ ಅತಿ ದೊಡ್ಡ ಮಾಲ್: ಲುಲು ಮಾಲ್ ದೇಶದ ಅತಿದೊಡ್ಡ ಮಾಲ್ ಆಗಿದ್ದು, ಇದನ್ನು ಸುಶಾಂತ್ ಗಾಲ್ಫ್ ಸಿಟಿಯಲ್ಲಿ ನಿರ್ಮಿಸಲಾಗಿದೆ. ಈ ಮಾಲ್ ಅನ್ನು 2.2 ಮಿಲಿಯನ್ ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಅತ್ಯಂತ ವಿಶೇಷವಾದದ್ದು ಲುಲು ಹೈಪರ್ ಮಾರ್ಕೆಟ್. ಇದರೊಂದಿಗೆ ಹಲವು ಬ್ರಾಂಡ್‌ಗಳ ಶೋರೂಂಗಳನ್ನು ತೆರೆಯಲಾಗಿದೆ. ಮಾಲ್‌ನಲ್ಲಿ 15 ರೆಸ್ಟೋರೆಂಟ್‌ಗಳು ಮತ್ತು ಕೆಫೆಗಳಿವೆ. 25 ಬ್ರಾಂಡ್ ಔಟ್‌ ಲೆಟ್‌ಗಳು, ಫುಡ್ ಕೋರ್ಟ್ ಕೂಡ ಇದೆ, ಇದರಲ್ಲಿ 1600 ಜನರು ಒಟ್ಟಿಗೆ ಕುಳಿತುಕೊಳ್ಳಬಹುದಾಗಿದೆ.

Follow Us:
Download App:
  • android
  • ios